ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜುಲೈ 20 ಮತ್ತು 21 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಜು.೨೦ ರಂದು ಸಂಜೆ 5ಕ್ಕೆ ಸೊರಬಕ್ಕೆ ಆಗಮಿಸಲಿರುವ ಸಚಿವರು ಕಡಸೂರು, ವರದಾ ನದಿ ಚೋಳದಗುಡ್ಡೆ ಮತ್ತು ಬಂಕಸಾಣ ಹೊಳೆ ಹತ್ತಿರ ಪ್ರವಾಹ ವೀಕ್ಷಣೆ ಮಾಡುವರು. ರಾ. 9ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ಜು. 21ರಂದು ಬೆ.9ಕ್ಕೆ ತಾಳಗುಪ್ಪ ಹೋ., ಹಿರೇನೆಲ್ಲೂರು ಗ್ರಾಮದ ಮುಳಗಡೆ ಪ್ರದೇಶಕ್ಕೆ ಭೇಟಿ, ಬೆ. 9.50ಕ್ಕೆ ಸೈದೂರು ಕನ್ನಹೊಳೆ ಮುಳುಗಡೆ ಪ್ರದೇಶದ ವೀಕ್ಷಣೆ, ಬೆ.10:30ಕ್ಕೆ ಮಂಡಗಳಲೆ ಕಾಳಜಿ ಕೇಂದ್ರಕ್ಕೆ ಭೇಟಿ, ಬೆ.11.15ಕ್ಕೆ ಸಾಗರ ನಗರದಲ್ಲಿ ಮಳೆಯಿಂದ ಹಾನಿಯಾದ ಮನೆ ವೀಕ್ಷಣೆ, ಮ.12.20ಕ್ಕೆ ಮಾರುತಿಪುರ ಗ್ರಾಮದಲ್ಲಿ ಎನ್.ಹೆಚ್-766ಸಿ ರಸ್ತೆ ಹಾನಿ ವೀಕ್ಷಣೆ, ಮ.1.20ಕ್ಕೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಪತ್ರಿಕಾ ಗೋಷ್ಠಿ ನಡೆಸಲಿರುವರು.
ಮ. 3:30ಕ್ಕೆ ತೀರ್ಥಹಳ್ಳಿ ತಾಲುಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾದ ಪ್ರವೇಶ ವೀಕ್ಷಸಲಿದ್ದಾರೆ. ಸಂ. 5ಕ್ಕೆ ತೀರ್ಥಹಳ್ಳಿಯಿಂದ ರಸ್ತೆ ಮುಖಾಂತರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.,