Thursday, December 5, 2024
Google search engine
Homeಇ-ಪತ್ರಿಕೆರಾಜ್ಯಪ್ರತಿಭಟನೆ ವೇಳೆಯೇ ಕುಸಿದು ಬಿದ್ದು ಎಚ್ಚರ ತಪ್ಪಿದ ಭಾನುಪ್ರಕಾಶ್‌,ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ನಿಧನ

ಪ್ರತಿಭಟನೆ ವೇಳೆಯೇ ಕುಸಿದು ಬಿದ್ದು ಎಚ್ಚರ ತಪ್ಪಿದ ಭಾನುಪ್ರಕಾಶ್‌,ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ನಿಧನ

ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಭಾನು ಪ್ರಕಾಶ್‌ ನಿಧನರಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ದ ಬಿಜೆಪಿ ಸೋಮವಾರ ನಗರದ ಗೋಪಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದು ಎಚ್ಚರ ತಪ್ಪಿದ ಅವರನ್ನು, ತಕ್ಷಣವೇ ನಗರದ ಮ್ಯಾಕ್ಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ನೀಡುವ ಮುನ್ನವೇ ಅವರು ಕೊನೆಯುಸಿರೆಳಿದಿದ್ದರು.

ಈ ಘಟನೆಯಿಂದ ಬಿಜೆಪಿ ನಾಯಕರು, ಕಾರ್ಯಕರ್ತರು ದಿಗ್ಬ್ರಾಂತರಾದರು. ಭಾಷಣ ಮಾಡುವ ವೇಳೆ ತೀವ್ರ ಹೃದಯಘಾತಕ್ಕೆ ಒಳಗಾಗಿಯೇ ಅವರು ನಿಧನರಾಗಿರುವ ಸಾಧ್ಯತೆಗಳಿವೆ. ಈವರೆಗೂ ಖಚಿತವಾಗಿ ಹೃದಯಘಾತ ಎನ್ನುವ ಬಗ್ಗೆ ಮಾಹಿತಿ ಇಲ್ಲವಾದರೂ, ಅದರಿಂದಲೇ ಅವರು ನಿಧನರಾಗಿರುವ ಸಾಧ್ಯತೆಗಳಿವೆ.  ಪ್ರತಿಭಟನೆಯಲ್ಲಿ ಶಾಸಕ ಎಸ್.‌ ಎನ್.‌ ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯ ಡಿ. ಎಸ್.‌ ಅರುಣ್‌ ಸೇರಿದಂತೆ ಹಲವುಮಂದಿ ಮುಖಂಡರು ಹಾಜರಿದ್ದರು. ಅವರೆಲ್ಲರೂ ತಕ್ಷಣವೇ ಭಾನುಪ್ರಕಾಶ್‌ ಆವರನ್ನು ಆಸ್ಪತ್ರೆಗೆ ಕರೆದೋಯ್ದರು. ಆದರೆ ಅಷ್ಟರಲ್ಲಿಯೇ ಭಾನುಪ್ರಕಾಶ್‌ ಕೊನೆಯುಸಿರೆಳೆದಿದ್ದರು.

ಈ ಘಟನೆಯಿಂದ ವಿಚಲಿತರಾದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಆಸ್ಪತ್ರೆ ಎದುರೇ ಅಳ ತೊಡಗಿದರು. ಒಂದು ಕ್ಷಣ ಏನಾಯಿತು ಎನ್ನುವುದೆ ದಿಕ್ಕು ತೋಚದಂತಾಗಿ ಕಕ್ಕಾಬಿಕ್ಕಿಯಾದರು, ದುಃಖದ ಕಟ್ಟೆ ಯೊಡೆದು ಅಕ್ರಂದನ ಮುಗಿಲು ಮುಟ್ಟಿತ್ತು.

ಮೂಲತಃ ಗಾಜನೂರಿನವರಾದ ಭಾನುಪ್ರಕಾಶ್‌ ಆವರು ಎಸ್‌ ಎಸ್‌ ಮೂಲಕವೇ ಬಿಜೆಪಿಗೆ ಬಂದಿದ್ದ ಭಾನುಪ್ರಕಾಶ್‌, ಸಂಘ ಪರಿವಾದ ಪ್ರಖರ ಪ್ರತಿಪಾದಕರು ಆಗಿದ್ದರು. ಆ ಮೂಲಕವೇ ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ಆಲಂಕರಿಸಿದ್ದರು. ಜಿಲ್ಲಾ ಪಂಚಾಯತ್‌ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ವಿಧಾನ ಪರಿಷತ್‌ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಆರ್‌ ಎಸ್‌ ಎಸ್‌ ನ ಪ್ರಖರ ಕಾರ್ಯಕರ್ತರಾಗಿ ಅವರು ಸಂಘವನ್ನು ಕಟ್ಟುವಲ್ಲಿ, ಪಕ್ಷವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments