ಡಾ.ಧನಂಜಯ ಸರ್ಜಿ- 37,627
ಆಯನೂರು ಮಂಜುನಾಥ್- 13,516
ರಘುಪತಿ ಭಟ್- 7039
ಎಸ್.ಪಿ.ದಿನೇಶ್ – 2518
ಮೈಸೂರು: ಮೈಸೂರಿನಲ್ಲಿ ಗುರುವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮೊದಲನೇ ಪ್ರಾಶಸ್ತ್ಯದಲ್ಲೇ ಅಭೂತಪೂರ್ವ ಗೆಲುವು ಸಾಧಿಸಿ ವಿಧಾನ ಪರಿಷತ್ ಗೆ ಆಯ್ಕೆ ಆದ ಬಳಿಕ ಚುನಾವಣಾಧಿಕಾರಿಗಳು ಡಾ.ಧನಂಜಯ ಸರ್ಜಿ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಪತ್ನಿ ಶ್ರೀಮತಿ ನಮಿತಾ ಸರ್ಜಿ, ಸೋದರ ಹರ್ಷ ಸರ್ಜಿ, ಶ್ರೀಮತಿ ನಾಗವೇಣಿ ಸರ್ಜಿ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್.ಮಾಲತೇಶ್, ಶಿವರಾಜ್, ಜಿಲ್ಲಾ ಪ್ರಮುಖಾರಾದ ಮಧುಸೂದನ್, ದೇವರಾಜ್, ಡಾ.ಶ್ರೀನಿವಾಸ್ ರೆಡ್ಡಿ, ಎನ್.ಡಿ.ಸತೀಶ್, ವಿಕ್ರಮ್, ಧರ್ಮಪ್ರಸಾದ್, ವಿಕಾಸ್ ಯಳನೂರ್, ಸುರೇಖಾ ಮುರುಳೀಧರ್, ರಶ್ಮಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.