Saturday, December 14, 2024
Google search engine
Homeಇ-ಪತ್ರಿಕೆಸಾಗರದಲ್ಲಿ ಬಿಜೆಪಿಗೆ ಮುನ್ನಡೆ: ಶಾಸಕರ ವಿರುದ್ದ ಹತರಾಳು ಹಾಲಪ್ಪ ವಾಗ್ದಾಳಿ

ಸಾಗರದಲ್ಲಿ ಬಿಜೆಪಿಗೆ ಮುನ್ನಡೆ: ಶಾಸಕರ ವಿರುದ್ದ ಹತರಾಳು ಹಾಲಪ್ಪ ವಾಗ್ದಾಳಿ

ಸಾಗರ : ಕ್ಷೇತ್ರವ್ಯಾಪ್ತಿಯಲ್ಲಿ ಜನರಿಗೆ ರಕ್ಷಣೆ ಇಲ್ಲವಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟದೆ. ಒಂದು ವರ್ಷದ ದುರಾಡಳಿತಕ್ಕೆ ಜನರು ಬಿಜೆಪಿಗೆ 26519 ಮತಗಳ ಲೀಡ್ ನೀಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.

ಸಾಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಕೇಸ್ ಹಾಕುವುದು ಜಾಸ್ತಿಯಾಗುತ್ತಿದೆ. ಅಮಾಯಕರ ವಿರುದ್ದ ಸುಳ್ಳು ಕೇಸ್ ಹಾಕಿ ತೊಂದರೆ ಕೊಟ್ಟರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.  

ಸಿರವಂತೆಯಲ್ಲಿ ಗುರುಪ್ರಸಾದ್ ಎಂಬುವವರ ವಿರುದ್ದ ಗಾಂಜಾ ಕೇಸ್ ಹಾಕುವ ಪ್ರಯತ್ನ ನಡೆಸಲಾಗಿದೆ. ಗೌತಮಪುರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕ್ರಮ ಕೈಗೊಂಡಿಲ್ಲ. ಹೆನಗೆರೆ ರವಿ ಹೆಗಡೆ ಮೇಲೆ ಹಲ್ಲೆಯಾಗಿದೆ. ಇರುವಕ್ಕಿಯಲ್ಲಿ ಇಬ್ಬರು ಬ್ರಾಹ್ಮಣರ ಜಮೀನಿಗೆ ಬೇಲಿ ಹಾಕಲಾಗಿದೆ. ಮೆಳವರಿಗೆಯಲ್ಲಿ 7 ಜನ ರೈತರನ್ನು ಜೈಲಿಗೆ ಕಳಿಸಲಾಗಿದೆ. ಕೋಟೆಕೊಪ್ಪದಲ್ಲಿ ಕಾಂಗ್ರೇಸ್ ಪುಡಾರಿಯೊಬ್ಬರು ಸ್ವಾಧೀನದಲ್ಲಿರುವ ಜಮೀನು ಸ್ವಾಧೀನಪಡಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಂತಹ ಹಲವು ಘಟನೆಗಳು ನಡೆದಿದೆ. ನಮ್ಮ ಪಕ್ಷದ ವಿನೋದ್ ರಾಜ್ ಮತ್ತು ಅರುಣ ಕುಗ್ವೆ ಅವರನ್ನು ಗಡಿಪಾರು ಮಾಡಲು ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿ ಯಶಸ್ವಿಯಾದರು. ಇಂತಹ ಅನೇಕ ಪ್ರಕರಣಗಳು ಕ್ಷೇತ್ರವ್ಯಾಪ್ತಿಯಲ್ಲಿ ನಡೆದಿದ್ದು ಜನರು ದುರಾಡಳಿತದಿಂದ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿದ್ದಾರೆ. ಸಾಗರ ಕ್ಷೇತ್ರದಲ್ಲಿ ಸುಳ್ಳು ಕೇಸ್ ಹಾಕುತ್ತಿರುವುದರ ವಿರುದ್ದ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.  

ವಿಧಾನಸಭಾ ಚುನಾವಣೆಯಲ್ಲಿ ನಾನು 17 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಒಂದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ. ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಸರು, ಬಿ.ವೈ.ರಾಘವೇಂದ್ರ ಅವರ ಜನಸ್ನೇಹಿ ವ್ಯಕ್ತಿತ್ವ, ಅಭಿವೃದ್ದಿಗೆ ಜನರು ಮತ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಎಲ್ಲ ಸ್ತರದ ಘಟಕಗಳು ಬಿ.ವೈ.ರಾಘವೇಂದ್ರ ಗೆಲುವಿಗೆ ಅಹೋರಾತ್ರಿ ಕೆಲಸ ಮಾಡಿದ್ದಾರೆ. ಪಕ್ಷದ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ, ಶ್ರಮಿಸಿದ ಪ್ರಮುಖರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಾ. ರಾಜನಂದಿನಿ ಕಾಗೋಡು, ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ, ಪ್ರಶಾಂತ್, ದೇವೇಂದ್ರಪ್ಪ, ಕೆ.ಆರ್.ಗಣೇಶಪ್ರಸಾದ್, ರಾಜಶೇಖರ ಗಾಳಿಪುರ, ಗೌತಮ್.ಕೆ.ಎಸ್, ಮಧುರಾ ಶಿವಾನಂದ್, ವಿ.ಮಹೇಶ್, ರಮೇಶ್.ಹೆಚ್.ಎಸ್, ಕೊಟ್ರಪ್ಪ ನೇದರವಳ್ಳಿ, ರವೀಂದ್ರ.ಬಿ.ಟಿ, ಶಿವಪ್ಪ ಹೊಸಂತೆ, ಕೃಷ್ಣಮೂರ್ತಿ, ಅರುಣ ಕುಗ್ವೆ, ಸತೀಶ್.ಕೆ, ಸಂತೋಷ್ ಇನ್ನಿತರರು ಹಾಜರಿದ್ದರು.

…………………………………

ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಅಭಿವೃದ್ದಿಗೆ ನಯಾಪೈಸೆ ಬಂದಿಲ್ಲ. ಹೊಸನಗರ, ಸಾಗರ, ಕಾರ್ಗಲ್ ಜೋಗ್ ಸ್ಥಳೀಯ ಸಂಸ್ಥೆಗಳಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ, ಗ್ರಾಮಾಂತರ ಪ್ರದೇಶಗಳಿಗೆ ಎಷ್ಟು ಹಣ ಮಂಜೂರಾಗಿದೆ ಎಂದು ಶಾಸಕರು ದಾಖಲೆ ಬಿಡುಗಡೆ ಮಾಡಲಿ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಂದ ಅನುದಾನದ ಕಾಮಗಾರಿಯನ್ನು ಪುನಃ ಶಂಕುಸ್ಥಾಪನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರಕ್ಕೂ ಅನುದಾನ ಸರ್ಕಾರ ನೀಡಿಲ್ಲ. ಒಂದೊಮ್ಮೆ ಹೊಸ ಅನುದಾನ ತಂದಿದ್ದರೇ ಶಾಸಕರು ದಾಖಲೆ ಬಿಡುಗಡೆ ಮಾಡಲಿ.

-ಹರತಾಳು ಹಾಲಪ್ಪ, ಮಾಜಿ ಸಚಿವ

RELATED ARTICLES
- Advertisment -
Google search engine

Most Popular

Recent Comments