ಬ್ಲೂ ಬಾಯ್ಸ್ ಮಡಿಲಿಗೆ ಪ್ರವೀಣ್ ಕಪ್
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿ ಯ ಫೈನಲ್ ಸಮರದಲ್ಲಿ ಎಸ್. ಕೆ. ದಯಾ ಫ್ರೆಂಡ್ಸ್ ಕ್ಲಬ್ , ರೋಚಕ ಗೆಲುವು ಸಾಧಿಸುವ ಮೂಲಕ ಪ್ರತಿಷ್ಠಿತ ʼಪ್ರವೀಣ್ ಕಪ್ ʼಅನ್ನು ತನ್ನದಾಗಿಸಿಕೊಂಡಿತು.
ಎದುರಾಳಿ ಬಲಿಷ್ಟ ಮಲ್ನಾಡ್ ಕಿಕರ್ಸ್ ಕ್ಲಬ್ ಮೇಲೆ ದಯಾ ಫ್ರೆಂಡ್ಸ್ ಅಟಗಾರರು ಟೈ ಬ್ರೇಕರ್ ನಲ್ಲಿ ೪-೧ ಗೋಲುಗಳ ಮೂಲಕ ಗೆಲುವು ಸಾಧಿಸಿದರು. ಲೀಗ್ ನಲ್ಲಿ ಸಮರ್ಥವಾಗಿಯೇ ಆಡುತ್ತಾ ಬಂದಿದ್ದ ಮಲ್ನಾಡ್ ಕಿಕರ್ಸ್ ಫೈನಲ್ ನಲ್ಲಿ ಸಮರ್ಥ ಆಟವನ್ನೇ ಪ್ರದರ್ಶಿಸಿದರು. ಟೈ ಬ್ರೇಕರ್ ನಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು. ಇದರ ಪರಿಣಾಮ ಅದು ರನ್ನರ್ಸ್ ಆಗಿ ತೃಪ್ತಿ ಪಟ್ಟುಕೊಂಡಿತು.
ಬುಧವಾರ ಸಂಜೆ ೪ ಗಂಟೆಗೆ ೪ ಗಂಟೆಗೆ ಆಟ ಶುರುವಾಯಿತು. ಫೈನಲ್ ತಲುಪಿದ್ದ ದಯಾ ಫ್ರೆಂಡ್ಸ್ ಕ್ಲಬ್ ಮತ್ತು ಮಲ್ನಾಡ್ ಕ್ಲಬ್ ಮೈದಾನಕ್ಕಿಳಿದಾಗ ಎಲ್ಲರಿಗೂ ಭಾರೀ ಕುತೂಹಲವೇ ಮನೆ ಮಾಡಿತ್ತು. ಎರಡು ಬಲಿಷ್ಟ ತಂಡಗಳೇ ಆಗಿದ್ದಲ್ಲದೆ, ಎರಡು ಕೂಡ ಅನುಭವಿ ಆಟಗಾರರನ್ನು ಹೊಂದಿದ್ದು ನೋಡುಗರಲ್ಲಿ ಭಾರೀ ಕ್ಯೂರಿಯಾಸಿಟಿ ಮೂಡಿಸಿತ್ತು. ಆಟ ಶುರುವಾದಾಗ ಎರಡು ತಂಡಗಳು ಮೈದಾನದಲ್ಲಿ ಆಕ್ರಮಣಾಕಾರಿ ಆಟ ಶುರುಮಾಡಿದವು. ಗೋಲುಗಳಿಸಲು ಎರಡು ತಂಡಗಳು ತೀವ್ರ ಸೆಣಸಾಟ ನಡೆಸಿದರೂ, ಮಧ್ಯಂತರ ಅವದಿಗೆ ಇಬ್ಬರೂ ಗೋಲು ಗಳಿಸದೆ ಸಮಬಲದಲ್ಲಿ ವಿಶ್ರಾಂತಿಗೆ ಮರಳಿದರು.
ದ್ವಿತೀಯಾರ್ಧದಲ್ಲಿ ಇಬ್ಬರೂ ತುಂಬಾನೆ ಹುರುಪಿನಿಂದ ಮೈದಾನಕ್ಕಿಳಿದರು. ಜಿನುಗು ಮಳೆಯ ನಡುವೆಯೇ ಬಿರುಸಿನ ಆಟದೊಂದಿಗೆ ಎರಡು ತಂಡದವರು ಬೆವರು ಹರಿಸಿದರೂ, ಇಬ್ಬರಿಗೂ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ, ನಾ ಮುಂದೆ, ತಾಮುಂದೆ ಎನ್ನುವಂತೆ ಇಬ್ಬರ ಸಮರ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಬಂತು. ಚೆಂಡಿನ ಮೇಲೆ ಯಾರೇ ಹಿಡಿತ ಸಾಧಿಸಿದರೂ, ಅವುಗಳನ್ನು ಗೋಲುಗಳಾಗಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಮಲ್ನಾಡ್ ಕಿಕರ್ಸ್ ಗೆ ಸಿಕ್ಕ ಕಾರ್ನರೆ ಪೆನಾಲ್ಟಿಯೂ ಕೂಡ ಗೋಲು ಗಳಿಸುವಲ್ಲಿ ಸಫಲವಾಗಲಿಲ್ಲ, ಆಟದ ಪೂರ್ಣಾವದಿಗೂ ಇಬ್ಬರೂ ಮತ್ತೆ ಗೋಲು ಇಲ್ಲದೆ ವಾಪಾಸ್ ಆದರು.
