ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ನಿಷೇಧ ಹೇರುವಂತೆ ಹಲವಾರು ಸಂಘಟನೆಗಳು ಹಾಗೂ ಸಾರ್ವಜನಿಕರು ಕೂಡ ಆಗ್ರಹಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಫಿಲಂ ಚೇಂಬರ್ ಸಭೆ ಸೇರಲಿದ್ದು, ಅಧ್ಯಕ್ಷ ಎಂ ಎನ್ ಸುರೇಶ್ ನೇತ್ರತ್ವದಲ್ಲಿ ಮಹತ್ವದ ಸಭೆ ನಡೆಯುತ್ತದೆ.
ನಟ ದರ್ಶನ್ ಅವರನ್ನು ನಿಷೇಧ ಮಾಡುತ್ತಾರೆಯೇ? ಎಂಬ ಕುರಿತು ಕೆಲವೇ ಕ್ಷಣಗಳಲ್ಲಿ ಮಾಹಿತಿ ಹೊರಬೀಳಲಿದೆ. ದರ್ಶನ್ ಅವರ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿದೆ. 50 ಸದಸ್ಯರ ಬದಲು 27 ಸದಸ್ಯರು ಮಾತ್ರ ಭಾಗವಹಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಫಿಲಂ ಚೇಂಬರ್ ನಲ್ಲಿ ತುರ್ತು ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ದರ್ಶನ್ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ಫಿಲಂ ಚೆಂಬರ್ ನೀತಿ ನಿಯಮಗಳ ಪ್ರಕಾರ ಯಾವುದೇ ಕಲಾವಿದರನ್ನು ಚಿತ್ರರಂಗದಿಂದ ನಿಷೇಧ ಮಾಡುವುದು ಅಸಾಧ್ಯ. ಇದನ್ನು ನೋಡಿದರೆ ನಟ ದರ್ಶನ್ ಅವರ ವಿರುದ್ಧ ಫಿಲಂ ಚೇಂಬರ್ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಒಂದು ಕುತೂಹಲವುಂಟಾಗಿದೆ.