ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಂಜಾರ ಸಂಘಕ್ಕೆ ಸರ್ಕಾರ ಆಡಳಿತಾಧಿಕಾ ರಿಯನ್ನು ನೇಮಕ ಮಾಡಿದ್ದು, ಈ ಮೂಲಕ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಕೆ.ಬಿ. ಅಶೋಕ್‌ನಾಯ್ಕ ಅವರ ಬಣದ ಪದಾಧಿಕಾರಿಗಳ ಆಯ್ಕೆ ಅನೂರ್ಜಿತವಾಗಿದೆ. ಈಗಲಾದರೂ ಬಂಜಾರ ಸಂಘಕ್ಕೆ ಅರ್ಹರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ನಿಟ್ಟಿನಲ್ಲಿ ಸಮಾಜ ಚಿಂತಿಸಬೇಕಿದೆ ಎಂದು ಆ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಜೀವ ಸದಸ್ಯರಾದ ಶಿವಕುಮಾರ್, ಕಳೆದ ಜುಲೈ ೧೩ರಂದು ನಡೆದ ಸಂಘದ ಸರ್ವ ಸದಸ್ಯರ ಸಭೆಗೆ ಸಂಘದಲ್ಲಿ ೭೦೦ಕ್ಕೂ ಹೆಚ್ಚು ಸದಸ್ಯರಿದ್ದರು, ಸಹ ಕೆಲವೇ ಸದಸ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಿ ಸಭೆ ನಡೆಸಿದ್ದು ಅಲ್ಲದೆ ಕೇವಲ ೧೯ ಜನ ಸೇರಿ ಅವಿರೋಧವಾಗಿ ಆಡಳಿತ ಮಂಡಳಿಗೆ ಆಯ್ಕೆ ನಡೆದಿತ್ತು. ಸಮಾಜದ ತೀವ್ರ ವಿರೋಧದ ನಡುವೆಯೂ ಮಾಜಿ ಶಾಸಕ ಕೆ.ಬಿ. ಅಶೋಕ್‌ನಾಯ್ಕ ಅಧ್ಯಕ್ಷರಾಗಿದ್ದರು. ಆದರೆ ಈಗ ಅವರಿಗೆ ಸರ್ಕಾರಿದಂದಲೇ
ಕಪಾಳ ಮೋಕ್ಷವಾಗಿದೆ ಎಂದರು.
ಮಾಜಿ ಶಾಸಕ ಅಶೋಕ್ ನಾಯ್ಕ್ ಆಡಳಿತ ಮಂಡಳಿಗೆ ಅನುಮೋದನೆ ನೀಡಬಾರದು ಎಂದು ೪೫ ಅಜೀವ ಸದಸ್ಯರು ದೂರು ನೀಡಿ, ಸಂಘದ ಬೈಲಾ ಮತ್ತು ಕಾಯ್ದೆ ಉಲ್ಲಂಘನೆಯಾಗಿದೆ. ನಿಯಮಾನುಸಾರ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಏಕಪಕ್ಷೀಯವಾಗಿ ಸಂಘಕ್ಕೆ ಆಯ್ಕೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಲಾಗಿದೆ. ಇದರಿಂದ ಸಂಘದಲ್ಲಿ ಹಣ ದುರಪಯೋಗ ಆಗಿದ್ದು ಮೇಲ್ನೋಟಕ್ಕೆ ಸಾಬೀತು ಆಗಿದೆ. ಈ ಹಿನ್ನೆಲೆಯಲ್ಲಿ ಸಮಾದವರೆಲ್ಲರು ತಲೆತಗ್ಗಿಸುವಂತಹ ರೀತಿಯಲ್ಲಿ ಸರ್ಕಾರದಿಂದ ಆಡಳತಾಧಿಕಾರಿ ನೇಮಕವಾಗುವುದಕ್ಕೆ ಕಾರಣರಾಗಿರುವ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಕೂಡಲೇ ಸಮಾಜ ಬಾಂಧವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಬಡ ವಿದ್ಯಾರ್ಥಿಗಳು ಹಳೆ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡಿ ಓದಿಕೊಂಡು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಇಂದು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತ ಜೀವನ ನಡೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಲಯ, ಕಸೂತಿ ಕೇಂದ್ರ ಹಾಗೂ ತರಬೇತಿ ಕೇಂದ್ರ ನಡೆಸಲು ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಕಲ್ಯಾಣ ಮಂಟಪ ಕಟ್ಟಲಾಗಿದೆ, ಇದರಿಂದ ಬಂದ ಹಣವನ್ನು ಸಹ ದುರುಪಯೋಗ ಮಾಡಲಾಗಿದೆ ಎಂದು ದೂರಿದರು.
ಕೂಡಲೇ ಜಿಲ್ಲಾ ಬಂಜಾರ ಸಮಸ್ತ ಜನತೆಗೆ ಕ್ಷಮೆಯಾಚಿಸಿ ದುರುಪಯೋಗ ಮಾಡಿಕೊಂಡ ಹಣವನ್ನು ಸಂಘದ ಖಾತೆಗೆ ಜಮಾ ಮಾಡಿ ಸಮಾಜಕ್ಕೆ ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಜೀವ ಸದಸ್ಯರಾದ ರೇಣುನಾಯ್ಕ, ಹರೀಶ್ ವೈ. ಅಂಜನಾಪುರ, ಹನುಮಂತನಾಯ್ಕ, ಜಯಾನಾಯ್ಕ, ಶಿವರಾಜಕುಮಾರ ನಾಯ್ಕ, ಕುಮಾರ ನಾಯ್ಕ, ಗೇಮ್ಯಾನಾಯ್ಕ, ಶೇಖರ ನಾಯ್ಕ ಉಪಸ್ಥಿತರಿದ್ದರು.