ಶಿವಮೊಗ್ಗ : ‘ಚೆಫ್ ಚಿದಂಬರ’ ಸಿನಿಮಾವು ಜೂ.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾವು ಒಂದು ವಿನೂತನ ಮತ್ತು ವಿಶಿಷ್ಟವಾದ ಪ್ರಯತ್ನವಾಗಿದೆ ಎಂದು ಚಿತ್ರದ ನಾಯಕ ನಟ ಅನಿರುದ್ಧ ಹೇಳಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚೆಫ್ ಚಿದಂಬರ ಸಿನಿಮಾ ರೂಪ.ಡಿ.ಎನ್ ನಿರ್ಮಾಣ ಮಾಡಿರುವ ಎಂ.ಆನಂದರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾವಾಗಿದೆ. ಈ ಚಿತ್ರವು ಕೊಲೆಗಳ ಸುತ್ತ ಇರುವ ಚಿತ್ರವಾಗಿದರೂ ಸಹ ಈ ಚಿತ್ರದಲ್ಲಿ ಕೊಲೆ, ರಹಸ್ಯ, ಹಾಸ್ಯದ ಸುತ್ತ ಇರುವ ಭಾವನೆಗಳನ್ನು ಬಿಂಬಿಸುವ ಸಂಪೂರ್ಣ ಮನರಂಜನೆ ನೀಡಿರುವ ಚಿತ್ರವಾಗಿದ್ದು, ಪೂರ್ಣ ಪ್ರಮಾಣದ ಇಡೀ ಕುಟುಂಬ ಕುಳಿತು ನೋಡುವಂತಹ ಸಿನಿಮಾ. ಸಾಹಸ, ನಾಟ್ಯ, ಸಂಗೀತ, ಸಾಹಿತ್ಯವನ್ನು ಹೊಂದಿದೆ ಎಂದರು.
ಇದು ನನ್ನ 24 ನೇ ಚಿತ್ರವಾಗಿದೆ. ಈ ಚಿತ್ರವು ಎಲ್ಲಾ ಅಂಶಗಳನ್ನೂ ಒಳಗೊಂಡ ಮನರಂಜನೆಯ ಚಿತ್ರವಾಗಿದೆ. ಕುಟುಂಬ ಸಮೇತ ಹೋಗಿ ಚಿತ್ರವನ್ನು ವೀಕ್ಷಿಸಬಹುದು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಿಧಿಸುಬ್ಬಯ್ಯ ಹಾಗೂ ರೆಚಲ್ ಡೇವಿಡ್ ನಟಿಸಿದ್ದಾರೆ. ರೆಚಲ್ ಡೇವಿಡ್ ಅವರ ಎರಡನೇ ಸಿನಿಮಾ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ರೂಪ.ಡಿ.ಎನ್., ಶ್ರೀಗಣೇಶ್, ಮಾಧವಿ ಪರಶುರಾಮ್ ಇದ್ದರು.