Saturday, December 14, 2024
Google search engine
Homeಇ-ಪತ್ರಿಕೆಇಡಿ ದಾಳಿ, ಕೇಂದ್ರಕ್ಕೆ ಚಟವಾಗಿದೆ: ಮಧು ಬಂಗಾರಪ್ಪ ಪ್ರತಿಕ್ರಿಯೆ

ಇಡಿ ದಾಳಿ, ಕೇಂದ್ರಕ್ಕೆ ಚಟವಾಗಿದೆ: ಮಧು ಬಂಗಾರಪ್ಪ ಪ್ರತಿಕ್ರಿಯೆ

ಶಿವಮೊಗ್ಗ : ಕೇಂದ್ರ ಸರ್ಕಾರಕ್ಕೆ ಇಡಿ ದಾಳಿ ನಡೆಸುವುದು ಒಂದು ಚಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
 ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಯವರು ಹೋರಾಟ ಮಾಡಿದರೆ ಮಾಡಿಕೊಳ್ಳಲಿ ಆದರೆ ಕಾನೂನಿನ ದುರುಪಯೋಗವಾಗಬಾರದು. ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು. ಒಂದು ಕಾನೂನು ರೀತಿಯಲ್ಲಿ ಆದರೆ ಸರಿ, ಆದರೆ ಬೇಕೆಂದೇ ದಾಳಿ ನಡೆಸುವುದು ವಿರೋಧ ಪಕ್ಷದವರನ್ನು ಹೆದುರಿಸುವುದಕ್ಕಾಗಿ ಈ ದಾಳಿ ನಡೆಸಿದರೆ ಇದು ಕಾನೂನಿನ ದುರುಪಯೋಗ ಕೇಂದ್ರ ಸರ್ಕರಕ್ಕೆ ದಾಳಿ ನಡೆಸಿ ಹೆದರಿಸುವುದು ಒಂದು ಚಟವಾಗಿದೆ. ಆದರೆ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಗೆ ಬಹುಮತ ಇಲ್ಲದ ಕಾರಣ ಮೊದಲಿನ ಹಾಗೆ ದಾಳಿ ನಡೆಸುವುದು ಸ್ವಲ್ಪ ಕಷ್ಟವಾಗಬಹುದು ಎಂದರು.

ಅಧಿಕಾರಿಗಳ ವರ್ಗಾವಣೆ ದಂಧೆ ಇದೆ ಎಂದು ಬಸವರಾಯ ರೆಡ್ಡಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಾಗೆ ಹೇಳಿಲ್ಲ, ಅವರು ಮಾತನಾಡುವಾಗ ನಾನು ಪಕ್ಕದಲ್ಲೇ ಇದ್ದೆ. ದಂಧೆ ನಡೆದರೆ ನಿಲ್ಲಬೇಕು, ವರ್ಗಾವಣೆ ದಂಧೆಯಾಗಬಾರದು ಎಂದಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

RELATED ARTICLES
- Advertisment -
Google search engine

Most Popular

Recent Comments