Monday, November 11, 2024
Google search engine
Homeಅಂಕಣಗಳುಲೇಖನಗಳುಸಹಕಾರಿ ಬ್ಯಾಂಕುಗಳು ಜನಸ್ನೇಹಿಯಾಗಿವೆ : ಡಾ.ಆರ್.ಎಂ.ಮಂಜುನಾಥಗೌಡ

ಸಹಕಾರಿ ಬ್ಯಾಂಕುಗಳು ಜನಸ್ನೇಹಿಯಾಗಿವೆ : ಡಾ.ಆರ್.ಎಂ.ಮಂಜುನಾಥಗೌಡ

ಶಿವಮೊಗ್ಗ : ರಾಜ್ಯದ ಸಹಕಾರಿ ಬ್ಯಾಂಕು ಗಳು ಇತರ ವಾಣಿಜ್ಯ ಬ್ಯಾಂಕುಗಳಿಗಿಂತ ಆರ್ಥಿಕವಾಗಿ ಸಮರ್ಥವಾಗಿದ್ದು, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.
ಇಂದು ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳು, ಮಹಿಳಾ ವಿವಿದೋದ್ಧೇಶ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕರುಗಳಿಗಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ರೂಪಿಸಿ ಅನುಷ್ಠಾನಗೊಳಿಸುವ ಜನಪರವಾದ ಬಹುತೇಕ ಎಲ್ಲಾ ಯೋಜನೆಗಳ ಅನುಷ್ಠಾನ ಸಹಕಾರ ಬ್ಯಾಂಕುಗಳ ಮೂಲಕವೇ ನಡೆಯುತ್ತದೆ ಎಂಬುದು ಹರ್ಷದ ಸಂಗತಿ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಸರ್ಕಾರವೂ ಕೂಡ ಸಹಕಾರಿ ಕ್ಷೇತ್ರದಲ್ಲಿ ಮಹಿಳೆ ಯರಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಮತ್ತೊಂದು ರೀತಿಯ ಸಹಕಾರಿ ಆಂದೋಲನ ಆರಂಭವಾದಂತಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕೊಂದರಿಂದ ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ ೧೩೦೦ಕೋಟಿ ರೂ.ಗಳ ಠೇವಣಿ ಇರಿಸಿ ಪ್ರೋತ್ಸಾಹಿಸಿದೆ. ಅದಕ್ಕೆ ಸಹಕಾರ ಬ್ಯಾಂಕು ಖಾಸಗಿ ವಾಣಿಜ್ಯ ಬ್ಯಾಂಕುಗಳಿಗಿಂತ ಶೇ.೦.೦೫ರಷ್ಟು ಹೆಚ್ಚಿನ ಬಡ್ಡಿ ನೀಡುತ್ತದೆ. ಅದನ್ನು ರಾಜಕೀಯ ಉದ್ದೇಶಕ್ಕಾಗಿ ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದ ಅವರು, ರಾಜ್ಯದ ವಾಣಿಜ್ಯ ಬ್ಯಾಂಕುಗಳಲ್ಲಿ ೧೪.೦೦ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದ್ದು, ಆ ಪೈಕಿ ಬ್ಯಾಂಕಿಗೆ ಮರುಪಾವತಿಯಾಗದಿರುವ ಹಣ ಸುಮಾರು ೪.೬೦,೦೦೦ ಕೋಟಿಗಳಷ್ಟಿದೆ. ಇದನ್ನು ಗಮನಿಸಿದಾಗ ಸಹಕಾರ ಸಂಸ್ಥೆಗಳು ಲಾಭದಾಯಕವಾಗಿವೆ ಮಾತ್ರವಲ್ಲ ಜನಸ್ನೇಹಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಯೂನಿಯನ್ ಅಧ್ಯಕ್ಷ ಅರಕೆರೆ ಹೆಚ್.ಎಲ್.ಷಡಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ನ ಅಧ್ಯಕ್ಷೆ ಪಿ.ವೀರಮ್ಮ, ಸಹಕಾರ ಸಂಘಗಳ ಉಪ ನಿಬಂಧಕ ಜಯಣ್ಣ, ಭೂಕಾಂತ್, ಟಿ.ಎಸ್.ಮಂಜುನಾಥ್, ಸಿ.ಎಸ್.ವೀರೇಶ್, ಲಕ್ಷ್ಮಣ್, ವಾಟಗೋಡು ಸುರೇಶ್, ಹೊನ್ನಪ್ಪ, ಜಯರಾಮ್ ಗೊಂದಿ, ಉಜ್ವಲ ಮುಂತಾ ದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments