Thursday, December 12, 2024
Google search engine
Homeಇ-ಪತ್ರಿಕೆಜೋಗ ಜಲಪಾತಕ್ಕೆ ಭೇಟಿ ನೀಡಿದ ಬಿ.ವೈ.ರಾಘವೇಂದ್ರ

ಜೋಗ ಜಲಪಾತಕ್ಕೆ ಭೇಟಿ ನೀಡಿದ ಬಿ.ವೈ.ರಾಘವೇಂದ್ರ

ಸಾಗರ: ಜೋಗ ಜಲಪಾತ ಕ್ಕೆ ವಿಶ್ವದರ್ಜೆಯ ಸ್ಪರ್ಶ ನೀಡಿ ಮಲೆನಾಡ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಇಂದು ಜೋಗ ಜಲಪಾತಕ್ಕೆ ಭೇಟಿ ನೀಡಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಶ್ವಪ್ರಸಿದ್ಧ ನಮ್ಮ ಮಲೆನಾಡಿನ ಮುಕುಟಮಣಿ “ರಾಜ – ರಾಣಿ – ರೋರರ್ – ರಾಕೆಟ್” ಎಂಬ ಹೆಸರಿನಿಂದ ಜಗದ್ವಿಖ್ಯಾತಗಳಿಸಿರುವ “ಜೋಗ ಜಲಪಾತ” ಕ್ಕೆ  ಅವಧಿಯ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಲಪಾತದ ಆವರಣದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಹಾಗೂ ವರ್ಷ ಪೂರ್ತಿ ಜಲಪಾತದ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವ ಸದುದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದರು.

ಸುಮಾರು 185 ಕೋಟಿ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆಯ ವತಿಯಿಂದ ಕೈಗೆತ್ತಿಕೊಂಡಿರುವ ಐತಿಹಾಸಿಕ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿ ಸ್ಥಳದಲ್ಲಿದ್ದ ಅಧಿಕಾರಿ ವರ್ಗದವರಿಗೆ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.

ಈ ಸಮಯದಲ್ಲಿ ಪ್ರಮುಖರಾದ ಪ್ರಕಾಶ್ ತಲಕಾಲಕೊಪ್ಪ, ಹಕ್ಕರೆ ಮಲ್ಲಿಕಾರ್ಜುನ್, ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಜೊತೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular

Recent Comments