Wednesday, September 18, 2024
Google search engine
Homeಇ-ಪತ್ರಿಕೆಹಳೇ ದ್ವೇಷಕ್ಕೆ ಅಡಿಕೆ ಸಸಿ ಹಾಗೂ ಶುಂಠಿ ಬೆಳೆ ಹಾನಿ: ಎಸ್ಪಿಗೆ ದೂರು ಸಲ್ಲಿಸಿದ  ...

ಹಳೇ ದ್ವೇಷಕ್ಕೆ ಅಡಿಕೆ ಸಸಿ ಹಾಗೂ ಶುಂಠಿ ಬೆಳೆ ಹಾನಿ: ಎಸ್ಪಿಗೆ ದೂರು ಸಲ್ಲಿಸಿದ   ಕುಟುಂಬ

ಶಿವಮೊಗ್ಗ :ಸೊರಬ ತಾಲೂಕು ನಡಹಳ್ಳಿ ಮಜರೆ ಜೇಡಿಹಳ್ಳಿ ಗ್ರಾಮದಲ್ಲಿ ಹಳೇಯ ಪ್ರಕರಣವನ್ನ ನ್ಯಾಯಾಲಯದಿಂದ ವಾಪಾಸ್ ಪಡೆಯದೆ ಇರುವ ಕಾರಣಕ್ಕಾಗಿ ಭೀಮಪ್ಪ ಎಂಬುವರಿಗೆ ಹಿಂಸೆ ನೀಡುತ್ತಿರುವವರ ವಿರುದ್ಧ ಶಿವಮೊಗ್ಗ ಎಸ್ಪಿ ಅವರಿಗೆ ಮನವಿ ನೀಡಲಾಗಿದೆ.

ಜೇಡಿಹಳ್ಳಿಯ ಸರ್ವೆನಂಬರ್ 57 ರಲ್ಲಿ 1 ಎಕರೆ 20ಗುಂಟೆ ಜಮೀನಿನಲ್ಲಿ ನೆಟ್ಟಿರುವ ಅಡಿಕೆ ಸಸಿಯನ್ನ‌ಹಳೇ ವೈಷಮ್ಯಕ್ಕೆ ಹಾಳು ಮಾಡಲಾಗಿದೆ. ಇದಕ್ಕೆ ರಾಜಪ್ಪ, ಟೇಕರ, ಶಿವಪ್ಪ, ಕುಮಾರ ಗೌಡ ಹಾಗೂ ಇತರರು ಅಡಿಕೆ ಹಾಳು ಮಾಡಿರುವುದಾಗಿ ಮನವಿಯಲ್ಲಿ ದೂರಿದ್ದಾರೆ.

ಈ ಹಿಂದೆ ಭೀಮಪ್ಪನವರ ಕುಟುಂಬದಮೇಲೆ ಆರೋಪಿಸಿರುವ ವ್ಯಕ್ತಿಗಳು ಮಾರಣಾಂತಿಕಹಲ್ಲೆ ನಡೆಸಿದ್ದಾರೆ. ಅಲ್ಲದೆ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇವರೆಲ್ಲರೂ ಸೇರಿ ಭೀಮಪ್ಪನವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು ಎಂದು ಮನವಿಯಲ್ಲಿ ದೂರಲಾಗಿದೆ.

ಮಂಗಳವಾರ ಬೆಳಿಗ್ಗೆ ಸರ್ವೆ ನಂಬರ್ 60 ರಲ್ಲಿ ಬೆಳೆದ ಶುಂಠಿ ಬೆಳೆಯನ್ನೂ ಸಹ ಹಾನಿಮಾಡಿದ್ದರು. ಕೇಳಲು ಹೋದಾಗ ಜೀವ ಬೆದರಿಕೆ ಹಾಕಿದ್ದಾರೆ.ನೆಮ್ಮದಿಯ ಬದುಕಿಗೆ ಇವರು ಬಿಡುತ್ತಿಲ್ಲ. ಇವರವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ

RELATED ARTICLES
- Advertisment -
Google search engine

Most Popular

Recent Comments