ಉಡುಪಿ: ಇನ್ಸ್ಟಾಗ್ರಾಮ್‌ನಲ್ಲಿ 90 ಸಾವಿರ ಫಾಲೋವರ್ಸ್ ಹೊಂದಿದ್ದ ಉಡುಪಿಯ ಕಂಟೆಂಟ್ ಕ್ರಿಯೇಟರ್ ಅಶ್ವಿನಿ ಶೆಟ್ಟಿ ಅಗ್ನಿ ದುರಂತದಿಂದಾಗಿ ನಿಧನರಾಗಿದ್ದಾರೆ.
ಉಡುಪಿಯ ಅಂಬಲಪಾಡಿ ಗಾಂಧಿನಗರದ ಮನೆಯಲ್ಲಿ ಕಳೆದ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ತುತ್ತಾಗಿದ್ದ ಅಶ್ವಿನಿ ಶೆಟ್ಟಿ (43) ಇಂದು (ಮಂಗಳವಾರ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಳೆದ ಸೋಮವಾರ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ದುರಂತ ಸಂಭವಿಸಿತ್ತು.
@caboose_ballals ಖಾತೆಯಿಂದ ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 90 ಸಾವಿರ ಫಾಲೋವರ್ಸ್‌ಗಳನ್ನು ಅಶ್ವಿನಿ ಶೆಟ್ಟಿ ಹೊಂದಿದ್ದರು.
ಅಗ್ನಿ ದುರಂತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಉಡುಪಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ರಮಾನಂದ ಶೆಟ್ಟಿ ಸೋಮವಾರ ಬೆಳಗ್ಗೆಯೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಅಗ್ನಿ ದುರಂತದಲ್ಲಿ ಇವರ ಇಬ್ಬರು ಮಕ್ಕಳಾದ ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ರಕ್ಷಿಸಲ್ಪಟ್ಟಿದ್ದರು.