ಶಿವಮೊಗ್ಗ: ಸವಾಲು ಕೇವಲ ಪತ್ರಕರ್ತರ ಮುಂದಿಲ್ಲ. ಓದುವವರ ಮುಂದೆ, ಜನರ ಮುಂದೆ ಬರೆಯುವವರ ಮುಂದೆಯೂ ಸವಾಲಿದೆ ಎಂದು ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಋಷಿಕೇಷಾ ಬಹದ್ದೂರು ದೇಸಾಯಿ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಅವರು ಇಂದು ಪತ್ರಿಕಾ ದಿನಾಚರಣೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಭವಿಷ್ಯದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಸುಳ್ಳು ಸುದ್ದಿಯಲ್ಲಿಂದು ನಿಪುಣತೆ ಹೆಚ್ಚಾಗುತ್ತಿದೆ. 9 ಸಾವಿರ ಪತ್ರಕರ್ತರು ದೇಶದ್ರೋಹದ ಕೇಸಿನಲ್ಲಿ ಜೈಲಿನಲ್ಲಿದ್ದಾರೆ. 10 ವರ್ಷದಲ್ಲಿ, 5 ಸಾವಿರ ಪತ್ರಕರ್ತರು ಕೋರ್ಟ್ಗೆ ಹಾಜರುಪಡಿಸಿಲ್ಲ. ಇಂದಿನಡಾಟಾ ಯುಗದಲ್ಲಿ ರೇಡಿಯೋ ಕಳೆದುಕೊಂಡಿದ್ದೇವೆ. ಅದಕ್ಕೆ ಡಾಟಾ ಹಾಕುವಂತಿರಲಿಲ್ಲ. ಯೂರೋಪ್ನಲ್ಲಿ ಇಂದಿಗೂ ರೇಡಿಯೋ ಇದೆ. ಅದೇ ರೀತಿಯಲ್ಲಿ ಭಾರತದಲ್ಲಿಯೂ ಯುಗ ಮರಳಬಹುದಾಗಿದೆ ಎಂದರು.
ಆರ್ಟಿಫಿಶಲ್ ಇಂಟಲ್ ಜೆನ್ಸಿಯಲ್ಲಿ ಬುದ್ದಿ ಇಲ್ಲ. ನಾವು ಒಂದು ಹುಡುಕಿದರೆ ಅದು ಇನ್ನೊಂದು ಕೊಡುತ್ತದೆ. ಹೀಗಾಗಿ ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕಿದೆ. ಮನಸು ಬದಲಾಯಿಸದೆ ಭಾಷೆ ಬದಲಾಯಿಸಿದರೆ ಉಪಯೋಗವಿಲ್ಲ ಎಂದ ಅವರು, ವಾಟ್ಸಾಪ್ ಎಂಬುವುದು ಹೊಸದೇ ಆಗಿರಬಹುದು ಆದರೆ, ಅದರ ಹಿಂದಿನ ಮನಸ್ಥಿತಿ ಹಳೆಯದ್ದೇ ಎಂದರು.