ಭದ್ರಾವತಿ: ತಾಲೂಕಿನ ಬಾರಂದೂರು ಗ್ರಾಮದ 5 ವರ್ಷದ ಪೋರಿ ಶಾನ್ವಿತಾ ಗೌಡ. ಹೆಚ್. ವಿಶೇಷ ಸಾಧನೆಯ ಮೂಲಕ ತನ್ನ ಹೆಸರನ್ನು “ನೋಬಲ್ ಬುಕ್ ಆಫ್ ವರ್ಡ್ ರೆಕಾರ್ಡ್”ನಲ್ಲಿ ಸೇರಿಸಿಕೊಂಡಿದ್ದಾಳೆ.
ನೋಬಲ್ ವರ್ರ್‍ಡ್ ರೆಕಾರ್ಡ್ ಸಂಸ್ಥೆ ಯು ಶಿವಮೊಗ್ಗದಲ್ಲಿ ಏ.28 ರಂದು ವಿವಿಧ ಅಸಾಧಾರಣ ಯುವ ಪ್ರತಿಭೆಗಳಿಗೆ ಆಹ್ವಾನಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾನ್ವಿತಾ ತನ್ನ ಚುರುಕು ಬುದ್ದಿಯಿಂದ ರಾಮಮಂದಿರ, ರಾಜಕೀಯ, ಸಾಮಾಜಿಕ ಜ್ಞಾನ ಕುರಿತಂತೆ ಕೇಳಲಾದ 159 ಪ್ರೆಶ್ನೆಗಳಿಗೆ 9 ನಿಮಿಷ,56 ಸೆಕೆಂಡುಗಳಲ್ಲಿ ಉತ್ತರಿಸಿದ್ದಾಳೆ.
ಜವಾಹರಲಾಲ್ ನೆಹರೂ ಸೇರಿದಂತೆ ಇಂದಿನ ಪ್ರಧಾನಮಂತ್ರಿ.ನರೇಂದ್ರ ಮೋದಿಯವರೆಗೂ ದೇಶ ಕಂಡ ಪ್ರಧಾನಮಂತ್ರಿಗಳು, ರಾಜ್ಯದ ಯಾವ ಯಾವ ಪ್ರದೇಶಗಳು ಯಾವುದಕ್ಕೆ ಪ್ರಸಿದ್ದ ಎಂಬುವುದರ ಜೊತೆಗೆ ನಾಡಿನ ಕಾಡು ಪ್ರಾಣಿಗಳು, ಪಕ್ಷಿ ಸಂಕುಲಗಳ ಹೆಸರುಗಳು ಒಳಗೊಂಡಂತೆ ಕೇಳಲಾದ ರಾಷ್ಟ್ಟೀಯ ವಿಚಾರಗಳನ್ನು ಪಟಪಟನೆ ಹೇಳುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಾಳೆ.
ಚಿಕ್ಕ ವಯಸ್ಸಿನ ಪುಟಾಣಿಯ ಉತ್ತರಗಳಿಗೆ ಮೆಚ್ಚಿದ ಸಂಸ್ಥೆಯ ಮುಖ್ಯಸ್ಥರು ಮಗು ಶಾನ್ವಿತಾ ಗೌಡ ರನ್ನು ನೋಬಲ್ ಬುಕ್ ಆಫ್ ವರ್‍ಡ್ ರೆಕಾರ್ಡ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹೆಚ್.ಶಾನ್ವಿತಾ ಗೌಡ ತಾಲೂಕಿನ ಕಾರೇಹಳ್ಳಿ ಗ್ರಾಮದ ಬಿಜಿಎಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಯುಕೆಜಿ ಓದುತ್ತಿದ್ದು ಸ್ವಾತಿ. ಹರೀಶ್ ದಂಪತಿಯ ಪುತ್ರಿಯಾಗಿದ್ದಾಳೆ.
ಶಾಸಕ ಬಿ.ಕೆ.ಸಂಗಮೇಶ್ವರ್ ಗೃಹ ಕಚೇರಿಯಲ್ಲಿ ಶಾನ್ವಿತಾಗೌಡ ಗೆ ಸಂಸ್ಥೆಯ ಪರವಾಗಿ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು, ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ, ಬಾಲರಾಜ್, ವಾಸುದೇವಪ್ರಸಾದ್, ಸೇರಿದಂತೆ ಹಲವರಿದ್ದರು. ಬಾಲಕಿ ಹೆಚ್,ಶಾನ್ವಿತಾ ಗೌಡ ಅವಳ ಸಾಧನೆಗೆ ಶಾಸಕ ಬಿ.ಕೆ.ಸಂಗಮೇಶ್ವರ್, ಮುಖಂಡರಾದ ಎಸ್.ಮಣಿಶೇಖರ್ ಸೇರಿದಂತೆ ಇನ್ನಿತರರು ಅಭಿನಂಧಿಸಿದ್ದಾರೆ.