ಭದ್ರಾವತಿ: ಮಾಲೀಕ ಮಲ್ಲೇಶಪ್ಪನ ವಾಣಿಜ್ಯ ಮಳಿಗೆಯಲ್ಲಿ ಆಭರಣ ಹಾಗೂ ಪೈಪ್ ಎರಡು ಅಂಗಡಿಗಳ ಮಳಿಗೆಗಳಿಗೆ ಶನಿವಾರ ರಾತ್ರಿ ಕಳ್ಳರು ಕನ್ನ ಹಾಕಿ ಆಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಚಿತ್ರದುರ್ಗ- ಶಿವಮೊಗ್ಗ ರಾಷ್ಟಿಯ ಹೆದ್ದಾರಿಯ ಕೆಕೆ ರಸ್ತೆ ತಿರುವಿನಲ್ಲಿರುವ ರೇಣುಕಾಂಬ ಎಲೆಕ್ಟ್ರಿಕ್ ಅಂಗಡಿಯ ಹಿಂಭಾಗದ ರೋಲಿಂಗ್ ಷಟರ್ ನ್ನು ಮುರಿದು ಒಳ ನುಗ್ಗಿ ವಿದ್ಯುತ್ ಉಪಕರಣ ಅಂಗಡಿಯಲ್ಲಿಟ್ಟಿದ 5 ಲಕ್ಷ ನಗದು ದೋಚಿದ್ದಾರೆ.
ವಿದ್ಯುತ್ ಉಪಕರಣ ಮಾರಾಟದ ಅಂಗಡಿಯ ಶೌಚಾಲಯದೊಳಗಿಂದ ಪಕ್ಕದ ಪ್ರಕಾಶ್ ಆಭರಣದ ಅಂಗಡಿಯ ಗೋಡೆ ಕನ್ನ ಕೊರೆದು ಹಾಗೂ ಗೋಡೆ ಒಡೆದು ಬಂಗಾರದ ಅಂಗಡಿಗೆ ಒಳ ನುಗ್ಗಿ 150 ಗ್ರಾಂ ವಿವಿಧ ಬಂಗಾರದ ಆಭರಣಗಳು, ವಜ್ರದ ಒಡವೆಗಳು ಸೇರಿದಂತೆ 5 ಕೆಜೆ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಬಂಗಾರದ ಅಂಗಡಿಯಲ್ಲಿ ಕಳ್ಳತನವಾಗಿರುವ ಸ್ವತ್ತುಗಳ ಅಂದಾಜು ಮೌಲ್ಯ 18 ವರೆ ಲಕ್ಷ ಎಂದು ಅಂದಾಜಿಸಲಾಗಿದೆ ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.