ಶಿಕಾರಿಪುರ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದ ಕಾರಣ ತಾಲೂಕಿನ ಶಾಸಕರ ಬಿ. ವೈ. ವಿಜೇಯೇಂದ್ರ ರವರ ಮನೆಗೆ ಬಂದ ಕೆಲವು ರೈತರು ಮೇಸ್ಕಾಂ ಇಲಾಖೆಯ ಸಮಸ್ಯೆಬಗ್ಗೆ ಅಹವಾಲು ಹೇಳಿದ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರು ಮೆಸ್ಕಾಂ ಕಚೇರಿಗೆ ದೀಡಿರ್ ಭೇಟಿ ನೀಡಿದರು.
ಟಿಸಿ ರೀಪೇರಿ ಕೇಂದ್ರ ಹಾಗೂ ಸಾಮಗ್ರಿ ಕೊಠಡಿ ವಿಕ್ಷಿಸಿ ನಂತರ ಮೆಸ್ಕಾಂ ವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಗಾಮ ಗ್ರಾಮದ ರೈತ ಬಸವರಾಜಪ್ಪ ಮಟ್ಟಿ ಎಂಬುವರ ಜಮೀನಿಗೆ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಕಾಮಗಾರಿಯನ್ನು ಕೆಲಸ ಮಾಡದೆಯೇ ಹಣ ಪಾವತಿ ಮಾಡಿಕೊಂಡ ಬಗ್ಗೆ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಕ್ಷೇತ್ರದ ರೈತರಿಗೆ ವಿತರಿಸಬೇಕಾಗಿರುವ ಅಕ್ರಮ ಸಕ್ರಮ ಯೋಜನೆಯ ವಿದ್ಯುತ್ ಸಂಪರ್ಕ, ಶೀಘ್ರ ಸಂಪರ್ಕ, ಜಿ.ಎಸ್.ಎಂ ಸೇರಿದಂತೆ ರೈತರ ವಿದ್ಯುತ್ ಸಮಸ್ಯೆಗಳ ದೂರುಗಳನ್ನು ಆದರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು ದಿನದ 24 ಗಂಟೆಯೂ ವಿದ್ಯುತ್ ಒದಗಿಸುವಂತೆ ಸೂಚಿಸಿ, ರೈತರಿಗೆ ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳು ಎದುರಾಗದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್, ಮೆಸ್ಕಾಂ ನ ಎಲ್ಲಾ ಸ್ಥರದ ಅಧಿಕಾರಿಗಳು, ಹಾಗೂ ಎಂ ಏ ಡಿ ಬಿ ಮಾಜಿ ಅಧ್ಯಕ್ಷರಾ ದ ಕೆ ಎಸ್ ಗುರುಮೂರ್ತಿ, ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಭದ್ರಪ್ರದ ಪಾಲಾಕ್ಷಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್. ಹನುಮಂತಪ್ಪ, ಮುಖಂಡರಾದ ಗಣೇಶ್ ನಾಗೆಹಳ್ಳಿ, ಬೆಣ್ಣೆ ಪ್ರವೀಣ್, ಮುಂತಾದವರು ಉಪಸ್ಥಿತರಿದ್ದರು.