Thursday, December 5, 2024
Google search engine
Homeಇ-ಪತ್ರಿಕೆ8 ಕಾಲು, 2 ತಲೆ ಕರುವಿಗೆ ಜನ್ಮ ಕೊಟ್ಟ ಎಮ್ಮೆ

8 ಕಾಲು, 2 ತಲೆ ಕರುವಿಗೆ ಜನ್ಮ ಕೊಟ್ಟ ಎಮ್ಮೆ

ಮಂಡ್ಯ: ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕಿನ ಚಟ್ಟೇನಹಳ್ಳಿ ಗ್ರಾಮದಲ್ಲಿ 8 ಕಾಲು 2 ತಲೆಯ ಕರುವಿಗೆ ಎಮ್ಮೆಯೊಂದು ಜನ್ಮ ನೀಡಿದ ಘಟನೆ ನಡೆದಿದೆ.

ಶಿವಲಿಂಗಯ್ಯ ಎಂಬ ರೈತನಿಗೆ ಸೇರಿದ ಈ ಎಮ್ಮೆ ಹಾಕಿದ ವಿಸ್ಮಯಕಾರಿಯಾದ ಕರು ಅದರ ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ಎಮ್ಮೆ ಕರುವಿಗೆ ಜನ್ಮ ನೀಡಲು ಸಾಕಷ್ಟು ತ್ರಾಸನ್ನು ತೆಗೆದುಕೊಂಡಿತ್ತು. ರೈತರೆಲ್ಲ ಹಲವು ಪ್ರಯತ್ನ ಪಟ್ಟರು ಕರುವನ್ನು ತಾಯಿ ಹೊಟ್ಟೆಯಿಂದ ಹೊರ ತೆಗೆಯಲು ಸಾಧ್ಯವಾಗದಿದ್ದಾಗ ಪಶು ವೈದ್ಯರನ್ನು ಕರೆಸಲಾಯಿತು. ಇವರು ಕರುವನ್ನು ಹೊರ ತೆಗೆಯಲು ವಿಫಲರಾದರು. ನಂತರ ಇನ್ನೊಬ್ಬ ಪಶು ವೈದ್ಯರನ್ನು ಕರೆಸಲಾಯಿತು. ಅವರು ಶಸ್ತ್ರಚಿಕಿತ್ಸೆ ಮಾಡಿ ಕರುವನ್ನು ಹೊರ ತೆಗೆಯಬೇಕಾಗಿ ಬಂತು. ಆದರೆ, ಕರುವು ತಾಯಿಯ ಗರ್ಭದಲ್ಲಿಯೇ ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular

Recent Comments