ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾನು ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದು, ಗೆಲುವು ಸಾಧಿಸಿದ್ದಕ್ಕೆ ಎಲ್ಲಾ ಮತದಾರರ ಬಾಂಧವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ಗೆದ್ದ ಅಭ್ಯರ್ಥಿ ಮಹಾಲಿಂಗ ಶಾಸ್ತ್ರಿ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧಿಸಿ ಆದ ಮೇಲೆ ಒಳಹೊಕ್ಕು ನೋಡಿದಾಗ ಇದು ಅತಿದೊಡ್ಡ ರಣರಂಗ ಎಂದು ಗೊತ್ತಾಯಿತು. ಆದರು ನಾನು ನಾಲ್ಕು ಸಹಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷನಾಗಿದ್ದೇನೆ. ಸಹಕಾರಿ ರಂಗದ ಅನುಭವವನ್ನು ಹೊಂದಿದ್ದೇನೆ. ನಮ್ಮದೇ ಸೊಸೈಟಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ಸಿಕ್ಕಿರಲಿಲ್ಲ. ಕೆಲವರು ಡಿಸಿಸಿ ಬ್ಯಾಂಕ್‌ನಿಂದ ಸೊಸೈಟಿಗಳಿಗೆ ಸಾಲ ಪಡೆಯಬೇಕಾದರೆ ಬಾರಿ ಲಾಭಿ ಮಾಡಬೇಕು ಎಂದರು.
ನಾನು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿ ಗೆದ್ದು ಏನಾದರೂ ಸಹಾಯ ಮಾಡಬೇಕು ಎಂಬ ಭಾವನೆಯಿಂದ ಸ್ಪರ್ಧಿಸಿದೆ. ನನ್ನದು ಮೂರು ತಾಲ್ಲೂಕುಗಳ ೧೩೮ ಮತದಾರರಿರುವ ಕ್ಷೇತ್ರ ೪ ಜನ ಸ್ಪರ್ಧಿಗಳಿದ್ದರು. ೪೭ ಮತಗಳು ನನಗೆ ಲಭಿಸಿದೆ. ವಿವಿಧೋದ್ದೇಶ ಸಹಕಾರಿ ಸಂಘಗಳು ಹಾಲು ಉತ್ಪಾದಕ ಮತ್ತು ಹೌಸಿಂಗ್ ಸೊಸೈಟಿ ಸಹಕಾರ ಸಂಘಗಳು ನನ್ನ ವ್ಯಾಪ್ತಿಗೆ ಬರುತ್ತದೆ. ರಾಷ್ಟ್ರಭಕ್ತರ ಬಳಗದ ನೆರವು ಕೂಡ ನನಗೆ ಲಭಿಸಿತು. ಕೆ.ಎಸ್. ಈಶ್ವರಪ್ಪ ಮತ್ತು ನನ್ನ ಸ್ನೇಹಿತರು ಬೆಂಬಲಿಸಿ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ ಎಂದರು.
ಡಿಸಿಸಿ ಬ್ಯಾಂಕ್‌ನ ಭ್ರಷ್ಟಾಚಾರ ಆರೋಪಗಳಿಗೆ ನಾನು ಈಗ ಏನು ಉತ್ತರಿಸುವುದಿಲ್ಲ. ನಾನು ಸಧ್ಯಕ್ಕೆ ಕಾಂಗ್ರೆಸ್‌ನಿಂದ ಆಯ್ಕೆಯಾದ ನಿರ್ದೇಶಕನಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ಅನ್ಯಾಯವಾದರೂ ನಾನು ಪ್ರತಿಭಟಿಸುತ್ತೇನೆ. ಭ್ರಷ್ಟಚಾರಕ್ಕೆ ಕೈಗೂಡಿಸುವುದಿಲ್ಲ ಎಂದರು.
ಮತ್ತೊಮ್ಮೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈ. ವಿಶ್ವಾಸ್ , ಓಂಕಾರ್‌ಸ್ವಾಮಿ, ಲೋಕೇಶ್ ಆರಾಧ್ಯ, ಶ್ರೀನಾಥ್, ಚಂದ್ರಪ್ಪ, ರಾಚಪ್ಪ, ಓಂಕಾರಸ್ವಾಮಿ, ನಾಗರಾಜ್ ಮತ್ತಿತರರಿದ್ದರು.