Thursday, December 5, 2024
Google search engine
Homeಇ-ಪತ್ರಿಕೆಶಾಲಾ ವಾಹನದಲ್ಲಿ ಮಕ್ಕಳು ಅಸನಗಳಿಗಿಂತ ಅಧಿಕವಾಗದಂತೆ ಖಡಕ್ ಸೂಚನೆ

ಶಾಲಾ ವಾಹನದಲ್ಲಿ ಮಕ್ಕಳು ಅಸನಗಳಿಗಿಂತ ಅಧಿಕವಾಗದಂತೆ ಖಡಕ್ ಸೂಚನೆ

ಶಿವಮೊಗ್ಗ:  ಇಂದು ಬೆಳಗ್ಗೆ ಶಿವಮೊಗ್ಗ ಸಂಚಾರಿ ವೃತ್ತದ ಲತಾ ಬಿ. ಕೆ. ಯವರು ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ,  ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ ದಾಖಲಾತಿಗಳು ಮತ್ತು ಲಭ್ಯವಿರುವ ಆಸನಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೂರಿಸಿಕೊಂಡು ಹೋದಗಂತೆ  ಸೂಚನೆ ನೀಡಿದರು.

ನೋಂದಣಿ ಪ್ರಮಾಣ ಪತ್ರ, ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಚಾಲನಾ ಪರವಾನಿಗೆ, ಬ್ಯಾಡ್ಜ್ ಹಾಗೂ ಇತರ ದಾಖಲಾತಿಗಳನ್ನು ಮತ್ತು  ವಾಹನದಲ್ಲಿ ಪ್ರಥಮಾ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಯಿತು.

ನಂತರ ಚಾಲಕರುಗಳಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ, ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡದೇ ಕಡ್ಡಾಯವಾಗಿ ವೇಗದ ಮಿತಿಯಲ್ಲಿಯೇ ವಾಹನಗಳನ್ನು ಚಾಲನೆ ಮಾಡುವಂತೆ, ಚಾಲನೆಯ ವೇಳೆ ಮಧ್ಯಪಾನ ಮಾಡಿ ವಾಹನ ಚಾಲಿಯಿಸದಂತೆ ಮತ್ತು ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಬಳಕೆ ಮಾಡದಂತೆ  ಸೂಚನೆಗಳನ್ನು ನೀಡಿದರು.

RELATED ARTICLES
- Advertisment -
Google search engine

Most Popular

Recent Comments