ಶಿವಮೊಗ್ಗ: ಹೊಳೆಹೊನ್ನೂರು ರಸ್ತೆಯಲ್ಲಿನ ಕಾಗೆ ಕೊಡಮಗ್ಗೆ ದಾರಿಯಲ್ಲಿ ಇರುವ ಕಾಗೆಹಳ್ಳ ಬ್ರಿಡ್ಜ್ ನ ಬಳಿಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿದ್ದು ಹತ್ತಿರ ಹೋಗಿ, ಗಮನಿಸಿ ನೋಡಿದಾಗ ಗೋವಿನ ತಲೆಯ ಕೊಂಬು, ಮೂಳೆ ಮತ್ತು ಗೋವಿನ ಬೋಟಿ ಖನಿಜಗಳ ತ್ಯಾಜ್ಯವನ್ನು ಎಸೆದಿರುವುದು ಕಂಡು ಬಂದಿದೆ.
ಸುಮಾರು 10 ರಿಂದ 15ಕ್ಕಿಂತ ಹೆಚ್ಚು ಗೋವುಗಳ ತ್ಯಾಜ್ಯಗಳು ಇಲ್ಲಿ ಕಂಡು ಬಂದಿದೆ. ಹತ್ತರಿಂದ ಹದಿನೈದು ಚೀಲಗಳು ಗೋವುಗಳ ಖನಿಜಗಳು ತಂದು ನೀರಿನಲ್ಲಿ ಎಸೆದಿದ್ದಾರೆ . ಗೋವಿನ ಖನಿಜಗಳನ್ನು ತಂದು ವ್ಯವಸಾಯಕ್ಕೆ ಉಪಯೋಗಿಸುವ ನೀರಿನಲ್ಲಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ.
ಈ ಮುಂಚೆ ಇದೇ ವಿಚಾರವಾಗಿ ನಾನು ತಮ್ಮ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ. ಆದರೂ ಸಹ ಗೋವುಗಳ ಖನಿಜವನ್ನು ತಂದು ಹಾಕುವುದು ನಿಂತಿಲ್ಲ. ಹಾಗಾಗಿ ತಾವುಗಳು ಪ್ರಕರಣ ದಾಖಲಿಸಿಕೊಂಡು ದಯವಿಟ್ಟು ಈ ಒಂದು ಕೃತ್ಯವನ್ನು ಮಾಡಿರುವವರನ್ನು ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದೇನೆಂದು ಸಾಮಾಜಿಕ ಕಾರ್ಯಕರ್ತ ದೇವರಾಜ್ ಅರಳಿಹಳ್ಳಿ ಹೇಳಿದ್ದಾರೆ.
ಈ ಕೃತ್ಯವನ್ನು ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ದೂರೊಂದನ್ನು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.