Thursday, December 5, 2024
Google search engine
Homeಅಂಕಣಗಳುಲೇಖನಗಳುವಿಧಾನಸಭಾ ಚುನಾವಣೆ ಹಿನ್ನೆಲೆ-ಮತದಾರರ ಅನುಕೂಲಕ್ಕಾಗಿ ಬಿಜೆಪಿಯಿಂದ ಕಾಲ್ ಸೆಂಟರ್ ಆರಂಭ

ವಿಧಾನಸಭಾ ಚುನಾವಣೆ ಹಿನ್ನೆಲೆ-ಮತದಾರರ ಅನುಕೂಲಕ್ಕಾಗಿ ಬಿಜೆಪಿಯಿಂದ ಕಾಲ್ ಸೆಂಟರ್ ಆರಂಭ

ಶಿವಮೊಗ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ನಗರದ ಶ್ರೀವತ್ಸ ಟೆಕ್ನಾಲಜೀಸ್‌ನಲ್ಲಿ ಇಂದು ಕಾಲ್ ಸೆಂಟರ್ ಉದ್ಘಾಟಿಸಲಾಯಿತು. ವಿಧಾನಪರಿಷತ್ ಮಾಜಿ ಸದಸ್ಯ
ಆರ್.ಕೆ. ಸಿದ್ದರಾಮಣ್ಣ ಕಾಲ್‌ಸೆಂಟರ್‌ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ನಿಂತ ನೀರಲ್ಲ. ಕಾಲಕ್ಕೆ ತಕ್ಕೆ ಹಾಗೆ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದೆ. ರಾಜಕೀಯ ಪಕ್ಷವಾಗಿಯೂ ಇಂದಿನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.
ಹಿಂದೆ ಜಿಲ್ಲಾ ಕೇಂದ್ರದಲ್ಲಿ ಒಂದೇ ಒಂದು ದೂರವಾಣಿ ಇತ್ತು. ಅದನ್ನು ಬಳಸಿಕೊಂಡೇ ಎಲ್ಲರನ್ನೂ ಸಂಪರ್ಕಿಸ ಬೇಕಿತ್ತು. ಪಕ್ಷದ ಕಾರ್ಯಕ್ರಮಗಳನ್ನು ಅದರ ಮೂಲಕವೇ ತಿಳಿಸಬೇಕಾಗಿತ್ತು. ತಾಲೂಕು ಕೇಂದ್ರಗಳಲ್ಲಿ ಕೂಡ ಒಂದೇ ಒಂದು ದೂರವಾಣಿ ಇರುತ್ತಿತ್ತು. ಆಗ ಇಂದಿನಂತೆ ತಕ್ಷಣ ಕರೆ ಮಾಡಲು ಕೂಡ ಸಾಧ್ಯ ಇರಲಿಲ್ಲ. ಟ್ರಂಕ್ ಕಾಲ್ ಬುಕ್ ಮಾಡಿ ಸಂಪರ್ಕ ಸಿಗುವ ತನಕ ಕಾಯ ಬೇಕಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ನಾನ ಜನರನ್ನು ತಲುಪಿದೆ. ಅದನ್ನು ರಾಜಕೀಯ ಪಕ್ಷವಾಗಿದ್ದರೂ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ಮಾತನಾಡಿ, ಬಿಜೆಪಿ ನಾನಾ ವಿಧದ ಚಟುವಟಿಕೆಗಳನ್ನು ನಡೆಸುತ್ತಿದೆ. ಅವುಗಳನ್ನು ತಲುಪಿಸಲು ಮುಖತಃ ಭೇಟಿ, ದೂರವಾಣಿ ಕರೆ, ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಎಲ್ಲ ಮತದಾರರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದೇ ಇರಬಹುದು. ಆ ಕಾರಣಕ್ಕಾಗಿ ಕಾಲ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಜಿಲ್ಲೆಯ ಎಲ್ಲ ಮತದಾರರು ಹಾಗೂ ಕಾರ್ಯಕರ್ತರ ಮಾಹಿತಿ ಇಲ್ಲಿದೆ. ಅದನ್ನು ಬಳಸಿಕೊಂಡು ಮತದಾರರನ್ನು ಸಂಪರ್ಕಿಸುವ ಕೆಲಸ ಸೇರಿದಂತೆ, ಪಕ್ಷದ ಎಲ್ಲ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಿಕೊಳ್ಳುತ್ತಾ ಹೋಗುವುದೇ ಬಿಜೆಪಿ ವಿಶೇಷತೆ. ಪಕ್ಷದ ಆದರ್ಶವನ್ನು ಜನಗಳ ಮಧ್ಯೆ ಬಿತ್ತುತ್ತಾ ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಮೂಲ ಆದರ್ಶವನ್ನು ಪ್ರಭಾವಯುತವಾಗಿ ಮತದಾರರ ಮಧ್ಯೆ ಹರಡುವಲ್ಲಿ ಯಶಸ್ವಿಯಾಗಿದೆ ಎಂದರು.
ಮಾಜಿ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್, ಪ್ರಮುಖರಾದ ಎಸ್.ದತ್ತಾತ್ರಿ, ಎಂ.ಶಂಕರ್, ಮಧುಸೂದನ್, ಅಣ್ಣಪ್ಪ, ಹೃಷಿಕೇಶ್ ಪೈ, ಚಂದ್ರಶೇಖರ್ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular

Recent Comments