ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಸುರಿದ ಮಳೆಯಿಂದಾಗಿ ಇಲ್ಲಿನ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ದಾಯನಾಯಕಪುರದಲ್ಲಿ ವಾಸದ ಮನೆಯೊಂದು ಕುಸಿದು ಬಿದ್ದಿದೆ.
ಇಲ್ಲಿನ ಗೋಲ್ಲರ ಬೀದಿಯ ನಿವಾಸಿ ಮಾರುತಿ ಎಂಬುವರಿಗೆ ಸೇರಿದ ವಾಸದ ಮನೆಯೂ ಮಳೆಯಿಂದ ಕುಸಿದು ಬಿದ್ದಿದ್ದು, ಆ ಮನೆಯನ್ನೇ ನಂಬಿಕೊಂಡಿದ್ದ ಕುಟುಂಬ ಬೀದಿಪಾಲಾಗಿದೆ.
ಗೋಲ್ಲರ ಬೀದಿಯ ನಿವಾಸಿ ಮಾರುತಿ ಅವರು ಸುಮಾರು 20 ವರ್ಷಗಳ ಹಿಂದೆ ಕಟ್ಟಿಕೊಂಡಿದ್ದ ಈ ಹುಲ್ಲಿನ ಮನೆಯೂ, ತುಂಬಾ ಹಳೆಯದಾಗಿತ್ತು. ಅದೇ ಕಾರಣಕ್ಕೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮೊನ್ನೆ ಈ ಮನೆಯು ಕುಸಿದು ಬಿದ್ದಿದೆ ಎಂದು ಕುಟುಂಬ ತಿಳಿಸಿದೆ.
ʼನಮಗೆ ವಾಸಕ್ಕಿ ಇದ್ದ ಏಕೈಕ ಮನೆ ಅದು. ತುಂಬಾ ವರ್ಷಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದೇವು. ಈಗ ಮಳೆಯಿಂದ ಮನೆಯು ಕುಸಿದು ಬಿದ್ದಿದೆ. ಈಗ ವಾಸಕ್ಕೂ ಮನೆ ಇಲ್ಲದಂತಾಗಿದೆʼ ಎಂದು ಯಜಮಾನ ಮಾರುತಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಮನೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.