ಪತ್ರಿಕಾಗೋಷ್ಟಿಯಲ್ಲಿ ಸಂಸ್ಥಾಪಕ ಸುರೇಂದ್ರ ಶಿವಮೊಗ್ಗ ಮಾಹಿತಿ
ಶಿವಮೊಗ್ಗ : ಕನ್ನಡ ಚಿತ್ರರಂಗದ ಕಲಾಸೇವೆಯ ಹಿತದೃಷ್ಟಿಯಿಂದ ನೂತನವಾಗಿ ಐಶ್ವರ್ಯ ಎಸ್ ಪಿ ಪೆÇ್ರಡಕ್ಷನ್ಸ್ ಅದ್ದೂರಿ ಉದ್ಘಾಟನೆ ಮತ್ತು ಶಿವಮೊಗ್ಗ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನೃತ್ಯ ಸಿರಿ -2024 ರ ಸಮಾರಂಭ ಕಾರ್ಯಕ್ರಮವನ್ನು ಡಿ.15 ರಂದು ನಗರದದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಐಶ್ವರ್ಯ ಎಸ್.ಪಿ ಪ್ರೊಡಕ್ಷನ್ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಸುರೇಂದ್ರ ಶಿವಮೊಗ್ಗ ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಸುಮಾರು 28 ವರ್ಷಗಳಿಂದ ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದು, ಕನ್ನಡ ಚಿತ್ರರಂಗದ ಪೆÇೀಷಕ ಕಲಾವಿದರು ಮತ್ತು ಹೊಸ ಕಲಾವಿದರು ಹಾಗೂ ತಂತ್ರಜ್ಞ ವಿಭಾಗದ ಗಣ್ಯರ ಸಲಹೆ ಮೇರೆಗೆ ಐಶ್ವರ್ಯ ಎಸ್ ಪಿ ಪೆÇ್ರಡಕ್ಷನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಪೆÇ್ರಡಕ್ಷನ್ಸ್ ಕೇವಲ ಚಲನಚಿತ್ರ ನಿರ್ಮಾಣ ಮಾತ್ರವಲ್ಲ, ಕಲಾವಿದರ ಭವಿಷ್ಯದ ಹಿತದೃಷ್ಟಿಯಿಂದ ಕಲಾ ಸಾಧಕನಿಗೊಂದು ಬೆಳಕು ಎಂಬ ಉಪಶಿರ್ಷಿಕೆಯೊಂದಿಗೆ ಕಲಾವಿದರ ಪೆÇೀಷಣೆ ಮತ್ತು ಬದುಕಿಗೆ ಬೆಳಕಾಗಿರಲು ಸದಾ ಶ್ರಮಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ‘ನೃತ್ಯ ಸಿರಿ-2024’ :
ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ ಗುಂಪು ನೃತ್ಯ ಮತ್ತು ಏಕ ವ್ಯಕ್ತಿ ನೃತ್ಯ ಸ್ಪರ್ಧೆಯನ್ನು ‘ನೃತ್ಯ ಸಿರಿ-2024’ ಎಂಬ ಶಿರ್ಷಿಕೆಯಡಿ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಗುಂಪು ನೃತ್ಯ ತಂಡ ರೂ.1000, ಏಕ ವ್ಯಕ್ತಿ ನೃತ್ಯ ಸ್ಪರ್ಧಿ ರೂ.500 ಪ್ರವೇಶ ಶುಲ್ಕವಿದೆ ಎಂದರು.
ನೃತ್ಯ ಸಿರಿ ಸ್ಪರ್ಧೆಯಲ್ಲಿ ವಿಜೇತ ಗುಂಪಿಗೆ ನೆನಪಿನ ಕಾಣಿಕೆಯೊಂದಿಗೆ ಪ್ರಥಮ ಬಹುಮಾನ ರೂ.20,000, ದ್ವಿತೀಯ ಬಹುಮಾನ ರೂ.15,000 ಹಾಗೂ ತೃತೀಯ ಬಹುಮಾನ ರೂ.10,000 ವಿದ್ದು, ಏಕ ವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆಯೊಂದಿಗೆ ಪ್ರಥಮ ಬಹುಮಾನ ರೂ.10,000, ದ್ವಿತೀಯ ಬಹುಮಾನ ರೂ.5,000 ಹಾಗೂ ತೃತೀಯ ಬಹುಮಾನ ರೂ.2,500 ನಗದು ಬಹುಮಾನ ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಶಿವಮೊಗ್ಗ ಜಿಲ್ಲೆಯವರಾಗಿರಬೇಕು. ವಯಸ್ಸಿನ ಮಿತಿ ಇರುವುದಿಲ್ಲ. ಖ.10 ರ ಸಂಜೆ 6.00 ಗಂಟೆಯೊಳಗೆ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸುರೇಂದ್ರ ಶಿವಮೊಗ್ಗ : 9902961495, ಅಭಿಷೇಕ್.ಕೆ.ಎನ್ : 8746886787 ಹಾಗೂ ಶಿವಕುಮಾರ್.ಸಿ.ಆರ್ : 8147159559 ನ್ನು ಸಂಪರ್ಕಿಸಬಹುದು ಎಂದರು.
