ಶಿವಮೊಗ್ಗ: ಮುಂದಿನ ವರ್ಷದ ಮೇ ಅಂತ್ಯದ ಒಳಗೆ ೧೨೮೦೦ ಗ್ರಾಮೀಣ ಪ್ರದೇಶಗಳಿಗೆ ವಿದ್ಯತ್ ಸಂಪರ್ಕವನ್ನು ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರ ಸದುಪಯೋಗವನ್ನ ಗ್ರಾಮೀಣ ಜನತೆ ಪಡೆದು ಕೊಳ್ಳಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಬಿ.ಎಸ್.ಯಡ್ಡಿಯೂರಪ್ಪ ತಿಳಿಸಿದರು.
ಇಂದು ಮಂಗಳೂರು ವಿದ್ಯುತಚಕ್ತಿ ಸರಬ ರಾಜು ಕಂಪನಿ ನಿಯಮಿತ ಶಿವಮೊಗ್ಗ ವೃತ್ತದ ವತಿಯಿಂದ ತಾಲೂಕಿನ ಆಯನೂರು ಹೋಬಳಿ ತಮ್ಮಡಿ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧೀನ್‌ದಯಾಳ್ ಉಪಾಧ್ಯ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಸಂಸದ್ ಆದರ್ಶ ಗ್ರಾಮ ವಿದ್ಯ ದೀಕರಣ ಹಾಗೂ ನಿರಂತರ ಜ್ಯೋತಿ ಯೋಜ ನೆಯ ಕಾಮಗಾರಿ ಉದ್ಘಾಟನಾ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ೨೮ ಜಿಲ್ಲೆಗಳಲ್ಲಿ ಹಳ್ಳಿಗಳು ನಿರಂತರ ವಿದ್ಯತ್‌ನಿಂದ ವಂಚಿತವಾಗಿವೆ. ಅಂತಹ ಜಿಲ್ಲೆಗಳನ್ನು ಗುರುತಿಸಿ ಉತ್ತಮ ವಿದ್ಯುತ್ ಚ್ಛಕ್ತಿ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು
ಆದರ್ಶ ಗ್ರಾಮವನ್ನಾಗಿ ತೆಗೆದುಕೊಂಡಿರುವ ಇಲ್ಲಿ ೮ ಹಳ್ಳಿಗಳು ಧೀನದಯಾಳು ಉಪಾಧ್ಯ ನಿರಂತರ ವಿದ್ಯುತ್ ಚ್ಚಕ್ತಿ ಯೋಜನೆಯನ್ನು ಹಮ್ಮಿಕೊಂಡಿದೆ. ಹೀಗೆ ಕೇಂದ್ರ ಹಲವಾರು ಯೋಜನೆಯನ್ನ ರೈತರಿಗೆ ಬಡವರಿಗೆ ಹಮ್ಮಿ ಕೊಳ್ಳಲಾಗಿದೆ ಇದರ ಸದುಪಯೋಗ ವಾಗಬೇಕಿದೆ ಎಂದರು
ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಮತ್ತೆ ಎಲ್.ಇಡಿ ಮತ್ತು ಫ್ಯಾನ್ ವಿತರಣೆ ಮಾಡು ತ್ತಿದೆ. ೧೫೦ರಿಂದ ೨೦೦ರೂಗಳಿಗೆ ಎಲ್‌ಇಡಿ ಬಲ್ಪ್ ಮಾರುಕಟ್ಟೆಯಲ್ಲಿ ದೊರೆ ಯುತ್ತಿದೆ. ಆದರೆ ಕೇಂದ್ರ ಸರ್ಕಾರ ಕೇವಲ ೭೦ರೂ.ಗೆ ಈ ಬಲ್ಫ್‌ನ್ನು ನೀಡುತ್ತಿದೆ ಎಂದರು
ಹೊರ ಮಾರುಕಟ್ಟೆಯಲ್ಲಿ ಫ್ಯಾನ್ ಸಹ ೨೫೦೦ರೂ ಇದ್ದು ಇದನ್ನು ೧೨೦೦ರೂ.ಗಳಿಗೆ ನೀಡುತ್ತಿದೆ. ಎಲ್‌ಇಡಿ ಟ್ಯೂಬ್‌ಗಳು ಮಾರಕಟ್ಟೆ ಯಲ್ಲಿ ೫೦೦ರೂ. ಇದೆ ಅದನ್ನು ೨೫೦ಗೆ ನೀಡಲಾ ಗುತ್ತಿದೆ. ರೈತರು ಸಾರ್ವಜನಿಕರು ಯಾವುದೆ ಕಾರಣಕ್ಕೂ ಮದ್ಯವರ್ತಿಗಳ ಮೊರೆಹೋಗದೆ ನೇರವಾಗಿ ತಾವೆ ಖರೀದಿಸಬೇಕೆಂದು ಕರೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶಾರದಾ ಪೂರ್ಯನಾಯ್ಕ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಎಪಿಎಂಸಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ತಮ್ಮಡಿ ಹಳ್ಳಿ ನಾಗರಾಜ್ ಪವಿತ್ರ ರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು
ಮೇ ಅಂತ್ಯದೊಳಗೆ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ : ಬಿಎಸ್‌ವೈ
RELATED ARTICLES