ಶಿವಮೊಗ್ಗ: ಹೃದಯ ಸ್ಥಂಭನದಿಂದ ನಿಧನರಾದ ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್‌ರವರ ಅಂತ್ಯ ಸಂಸ್ಕಾರ ಮತ್ತೂರಿನ ತುಂಗಾ ನದಿ ತಟದಲ್ಲಿ ನಡೆಸಲಾಯಿತು. ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಅವರ ಪುತ್ರರು ನೆರವೇರಿಸಿದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಭಾನು ಪ್ರಕಾಶ್‌ರವರ ಮನೆಯ ಮುಂದಿನ ದೇವಾಲಯದ ಕಟ್ಟೆಯ ಆವರಣದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಗೃಹ ಸಚಿವ, ಶಾಸಕ ಆರಗ eನೇಂದ್ರ, ಸುನಿಲ್ ಕುಮಾರ್, ಭರತ್ ಶೆಟ್ಟಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಎಸ್. ರುದ್ರೇಗೌಡ, ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಗಿರೀಶ್ ಪಟೇಲ್, ಗಣೇಶ್ ಕಾರ್ಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಟ್ಟಾಭಿ ರಾಮ್, ದತ್ತಾತ್ರಿ, ನಟರಾಜ ಭಾಗವತ್, ಟಿ. ಡಿ. ಮೇಘರಾಜ್, ಆರ್. ಕೆ. ಸಿದ್ಧರಾಮಣ್ಣ, ದೀನ ದಯಾಳು, ಡಿ. ಕೆ. ಸದಾಶಿವ ಮೊದಲಾದವರು ಮಾತನಾಡಿ, ಭಾನುಪ್ರಕಾಶ್‌ರವರು ಸಮಾಜ ಹಾಗೂ ಪಕ್ಷಕ್ಕೆನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿದರು.
ಮತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ, ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿತ್ತು.