ಇದರ ಪರಿಣಾಮವಾಗಿ ಇಬ್ಬರಿಗೂ ರೆಫ್ರಿಗಳು ಟೈ ಬ್ರೇಕರ್ ಫಿಕ್ಸ್ ಮಾಡಿ, ಗೋಲು ಹೊಡೆಯುವುದಕ್ಕೆ ಅವಕಾಶ ನೀಡಿದರು. ಈ ಹಂತದಲ್ಲಿ ಮಲ್ನಾಡ್ ಕಿಕರ್ಸ್ ೧ ಗೋಲು ಗಳಿಸುವಲ್ಲಿ ಮಾತ್ರ ಸಫಲವಾಯಿತು. ಉಳಿದ ಮೂರು ಕಿಕ್ ಗಳನ್ನು ದಯಾ ಫ್ರೆಂಡ್ಸ್ ನ ಗೋಲಿ ವಿಫಲಗೊಳಿಸಿದರು. ಆದರೆ ದಯಾ ಫ್ರೆಂಡ್ಸ್ ನ ನಾಲ್ಕು ಕಿಕ್ ಗಳು ಗೋಲುಗಳಾದವು. ಇದರಿಂದ ದಯಾ ಫ್ರೆಂಡ್ಸ್ ಬಲಿಷ್ಟ ಮಲ್ನಾಡ್ ಮೇಲೆ ವಿಜಯಸಾಧಿಸಿ,೨೦೨೩-೨೪ ಸಾಲಿನ ಲೀಗ್ ನ ಪ್ರವೀಣ್ ಕಪ್ ತನ್ನದಾಗಿಸಿಕೊಂಡಿತು. ಗೆದ್ದ ಖುಷಿಯಲ್ಲಿ ದಯಾ ಫ್ರೆಂಡ್ಸ್ ತಂಡ ಸಂಭ್ರಮ ಆಚರಿಸಿತು. ಮಲ್ನಾಡ್ ಕಿಕರ್ಸ್ ರನ್ನರ್ಸ್ ಆಗಿ, ಟ್ರೋಪಿ ಸ್ವೀಕರಿಸಿತು.
ಪಂದ್ಯದ ಮುಕ್ತಾಯ ಸಮಾರಂಭಕ್ಕೆ ಅತಿಥಿಗಳಾಗಿ ಬಂದಿದ್ದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರು, ವಿಜೇತರಿಗೆ ಮತ್ತು ರನ್ನರ್ಸ್ ಗೆ ಟ್ರೋಪಿ ಮತ್ತು ಮೆಡಲ್ ವಿತರಿಸಿದರು. ಅವರೊಂದಿಗೆ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮಖಂಡ ಆರ್. ಮೋಹನ್, ಶಶಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಶ್ರೀನಾಥ್, ಗರ್ವನಿಂಗ್ ಬೋರ್ಡ್ ಮೆಂಬರ್ ಶಿವರಾಜ್, ಸಂಸ್ಥೆಯ ಉಪಾಧ್ಯಕ್ಷರಾದ ರಾಮಚಂದ್ರ ರಾವ್ ಪವಾರ್, ಜ್ಞಾನ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವಾಸ್, ಉಪ ಪ್ರಧಾನ ಕಾರ್ಯದರ್ಶಿಆರಿಫ್ ಅಹಮದ್, ಖಜಾಂಚಿ ಸೂಲಯ್ಯ, ಮ್ಯಾನಿಜಿಂಗ್ ಕಮಿಟಿ ಸದಸ್ಯರಾದ ಸೂಸೈ ನಾದನ್, ಎಲ್. ವಿಜಯ್ ಕುಮಾರ್, ಜೋಸೆಪ್ ಕಿರಣ್, ವಿನ್ಸೆಂಟ್ ರೊಡ್ರಿಗಸ್, ಮೈಕೆಲ್ ಕಿರಣ್, ಅರ್ಪುದ ಸ್ವಾಮಿ, ಕೆ. ಹರ್ಷ ಭೋವಿ, ತಂಗರಾಜ್ , ಪತ್ರಕರ್ತರಾದ ದೇಶಾದ್ರಿ ಹೊಸ್ಮನೆ, ಮಲ್ಲಪ್ಪ ಸಂಕಿನ್, ಗಾರಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.