ಶಿವಮೊಗ್ಗ,: ಭದ್ರಾವತಿ ತಾಲೂಕು ಹೊಳೆ ಹೊನ್ನೂರು ಹೋಬಳಿ ಡಿ.ಬಿ. ಹಳ್ಳಿಯ ಸರ್ವೇ ನಂ ೧೭೪ ರ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ನಿರೀಕ್ಷಕ ಮಾನೋಜಿರಾವ್ ವಂಶವೃಕ್ಷವನ್ನೇ ತಿದ್ದಿ ಸುಳ್ಳು ವರದಿ ನೀಡಿದ್ದಾರೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಆರೋಪಿಸಿದಯಲ್ಲದೆ, ಜಿಲ್ಲಾಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಂದಾಯ ನಿರೀಕ್ಷಿಕ ಮನೋಜಿರಾವ್ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದೆ.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಮಾನವಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎನ್.ರಾಜು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಡಿ.ಬಿ.ಹಳ್ಳಿ ಗ್ರಾಮದ ಸರ್ವೆ ನಂ. ೭೭/೪ರ ವಿಚಾರ ಸಂಬಂಧ ವಂಶವೃಕ್ಷಕ್ಕಾಗಿ ಸಂಗಪ್ಪ ಎನ್ನುವರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಹಶೀಲ್ದಾರ್ ಮತ್ತು ಉಪತಹಶೀಲ್ದಾರ್ ಪರಿಶೀಲನೆಗೆ ಬಂದಾಗ ತಿಮ್ಮಕ್ಕ ಎಂಬ ವ್ಯಕ್ತಿ ಇಲ್ಲ ಎಂದು ಸಾರ್ವಜನಿಕರು ತಿಳಿಸಿದ್ದರು.ಆದರೂ ಕೂಡ ಈತ ತಿಮ್ಮಕ್ಕ ಎನ್ನುವವರು ಇದ್ದರು ಅವರು, ಮರಣ ಹೊಂದಿದಾರೆಂದು ಕಂದಾಯ ನಿರೀಕ್ಷಿಕ ಮಾನೋಜಿ ರಾವ್ ಸುಳ್ಳಿ ವರದಿ ನೀಡುವ ಮೂಲಕ ಜಾಗವನ್ನು ಪರಭಾರೆಗೆ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ಲಂಚ ಪಡೆದಿದ್ದಾರೆಂದು ಆರೋಪಿಸಿದರು.
ಕಂದಾಯ ನಿರೀಕ್ಷಿಕ ಮಾನೋಜಿ ರಾವ್ ಅವರು, ಗ್ರಾಮಸ್ಥರ ಹೇಳಿಕೆಯನ್ನೇ ತಿರುಚಿ ವರದಿ ಬರೆದಿದ್ದಾರಲ್ಲದೆ, ಈ ಬಗ್ಗೆ ಯಾರಾದರೂ ಕೇಳಿದರೆ ಒಂದಷ್ಟು ಗೂಂಡಾಗಳಿಂದ ಪೋನ್ ಮಾಡಿಸಿ ಹೆದರಿಸುವುದು ಇಲ್ಲವೇ, ಇನ್ನೇನೋ ಮಾಡುವುದಾಗಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಭದ್ರಾವತಿ ತಾಲ್ಲೂಕಿನಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ. ಖಾತೆ ಬದಲಾವಣೆ, ಪಿಂಚಣಿ ವರದಿ, ಪುನರ್‌ವಸತಿ ಯೋಜನೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಬಂದಾಗ ಈ ವ್ಯಕ್ತಿ ನಕಲಿ ದಾಖಲೆ ನೀಡುತ್ತಾನೆ. ಆದ್ದರಿಂದ ಇವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಕಂದಾಯ ನಿರೀಕ್ಷಕ ಮಾನೋಜಿರಾವ್ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಅದಾಗಿ ಹೆಚ್ಚು ಕಡಿಮೆ ಒಂದು ವಾರವೇ ಕಳೆಯುತ್ತಾ ಬಂದಿದೆ. ಇಷ್ಟಾಗಿಯೂ ಜಿಲ್ಲಾಡಳಿತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಆತನನ್ನು ರಕ್ಷಣೆ ಮಾಡುವುದಕ್ಕಾಗಿಯೇ ಒಂದಷ್ಟು ರಾಜಕಾರಣಿಗಳೂ ಕೂಡ ಇದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಆತನನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ, ಜೂ.೧೦ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಅಜಿತ್, ಜಮೀರ್, ಹೇಮಾವತಿ, ಯಲ್ಲಪ್ಪ, ಕುಮಾರ್, ಲೋಕೇಶ್ ಮುಂತಾದವರು ಇದ್ದರು.
…………………………….
ಕಂದಾಯ ನಿರೀಕ್ಷಕ ಮಾನೋಜಿರಾವ್ ಸಾಕಷ್ಟು ಅಕ್ರಮಗಳನ್ನು ನಡೆಸಿದ್ದಾರೆ. ಖಾತೆ ಬದಲಾವಣೆ, ಪಿಂಚಣಿ ಸೌಲಭ್ಯ ಇತ್ಯಾದಿ ಕಾರಣಕ್ಕೆ ಸಾರ್ವಜನಿಕರು ಹೋದರೆ, ಅವರಿಂದ ಹಣ ಪೀಕದೆ ಕೆಲಸ ಮಾಡಿಕೊಡುವುದಿಲ್ಲ. ಸಾಕಷ್ಟು ವರ್ಷಗಳಿಂದ ಇಲ್ಲಿಯೇ ಅವರು ಜಂಡಾ ಹೊಡೆದು ಕುಳಿತುಕೊಂಡಿರುವ ಮೂಲಕ ಕೆಲವು ರಾಜಕಾರಣಿಗಳ ಜತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗೆಯೇ ಕೆಲವು ಗೂಂಡಾಗಳನ್ನು ಸಲುಹಿಕೊಂಡಿದ್ದಾರೆ. ಇಂತಹವರು ಸರ್ಕಾರಿ ಸೇವೆಗೆ ಯಾಕೆ ಇರಬೇಕು?
-ಬಿ.ಎಲ್. ರಾಜು, ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