Saturday, December 14, 2024
Google search engine
Homeಇ-ಪತ್ರಿಕೆ7ನೇ ತರಗತಿಗೆ ನಟಿ ತಮ್ಮನ್ನಾ ಭಾಟಿಯಾ ಪಾಠ: ಪೋಷಕರಿಂದ ದೂರು

7ನೇ ತರಗತಿಗೆ ನಟಿ ತಮ್ಮನ್ನಾ ಭಾಟಿಯಾ ಪಾಠ: ಪೋಷಕರಿಂದ ದೂರು

ಬೆಂಗಳೂರು: ಇಲ್ಲಿನ ಸಿಂದಿ ಹೈಸ್ಕೂಲ್ ನಲ್ಲಿ 7ನೇ ತರಗತಿಗೆ ನಟಿ ತಮ್ಮನ್ನಾ ಭಾಟಿಯಾ ಕುರಿತು ಪಾಠವೊಂದನ್ನು ಇರಿಸಲಾಗಿದೆ. ಇದಕ್ಕೆ ಪೋಷಕರು ಆಕ್ಷೇಪವ್ಯಕ್ತಪಡಿಸಿದ್ದು, ಈ ಸಂಬಂಧ ದೂರೊಂದನ್ನು ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಕ್ಕೂಟದಲ್ಲಿ ಪೋಷಕರು ತಮ್ಮ ದೂರು ದಾಖಲಿಸಿದ್ದಾರೆ.

ತಮ್ಮನಾ ಭಾಟಿಯಾ ಅವರು ಅಶ್ಲೀಲ ದೃಶ್ಯಗಳಲ್ಲಿ  ನಟಿಸಿದ್ದಾರೆ. ಇದನ್ನು ಪಾಲಕರು ಪ್ರಶ್ನಿಸಿದ್ದಾರೆ.

ಶಾಲೆಯು ತಮ್ಮ ಸಿಂಧಿ ಸಮುದಾಯದ ಕುರಿತು ತಿಳಿಸಿಕೊಡುವ ಉದ್ದೇಶದಿಂದ 7ನೇ ತರಗತಿಗೆ ಸಿಂದಿ ನಟಿಯಾದ ತಮ್ಮನ್ನಾ ಭಾಟಿಯಾರ ಕುರುತು ಪಾಠವೊಂದನ್ನು ಬೋಧಿಸಲಾಗುತ್ತಿದೆ. ಈ ಪಾಠದಲ್ಲಿ ನಟಿಯ ಕುರಿತು ಮಾತ್ರವಲ್ಲದೆ ವಿಭಜನೆಯ ನಂತರದ ಜೀವನ: ಸಿಂದ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ 1947 ರಿಂದ 1962′ ಎಂಬ ಅಧ್ಯಾಯದಲ್ಲಿ ನಟಿಯ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಈ ಪಾಠದಲ್ಲಿ ತಮ್ಮನ್ನಾ ಮಾತ್ರವಲ್ಲದೆ ನಟ ರಣವೀರ್ ಸಿಂಗ್ ಕುರಿತು ಪಾಠವನ್ನು ಬೋಧನೆಗೆ ಸೇರಿಸಲಾಗಿದೆ. ಆದರೆ, ಪಾಲಕರು ಮಾತ್ರ ತಮನ್ನಾ ಭಾಟಿಯಾ ಅವರ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯವನ್ನು ಹೊಂದಿರುವುದು ನಮ್ಮ ಆಕ್ಷೇಪ ಎಂದು ಪೋಷಕರು ತಾವು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments