Thursday, December 5, 2024
Google search engine
Homeಅಂಕಣಗಳುಲೇಖನಗಳುರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಕೆ.ಎಸ್.ಈಶ್ವರಪ್ಪ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಶಿವಮೊಗ್ಗ ರಾಜ ಕೀಯ ಹಣಾಹಣಿ ಪೈಪೋಟಿ, ಭರ್ಜರಿ ಪ್ರಚಾರ ಭರಾಟೆ ಇಂದಿ ನಿಂದ ಆರಂಭಗೊಂಡಂತಿದೆ. ಭಾರ ತೀಯ ಜನತಾ ಪಕ್ಷದ ಶಿವಮೊಗ್ಗ ಅಭ್ಯರ್ಥಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಇಂದು ಸುಮಾರು ನಗರದ ೧೮ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಡಿಯಿಟ್ಟರು.
ಪತ್ನಿ ಜಯಲಕ್ಷ್ಮೀ ಹಾಗೂ ಕುಟುಂಬ ವರ್ಗದ ಜೊತೆ ಹಾಗೂ ಪಕ್ಷದ ಅಪಾರ ಮುಖಂಡರು, ಕಾರ್ಯಕರ್ತರ ಜೊತೆ ಇಂದು ಬೆಳಗ್ಗೆ ೭ಗಂಟೆಗೆ ರವೀಂದ್ರ ನಗರದ ಬಲಮುರಿ ಗಣಪತಿ ದೇವಾಲ ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಂದಿನ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ತದ ನಂತರ ವಿನೋಬ ನಗರದ ಶಿವಾಲಯದಲ್ಲಿ ಹಾಗೂ ಶರಾವತಿ ನಗರದ ಶನೈಶ್ಚರ ದೇವ ಸ್ಥಾನ ಸೇರಿದಂತೆ ನಗರದ ಪ್ರತಿ ವಾರ್ಡ್‌ಗಳ ಎಲ್ಲಾ ದೇವಾಲಯ ಗಳಲ್ಲಿ ಪೂಜೆ ಸಲ್ಲಿಸುವ ನಿಮಿತ್ತ ಇಂದು ೧೮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಗಣಪತಿ ದೇವಾಲಯದ ಪೂಜೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು ಭಾರತೀಯ ಜನತಾ ಪಕ್ಷ ಧರ್ಮವನ್ನು ರಕ್ಷಿಸುತ್ತಿದೆ. ಹಾಗೆಯೇ ಗೌರವಿಸುತ್ತದೆ. ಅಂತೆಯೇ ದೇವಾ ಲಯಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಗೋ ಮಾತೆಗಳನ್ನು ರಕ್ಷಿಸುವ ಹೊಣೆಗಾರಿಕೆಯ ಜೊತೆಗೆ ಹೆಣ್ಣು ಮಕ್ಕಳ ರಕ್ಷಣೆಯ ಮುಖ್ಯ ಧ್ಯೇಯ ವನ್ನಿಟ್ಟುಕೊಂಡು ಈ ಭಾರಿಯ ಚುನಾ ವಣೆಯನ್ನು ಎದುರಿಸಲಾಗುತ್ತದೆ ಎಂದರು.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆ ಯುವುದು ಖಚಿತ. ಯಡಿಯೂರಪ್ಪ ಮುಖ್ಯಮಂತ್ರಿಯಾ ಗುತ್ತಾರೆ. ಇದರ ಬಗ್ಗೆ ಅನುಮಾನ ಬೇಡ. ಮತ ದಾರರು ನಮ್ಮಜೊತೆ ಇದ್ದಾರೆ. ದೇಶದ ೨೨ನೇ ರಾಜ್ಯ ಕರ್ನಾಟಕ ಕಾಂಗ್ರೆಸ್ ಮುಕ್ತ ವಾಗಲಿದೆ ಎಂದರು.
೧೯ರಂದು ನಾಮಪತ್ರ ಸಲ್ಲಿಕೆ : ಬರುವ ೧೯ರಂದು ಬಿಜೆಪಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಲಾಗು ವುದು. ಇದಕ್ಕೆ ಸಕಲ ತಯಾರಿಗಳು ನಡೆದಿವೆ ಎಂದರು.

RELATED ARTICLES
- Advertisment -
Google search engine

Most Popular

Recent Comments