Thursday, December 5, 2024
Google search engine
Homeಇ-ಪತ್ರಿಕೆಶಿಮೂಲ್‍ನಲ್ಲಿ ಭ್ರಷ್ಟಾಚಾರ ಆರೋಪ : ತನಿಖೆಗೆ ಒತ್ತಾಯ

ಶಿಮೂಲ್‍ನಲ್ಲಿ ಭ್ರಷ್ಟಾಚಾರ ಆರೋಪ : ತನಿಖೆಗೆ ಒತ್ತಾಯ

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎಂ.ಸಿದ್ದಲಿಂಗಪ್ಪ ಆಗ್ರಹ

ಶಿವಮೊಗ್ಗ : ಉಪಕಸುಬಾಗಿ ರೈತರು ಹೈನುಗಾರಿಕೆ ಮಾಡುತ್ತಿದ್ದು, ರಾಜ್ಯದ ರೈತರ ಪ್ರಮುಖ ಉದ್ದಿಮೆಯಾಗಿ ಹೈನುಗಾರಿಕೆ ಬೆಳೆದಿದೆ. ಆದರೆ ಶಿಮುಲ್‍ನಲ್ಲಿ ಭ್ರಷ್ಟಾಚಾರದ ಆರೋಪವಿದೆ. ಕಳೆದ ಆರು ತಿಂಗಳಿನಿಂದ ಮಾರುಕಟ್ಟೆ ವಿಭಾಗದಲ್ಲಿ ನಡೆದಿರುವ ಅವ್ಯವಹಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಎಂ.ಸಿದ್ದಲಿಂಗಪ್ಪ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 1500 ಲಕ್ಷ ರೈತರು ಜೀವನೋಪಾಯಕ್ಕೆ ಅನುಕೂಲವಾದ ಹಾಲು ಉತ್ಪಾದನೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಆದರೆ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ 2 ಕೋಟಿಗೂ ಅಧಿಕ ಹಗರಣದ ಆರೋಪವಿದೆ. ಹಾಲು ಒಕ್ಕೂಟ ನಷ್ಟದಲ್ಲಿದೆ ಎಂದು ಕಳೆದ ತಿಂಗಳು ಒಂದು ರೂಪಾಯಿ ಹಾಲಿನ ದರವನ್ನು ಕಡಿಮೆ ಮಾಡಲಾಗಿದೆ. ಈ ಎಲ್ಲಾ ಅವ್ಯವಹಾರಗಳಿಗೆ ಆಸ್ಪ ಮಾಡಿಕೊಡಬಾರದೆಂದು ಒತ್ತಾಯಿಸಿದರು.

ಶಿಮುಲ್ ಮಾರುಕಟ್ಟೆ ವಿಭಾಗದ ಮೂವರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಶಿಮೂಲ್‍ಗೆ ಹೋಗುವ ಹಣ ಅಧಿಕಾರಿಗಳ ಅಕೌಂಟ್‍ಗೆ ಹೋಗುತ್ತಿದೆ. 6 ತಿಂಗಳು ನಿರಂತರವಾಗಿ ಹಗರಣ ನಡೆದಿದೆ. ಅಕೌಂಟ್ಸ್ ಕಮಿಟಿ ಸಭೆ ನಡೆದರೂ ನಡೆದಿಲ್ಲ ಎನ್ನಲಾಗುತ್ತಿದೆ. ಜವಾಬ್ದಾರಿ ಇಲ್ಲದ ನಿರ್ದೇಶಕರ ನಡವಳಿಕೆ ಕಂಡು ಬರುತ್ತಿದೆ. ಅವ್ಯವಹಾರ ಮೇಲ್ನಟಕ್ಕೆ ಕಾಣುತ್ತಿದೆ, ಕೂಡಲೇ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಈ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ನ್ಯಾಯಾಯುತವಾದ ತೀರ್ಮಾನ ಕೈಗೊಳ್ಳಬೇಕು ಎಂದರು.

ಮಾರುಕಟ್ಟೆ ವಿಭಾಗದಲ್ಲಿ ಪ್ರತಿದಿನದ ವ್ಯವಹಾರದ ಹಣ ತುಂಬಲಾಗುತ್ತದೆ. ಆದರೆ ಈ ಹಣ ಅಧಿಕಾರಿಗಳ ಮೂಲಕ ಉದ್ದಮಿಗಳ ಹೆಸರಿಗೆ ಜಮಾವಾಗಿದೆ. ಎಂಡಿ ಅವರು 6 ತಿಂಗಳಿಂದ ಸಹ ದಾಖಲಾತಿಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯ್ಡು, ಗಣೇಶ್ ಬಿಳಕಿ, ಎಸ್ಟಿ ಮೋರ್ಚಾದ ಹರೀಶ್ ಉಪಸ್ಥಿತರಿದ್ದರು.

ಎಂ.ಸಿದ್ದಲಿಂಗಪ್ಪ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ :

ಒಕ್ಕೂಟ ನಷ್ಟವೆಂದು ಹಾಲಿನ ಉತ್ಪಾದಕರ ದರವನ್ನ ಕಡಿಮೆ ಮಾಡಲಾಗಿದೆ. ಎರಡು ಕೋಟಿ ಹಗರಣ ಕಂಡು ಬಂದಿದೆ. ಸರ್ಕಾರ ಇತ್ತ ಗಮನ ಹರಿಸಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಯಾವುದೇ ದಾಖಲೆಗಳು ಹೊರಗೆ ನೀಡಲಾಗುತ್ತಿಲ್ಲ. ಮಾರುಕಟ್ಟೆ ವಿಭಾಗದ ಕಾರ್ಯನಿರ್ವಹಿಸುವ ಮೂರು ಜನ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments