Thursday, December 5, 2024
Google search engine
Homeಅಂಕಣಗಳುಲೇಖನಗಳುಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ದುಸ್ಥಿತಿಯಲ್ಲಿರುವ ಕಾಲುಸೇತುವೆಗಳ ದುರಸ್ತಿಗೆ ಕ್ರಮ

ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ದುಸ್ಥಿತಿಯಲ್ಲಿರುವ ಕಾಲುಸೇತುವೆಗಳ ದುರಸ್ತಿಗೆ ಕ್ರಮ

ಶಿವಮೊಗ್ಗ : ಜಿಲ್ಲೆಯಲ್ಲಿ ದುಸ್ಥಿತಿಯ ಲ್ಲಿರುವ ಕಾಲುಸೇತುವೆಗಳನ್ನು ಗುರುತಿಸಿ ಅವುಗಳನ್ನು ದುರಸ್ತಿ ಮಾಡಲು ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರಾಕೇಶ್ ಕುಮಾರ್ ಅವರು ಹೇಳಿದರು.
ಇಂದು ಜಿ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕಾಲುಸೇತುವೆ ಗಳ ನಿರ್ಮಿಸಲಾಗುತ್ತಿದೆ. ೨೦೧೭-೧೮ನೇ ಸಾಲಿನಲ್ಲಿ ೧೩೦ ಕಾಲುಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ೪೬ಕಾಲುಸೇತುವೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ಕಾಲುಸೇತುವೆಗಳ ದುರಸ್ತಿಗೆ ಗ್ರಾಮ ಪಂಚಾಯತ್‌ಗಳಲ್ಲಿ ಅನುದಾನ ಲಭ್ಯವಿದ್ದು, ಸ್ಥಳೀಯವಾಗಿ ಆದ್ಯತೆ ಮೇರೆಗೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮಳೆಯಿಂದಾಗಿ ಹಾನಿಗೀಡಾಗುವ ಸಾಧ್ಯ ತೆಗಳಿರುವ ಶಾಲಾ ಕಟ್ಟಡಗಳು, ಅಂಗನವಾಡಿಗಳ ಸಮೀಕ್ಷೆ ನಡೆಸಿ ಪ್ರಸ್ತಾ ವನೆಯನ್ನು ತಕ್ಷಣ ಸಲ್ಲಿಸಬೇಕು. ಶಿಥಿಲಾ ವಸ್ಥೆಯಲ್ಲಿರುವ ಶಾಲೆಗಳನ್ನು ಮುಚ್ಚಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚನೆ ನೀಡಿದರು. ಸಿದ್ದಾಪುರದಲ್ಲಿ ಅಂತಹ ಒಂದು ಶಾಲೆಯನ್ನು ಮುಚ್ಚಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚಾಡೊ ಮಾಹಿತಿ ನೀಡಿದರು.
ಆಹಾರದ ಗುಣಮಟ್ಟ ಖಾತ್ರಿಪಡಿಸಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳಲ್ಲಿ ನೀಡುವ ಆಹಾ ರದ ಗುಣಮಟ್ಟವನ್ನು ಖಾತ್ರಿಪಡಿಸಬೇಕು. ಆಹಾರದ ಗುಣಮಟ್ಟದ ಬಗ್ಗೆ ಯಾವುದೇ ದೂರುಗಳು ಬರಬಾರದು. ಅಧಿಕಾರಿಗಳು ನಿಯಮಿತವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಯಾವುದೇ ಗೊಂದಲಗೆ ಆಸ್ಪದವಿಲ್ಲದಂತೆ ವಸತಿ ನಿಲಯಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಕೇಶ್ ಕುಮಾರ್ ಹೇಳಿದರು.
ಕಾಮಗಾರಿ ಪೂರ್ಣಗೊಳಿಸಿ: ಕುಡಿಯುವ ನೀರಿನ ಕಾಮಗಾರಿಗಳಿಗೆ ಕಳೆದ ಸಾಲಿನಲ್ಲಿ ಟಾಸ್ಕ್‌ಫೋರ್ಸ್ ಅಡಿ ೧ಕೋಟಿ ರೂ. ಬಿಡುಗಡೆಯಾಗಿದ್ದು, ೭೮ಕಾಮಗಾರಿಗಳ ಪೈಕಿ ೬೩ಕಾಮಗಾರಿಗಳು ಮಾತ್ರ ಪೂರ್ಣ ಗೊಂಡಿವೆ. ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ದೂರುಗಳು ಬರುತ್ತಿದ್ದು, ಈ ತಿಂಗಳ ೧೫ರ ಒಳಗಾಗಿ ಎಲ್ಲಾ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಬೇಕು. ಶುದ್ಧ ನೀರಿನ ಘಟಕಗಳು ಕಾರ್ಯನಿರ್ವ ಹಿಸುತ್ತಿವೆಯೇ ಎಂಬ ಬಗ್ಗೆ ಎಲ್ಲಾ ಪಂಚಾ ಯತ್‌ಗಳಿಂದ ಮಾಹಿತಿಯನ್ನು ಪಡೆದು ಕೊಳ್ಳುವಂತೆ ಸೂಚನೆ ನೀಡಿದರು.
ದರಪಟ್ಟಿ ಪ್ರಕಟಿಸಿ: ಮೀನುಗಾರಿಕಾ ಇಲಾಖೆ ವತಿಯಿಂದ ನೀಡಲಾಗುವ ಮೀನಿನ ಮರಿಗಳ ದರವನ್ನು ಮೀನುಗಾರಿಕಾ ಇಲಾಖಾ ಕಚೇರಿಗಳಲ್ಲಿ ಮಾತ್ರವಲ್ಲದೆ ತಾಲೂಕಿನ ಪ್ರಮುಖ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು. ಮೀನಿನ ಮರಿ ಮಾರಾಟ ಮಾಡಿದ ಬಳಿಕ ರಸೀದಿಯನ್ನು ತಪ್ಪದೆ ಗ್ರಾಹಕರಿಗೆ ನೀಡಬೇಕು ಎಂದು ಅವರು ತಿಳಿಸಿದರು.
ನೊಟೀಸ್: ವಿವಿಧ ನಿಗಮಗಳ ಕಾರ್ಯನಿರ್ವಹಣೆ ಕುರಿತಾದ ಅಗತ್ಯ ಮಾಹಿತಿಯನ್ನು ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ದೂರಿ ದರು. ಸಂಬಂಧಪಟ್ಟ ನಿಗಮ ಮತ್ತು ಇಲಾಖಾ ಅಧಿಕಾರಿಗಳಿಗೆ ಈ ಕುರಿತು ನೊಟೀಸ್ ಜಾರಿಗೊಳಿಸುವಂತೆ ಸಿಇಒ ಸೂಚಿಸಿದರು.
ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments