Thursday, December 5, 2024
Google search engine
Homeಅಂಕಣಗಳು‘ಕೈ’-‘ಕಮಲ’ ಪಾಳೆಯದಲ್ಲಿ ಬಿರುಸಿನ ರಾಜಕೀಯ

‘ಕೈ’-‘ಕಮಲ’ ಪಾಳೆಯದಲ್ಲಿ ಬಿರುಸಿನ ರಾಜಕೀಯ

ಶಿವಮೊಗ್ಗ : ಮೇ ತಿಂಗಳಾದ್ಯಂತ ಕೈ-ಕಮಲ ಪಾಳೆಯದಲ್ಲಿ ಬಿರುಸಿನ ರಾಜಕೀಯ ಚಟುವಟಿ ಕೆಗಳು ನಡೆಯುವುದು ಬಹುತೇಕ ಖಚಿತವಾ ಗಿದ್ದು, ಅದಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ.
ನಾಳೆ ಹಾಗೂ ನಾಡಿದ್ದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಮೇ ೮ರಂದು ರಾಯಣ್ಣ ಬ್ರಿಗೇಡ್‌ನ ರಾಜ್ಯಮಟ್ಟದ ಸಭೆ ಕೂಡಾ ನಡೆಯಲಿದೆ. ಈ ಸಭೆಯಲ್ಲಿ ತಾವು ಭಾಗವಹಿಸುತ್ತೇನೆಂದು ಕೆ.ಎಸ್.ಈಶ್ವರಪ್ಪ ಕಡ್ಡಿ ಮುರಿದಂತೆ ಹೇಳಿರುವುದು. ಬಿಜೆಪಿಯಲ್ಲಿನ ಆಂತರಿಕ ಬೇಗುದಿಯನ್ನು ಹೆಚ್ಚಿಸಿದ್ದು, ನಿರ್ಣಾಯಕ ಹಂತ ತಲುಪಿದೆ.
ಬಿಜೆಪಿ ಕಾರ್ಯಕಾರಿಣಿಯ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೊಮ್ಮೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವೆ ರಾಜೀ ಸಂಧಾನ ಸಭೆ ನಡೆಸುತ್ತಾರೋ ಅಥವಾ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರೋ ಎಂಬ ಸಂಗತಿ. ಪಕ್ಷದಲ್ಲಿನ ನಿಷ್ಠಾವಂತರಲ್ಲಿ ಆತಂಕ ಹೆಚ್ಚಿಸಿದೆ.
ಇನ್ನೊಂದೆಡೆ ಆಡಳಿತಾರೂಢ ಕಾಂಗ್ರೆಸ್ ನಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತು ವಾರಿಯಾಗಿ ಕೆ.ಸಿ.ವೇಣುಗೋಪಾಲ್ ನೇಮಕ ಗೊಂಡಿರುವುದು ನಿಷ್ಠಾವಂತ ಕಾಂಗ್ರೆಸ್ ಬಣದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಅಲ್ಲದೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ರಾಜಕೀಯ ಚಟುವಟಿಕೆಯತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ೨೦೧೮ರಲ್ಲಿ ನಡೆಯಲಿರುವ ವಿಧಾನಸಬೆ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಾರಥ್ಯ ಬದಲಾ ಯಿಸಬೇಕೆಂಬುದು ಹೈಕಮಾಂಡ್‌ನ ಪ್ರಮುಖ ಅಜೆಂಡಾ ಆಗಿದ್ದು, ಏಕಾಏಕಿ ಬದಲಿಸುವ ಬದಲು ರಾಜ್ಯ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣು ಗೋಪಾಲ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಈ ತಂಡವು ನೀಡಲಿರುವ ವರದಿ ಆಧಾರದ ಮೇಲೆ ಕೆಪಿಸಿಸಿಗೆ ನೂತನ ಸಾರಥಿಯ ಆಯ್ಕೆ ನಡೆಯಲಿದೆ.
