ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರ ಇನ್ನೂ ಒಂದು ಲಕ್ಷ ಮತಗಳ ಎಣಿಕೆ ಬಾಕಿ ಇರುವಾಗಲೇ 2,24,404 ಲಕ್ಷ ಲೀಡ್ ಪಡೆದು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿದರು. ಇದು ಮಹಿಳಾ ಮತ್ತು ಯುವಶಕ್ತಿಯ ಗೆಲುವಾಗಿದೆ. ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ನಮ್ಮ ಕುಟುಂಬದ ಬಗ್ಗೆ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದರು. ದ್ವೇಷದ ಅಪಪ್ರಚಾರ ಮಾಡಿದವರಿಗೆ ಯಾವ ಜಾಗ ತೋರಿಸಬೇಕೋ ಅದನ್ನು ಜನ ತೋರಿಸಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪನವರಿಗೆ ಬಿವೈಆರ್ ಟಾಂಗ್ ಕೊಟ್ಟರು.
ಜನರ ಅಪೇಕ್ಷೆ ಮೇರೆಗೆ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಮುಂದುವರೆಸುತ್ತೇನೆ. ಅಣ್ಣಾಮಲೈ ಸೋತಿರಬಹುದು. ತಮಿಳುನಾಡಿನಲ್ಲಿ ಉತ್ತಮ ಜನಾಭಿಪ್ರಾಯ ಮೂಡಿಸಿದ್ದಾರೆ. ಶಿವಮೊಗ್ಗಕ್ಕೂ ಬಂದು ನಮ್ಮ ಗೆಲುವಿಗೆ ಶಕ್ತಿ ತುಂಬಿದ್ದಾರೆ. ನನಗೆ ಮತ ಹಾಕಲು ಯುವಕರು ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಬೆಂಬಲ ಕೂಡ ನನ್ನ ಗೆಲುವಿಗೆ ಕಾರಣವಾಗಿದೆ ಎಂದರು.
ದೇವರು ಮೆಚ್ಚುವ ರೀತಿಯಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿದೆ. ಶಿವಮೊಗ್ಗ ನಗರದಿಂದ 50 ಸಾವಿರ, ಸೊರಬದಿಂದ 20 ಸಾವಿರ, ಸಾಗರ 20, ಶಿಕಾರಿಪುರ 12 ಸಾವಿರ, ಶಿವಮೊಗ್ಗ ಗ್ರಾಮಾಂತರ 30 ಸಾವಿರ, ತೀರ್ಥಹಳ್ಳಿ 24 ಸಾವಿರ, ಬೈಂದೂರು 51 ಸಾವಿರ, ಭದ್ರಾವತಿಯಲ್ಲಿ 6 ಸಾವಿರ ಮತಗಳ ಅಂತರದ ಮುನ್ನಡೆ ದೊರೆತಿದೆ. ಇನ್ನೂ ಒಂದು ಲಕ್ಷದ ಮತಗಳು ಬಾಕಿ ಉಳಿದಿದೆ ಎಂದರು.
ಇಲ್ಲಿಂದ ಜೆಡಿಎಸ್ ಕಚೇರಿಗೆ ತೆರಳುವುದಾಗಿ ಹೇಳಿದ ರಾಘವೇಂದ್ರರಿಗೆ ಬಿಜೆಪಿಯ ಕಚೇರಿ ಬಳಿ ಡೊಳ್ಳು ಡಕ್ಕೆ ಭಾಜಭಜಂತ್ರಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪ್ರಧಾನಿ ಮೋದಿ ಕಟೌಟ್‍ಗೆ ಹಾಲಿನ ಅಭಿμÉೀಕ ಮಾಡಲಾಯಿತು.