Thursday, December 5, 2024
Google search engine
Homeಇ-ಪತ್ರಿಕೆಹತ್ರಾಸ್ ಕಾಲ್ತುಳಿತ; ಸಾವಿನ ಸಂಖ್ಯೆ121ಕ್ಕೆ ಏರಿಕೆ; ಬಲಿಪಶುಗಳ ಗುರುತು ಪತ್ತೆ

ಹತ್ರಾಸ್ ಕಾಲ್ತುಳಿತ; ಸಾವಿನ ಸಂಖ್ಯೆ121ಕ್ಕೆ ಏರಿಕೆ; ಬಲಿಪಶುಗಳ ಗುರುತು ಪತ್ತೆ

ಲಕ್ನೋ :   ಜುಲೈ 2 ರಂದು ಹತ್ರಾಸ್ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿದೆ ಮತ್ತು ಹೆಚ್ಚಿನ ಬಲಿಪಶುಗಳನ್ನು ಗುರುತಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗದಲ್ಲಿ ಈ ಘಟನೆ ನಡೆದಿದೆ ಎಂದು ಇಟಾಹ್‌ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರ ರಾವ್ ಪೊಲೀಸ್ ಠಾಣೆ ಎಸ್‌ಎಚ್‌ಒ ಆಶಿಶ್ ಕುಮಾರ್ ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಮೃತರ ಕುಟುಂಬಗಳಿಗೆ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ₹ 50,000 ಪರಿಹಾರ ಘೋಷಿಸಿದರು. ಸತ್ಸಂಗದ ಆಯೋಜಕ ಭೋಲೆ ಬಾಬಾನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

“ಇಲ್ಲಿಯವರೆಗೆ, ಸಾವಿನ ಸಂಖ್ಯೆ 121, ಮತ್ತು ಗಾಯಗೊಂಡವರ ಸಂಖ್ಯೆ 28 ಆಗಿದ್ದು, ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ” ಎಂದು ಅಲಿಘರ್ ಕಮಿಷನರ್ ಚೈತ್ರಾ ವಿ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೃತರಲ್ಲಿ ‘ಸತ್ಸಂಗ’ಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಉಳಿದ ದೇಹಗಳನ್ನು ಗುರುತಿಸುವ ಪ್ರಯತ್ನಗಳೊಂದಿಗೆ ಹೆಚ್ಚಿನ ಬಲಿಪಶುಗಳನ್ನು ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ದೃಢಪಡಿಸಿದೆ.

RELATED ARTICLES
- Advertisment -
Google search engine

Most Popular

Recent Comments