ನೃತ್ಯ ಸ್ಪರ್ಧೆಯ ನಂತರ ಧಾರಾವಾಹಿ ಮತ್ತು ಚಲನಚಿತ್ರ ನಟರು, ನಟಿಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಮಟ್ಟದ ಸಾಧಕರು ಮತ್ತು ಪೋಷಕ ಕಲಾವಿದರಿಗೆ ಗೌರವ ಸನ್ಮಾನ ‘ಸಾಧನಾ ಸಿರಿ-2024’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗುಬ್ಬಿ ವೀರಣ್ಣ ಮೊಮ್ಮಗ ಗುಬ್ಬಿ ನಟರಾಜ್, ಎಸ್.ಎನ್.ಫಣೀಶ್ ಕಶ್ಯಪ್, ಶಿವಮೊಗ್ಗದ ಎಂ.ಸಮೀವುಲ್ಲಾ, ಬಸವರಾಜ್ ಕೆ.ವೈ., ಮಲ್ಲೇಶ್ ಚಿಕ್ಕಮರಸ, ಲಕ್ಷ್ಮೀ ನಾಗೇಶ್, ಜಯಮಾಲಾ, ಪ್ರೇಮಾ, ರೂಪಶ್ರೀ ಉಪಸ್ಥಿತರಿದ್ದರು.
ಸುರೇಂದ್ರ ಶಿವಮೊಗ್ಗ, ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು :
ಐಶ್ವರ್ಯ ಎಸ್ ಪಿ ಪೆÇ್ರಡಕ್ಷನ್ಸ್‍ನಲ್ಲಿ, ನುರಿತ 10 ನಿರ್ದೇಶಕರು, 13 ಸಹ ನಿರ್ದೇಶಕರು, 43 ಪೆÇೀಷಕ ಕಲಾವಿದರು, 188 ಕ್ಕೂ ಹೆಚ್ಚು ತಂತ್ರಜ್ಞರು ತಂಡ ಮತ್ತು ನನ್ನ ಅತಿ ಆಪ್ತರ ಜೊತೆಗೂಡಿ ನಮ್ಮ ಈ ಪೆÇ್ರಡಕ್ಷನ್ಸ್‍ನಿಂದ ಕಲಾ ಸಾಧಕರನ್ನು ಪೆÇೀಷಿಸಲು ಮುಂದಿನ ದಿನಗಳಲ್ಲಿ ಕಿರುಚಿತ್ರ, ಧಾರಾವಾಹಿ, ವೆಬ್ ಸೀರಿಯಸ್ ಮತ್ತು ಚಲನಚಿತ್ರಗಳನ್ನು ಆರಂಭಿಸಿ, ಕಲಾವಿದರ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಲ್ಲಲು ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಅಭಿನಯ ತರಬೇತಿ, ನೃತ್ಯ ತರಬೇತಿ ಪ್ರಾರಂಭಗೊಳಿಸಲಿದ್ದೇವೆ.
ಮೂಗು ಸುರೇಶ್, ಹಾಸ್ಯನಟ ಹಾಗೂ ಪ್ರೊಡಕ್ಷನ್‍ನ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ :
ರಂಗಭೂಮಿಯಿಂದ ಬಂದು, ರಾಷ್ಟ್ರೀಯ ನಾಟಕಗಳಲ್ಲಿ ಭಾಗವಿಸುತ್ತಾ, ಸುಮಾರು 480 ಚಲನ ಚಿತ್ರಗಳಲ್ಲಿ ಅಭಿನಯಿಸಿ, ರಂಗಭೂಮಿಯಲ್ಲಿ ಇನ್ನೂ ಸಹ ಸಕ್ರಿಯವಾಗಿದ್ದೇನೆ. ಕಲಾವಿದ ಇಂದು ಉಳಿಯಬೇಕಾಗಿದೆ. ಅದರ ಜೊತೆಗೆ ಹೊಸ ಪ್ರತಿಭೆಗಳು ಕೂಡ ಹೊರಬರಬೇಕಾಗಿದೆ. ಕಲಾವಿದ ಕೊನೆಯವರೆಗೂ ಕಲಾವಿದನಾಗಿಯೇ ಉಳಿಯುತ್ತಾನೆ. ರಂಗಭೂಮಿ ಜೀವಂತವಾಗಿರುತ್ತದೆ. ಈ ಹಿನ್ನಲೆಯಲ್ಲಿ ಒಂದು ಉತ್ತಮ ಉದ್ದೇಶ ಇಟ್ಟುಕೊಂಡು ಐಶ್ವರ್ಯ ಎಸ್.ಪಿ ಪ್ರೊಡಕ್ಷನ್ ಪ್ರತಿಭೆಗಳಿಗೆ ಅವಕಾಶ ನೀಡುತ್ತದೆ.