ಕೇಂದ್ರ ನಿಯಂತ್ರಣ ಹೊಂದಿರುವ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯನ್ನು 30 ರೂ. ಕಡಿಮೆ ಮಾಡಿದ್ದು, ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ಇಂಡಿಯನ್ ಆಯಿಲ್ ಅಥಾರಿಟಿ ಪ್ರಕಾರ, ಜುಲೈ 1ರಿಂದ ಕೋಲ್ಕತ್ತಾದಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ 1,756 ರೂ.ಗೆ ಇಳಿಯಲಿದೆ. ಜೂನ್‌ನಲ್ಲಿ ದೆಹಲಿಯಲ್ಲಿ 19KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,787 ರೂ.ಇತ್ತು. ಇದೀಗ 31 ರೂ. ಇಳಿಕೆಯಾಗಿದೆ. 14.2KG ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿ ಬದಲಾವಣೆಯಾಗಿಲ್ಲ.
ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ 14.2KG ಅಡುಗೆ ಅನಿಲಕ್ಕೆ 529 ಇದ್ದರೆ, ದೆಹಲಿಯಲ್ಲಿ 503 ರೂ ಇದೆ. ಮುಂಬೈನಲ್ಲಿ 5೦2.5 ಇದೆ, ಚೆನ್ನೈನಲ್ಲಿ 518.5 ರುಪಾಯಿ ಇದೆ. ಕರ್ನಾಟಕದಲ್ಲಿ 14.5KG ಗೃಹಬಳಕೆಯ ಸಿಲಿಂಡರ್ ಬೆಲೆ 905.5 ರೂ. ಇದ್ದರೆ, ವಾಣಿಜ್ಯ ಬಳಕೆಯ 14.5KGಯ ಸಿಲಿಂಡರ್ ಬೆಲೆ 1,813 ರೂ. ಇದೆ.
ಕೇಂದ್ರ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ), ಭರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ(ಬಿಪಿಸಿಎಲ್) ಪ್ರತಿ ತಿಂಗಳು ಅಂತಾರಾಷ್ಟ್ರೀಯ ತೈಲ ಬೆಲೆ ಹಾಗೂ ವಿದೇಶಿ ವಿನಿಮಯ ದರಗಳ ಬೆಲೆಗಳ ಸರಾಸರಿ ಆಧಾರದ ಮೇಲೆ ಪ್ರತಿ ತಿಂಗಳು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕೃತಗೊಳಿಸುತ್ತವೆ.