ಮೇ.೮ರಂದು ಕೆ.ಸಿ.ವೇಣುಗೋಪಾಲ್ ನೇತೃತ್ವದ ತಂಡವು ರಾಜ್ಯಕ್ಕೆ ಆಗಮಿಸಲಿದ್ದು, ೪ ದಿನಗಳ ಕಾಲ ರಾಜ್ಯ ಕಾಂಗ್ರೆಸ್‌ನ ವಿವಿಧ ಹಂತದ ಮುಖಂಡರೊಂದಿಗೆ ಸಭೆ ನಡೆಸಿ, ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಕುರಿತು ವ್ಯಕ್ತವಾಗುವ ಅಭಿಪ್ರಾಯದಂತೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಕೆಪಿಸಿಸಿ ಸಾರಥ್ಯಕ್ಕೆ ಪ್ರಮುಖವಾಗಿ ಇಬ್ಬರ ಹೆಸರು ರೇಸ್‌ನಲ್ಲಿದೆ. ಸಂಘಟನೆ ಹಾಗೂ ಚಾಣಾಕ್ಷತೆ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಪ್ರಬಲ ಅಭ್ಯರ್ಥಿಯಾ ಗಿದ್ದು, ಸ್ವತಃ ರಾಹುಲ್‌ಗಾಂಧಿಯವರಿಗೆ ಅವರ ಬಗ್ಗ ಒಲವಿದೆ.
ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯ ವರಿಗೆ ಡಿ.ಕೆ.ಶಿವಕುಮಾರ್ ನೇಮಕದ ಬಗ್ಗೆ ವಿರೋಧವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತೂ ಬೇರೆ ಯಾರನ್ನಾದರೂ ನೇಮಕ ಮಾಡಿ ಆದರೆ ಡಿ.ಕೆ.ಶಿವಕುಮಾರ್ ಮಾತ್ರ ಬೇಡ ಎಂದು ಹೈಕಮಾಂಡ್ ಬಳಿ ಕೋರಿಕೊಂಡಿ ದ್ದಾರೆನ್ನಲಾಗಿದೆ.
ಈ ಕಾರಣದಿಂದಾಗಿ ಡಿ.ಕೆ.ಶಿವಕುಮಾರ್ ನೇಮಕ ಕಷ್ಟವಾಗಬಹುದು ಎನ್ನಲಾಗಿದೆ. ಆದರೆ ಹೈಕಮಾಂಡ್‌ಗೆ ಡಿ.ಕೆ.ಶಿವಕುಮಾರ್ ಬಗ್ಗೆ ಒಲವಿರುವ ಕಾರಣಕ್ಕಾಗಿಯೇ, ಕೆ.ಸಿ.ವೇಣು ಗೋಪಾಲ್ ನೇತೃತ್ವದ ತಂಡವನ್ನು ಅಭಿಪ್ರಾಯ ಸಂಗ್ರಹಕ್ಕಾಗಿ ಕಳುಹಿಸುತ್ತಿದೆ.
ಸಿದ್ಧರಾಮಯ್ಯನವರು ಎಂ.ಬಿ.ಪಾಟೀಲರ ಹೆಸರು ತೇಲಿಬಿಟ್ಟಿರುವುದು ಕದನ ಕುತೂಹಲ ಕೆರಳಿಸಿದೆ. ಡಾ.ಜಿ.ಪರಮೇಶ್ವರ್ ಕೂಡಾ ಮುಂದಿನ ಅವಧಿಗೂ ಮುಂದುವರೆಯುವ ಆಸೆ ಹೊಂದಿದ್ದಾರೆ. ಏನೇ ಅಭಿಪ್ರಾಯ ಸಂಗ್ರಹಿಸಿ ದರೂ ಯಾರು ಏನೇ ಹೇಳಿದರೂ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ನಿರ್ಧಾರವೇ ಅಂತಿಮವಾಗಲಿದೆ.

RELATED ARTICLES
- Advertisment -
Google search engine

Most Popular

Recent Comments