Saturday, December 14, 2024
Google search engine
Homeಇ-ಪತ್ರಿಕೆಭದ್ರಾ ಜಲಾಶಯ: ಒಳಹರಿವು 50 ಸಾವಿರ ಕ್ಯೂಸೆಕ್; 157 ಅಡಿ ತಲುಪಿದ ನೀರಿನ ಮಟ್ಟ-ಒಂದೇ ದಿನ...

ಭದ್ರಾ ಜಲಾಶಯ: ಒಳಹರಿವು 50 ಸಾವಿರ ಕ್ಯೂಸೆಕ್; 157 ಅಡಿ ತಲುಪಿದ ನೀರಿನ ಮಟ್ಟ-ಒಂದೇ ದಿನ 4.11 ಅಡಿ‌ ನೀರು ಸಂಗ್ರಹ

ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಒಳ ಹರಿವು ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ( ಜು.19) 49,555 ಕ್ಯೂಸೆಕ್ ಒಳ ಹರಿವಿದ್ದು, ಗುರುವಾರ 42,165 ಕ್ಯೂಸೆಕ್ ಇತ್ತು. ಹೋಲಿಸಿದ್ರೆ 7.5 ಸಾವಿರ ಕ್ಯೂಸೆಕ್ ನಷ್ಟು ಒಳ‌ಹರಿವು ಏರಿಕೆಯಾಗಿದೆ. ಒಂದೇ ದಿನ 4.11 ಅಡಿ ನೀರು ಹೆಚ್ಚಳವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ತಿಂಗಳಾಂತ್ಯಕ್ಕೆ ಜಲಾಶಯ ಭರ್ತಿ ಯಾಗುವ ಸಾದ್ಯತೆ ಇದೆ. ಕಳೆದ ವರ್ಷ ಇದೇ ದಿನ 1,518 ಕ್ಯೂಸೆಕ್ ಒಳ‌‌ಹರಿವು ಇತ್ತು. 141.7 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು.

 ಭದ್ರಾ ಡ್ಯಾಂ ಒಳಹರಿವು ಹೆಚ್ವಳದಿಂದ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತದ ಬೆಳೆಗಾರರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಭರವಸೆ ಹುಟ್ಟಿದೆ. ತುಂಗಭದ್ರಾ ನದಿ ಸಹ ಉಕ್ಕಿ ಹರಿಯುತ್ತದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗ ಭದ್ರಾ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗಿರುವುದರಿಂದ ನಾಲೆಗೆ ನೀರು ಹರಿಸುವ ಸಂಭವ ಇದೆ. ಈ ಹಿನ್ನೆಲೆ ಅಚ್ಚುಕಟ್ಟು ರೈತರು, ಭತ್ತದ ಸಸಿ ಮಡಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೋರ್ ವೆಲ್ ಇರುವವರು ಈಗಾಗಲೇ ಭತ್ತ ನಾಟಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭದ್ರಾ ನಾಲೆಯ ನೀರು ಅವಲಂಬನೆ ಇರುವವರು ಬೋರ್ ನೀರಿಗೆ ಸಸಿ ಮಡಿ ಮಾಡುತ್ತಿದ್ದಾರೆ. ಭದ್ರಾ ಡ್ಯಾಂ ಭರ್ತಿಯಾಗಿ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಸಿಗುವ ಸಂಭವ ಹೆಚ್ಚಾಗಿದೆ.

ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ
ಪಡೆದಿತ್ತದರೂ, ನಂತರದ 20 ದಿನ ಸಂಪೂರ್ಣ ತಗ್ಗಿತ್ತು. ಈಗ ಕಳೆದ 15 ದಿನದಿಂದ ಭಾರೀ ಮಳೆಯಾಗುತ್ತಿದ್ದು, ಇದೇ ರೀತಿ ಮಳೆಯಾದರೆ ಈ ತಿಂಗಳಲ್ಲಿಯೇ ಡ್ಯಾಂ ತುಂಬಲಿದೆ.

ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು.19)
ನೀರಿನ ಮಟ್ಟ 157.11 ಅಡಿಯಷ್ಟಿದೆ. ಒಳ ಹರಿವು 49,555 ಕ್ಯೂಸೆಕ್‌ ನಷ್ಟಿದೆ.

    ಇಂದಿನ ಭದ್ರಾ ಜಲಾಶಯ ನೀರಿನ ವಿವರ:

    ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ

    ಪ್ರಸ್ತುತ ನೀರಿನ ಮಟ್ಟ ; 41.006 ಟಿಎಂಸಿ

    ಗರಿಷ್ಠ ಮಟ್ಟ: 186 ಅಡಿ

    ಇಂದಿನ ಮಟ್ಟ: 157.11 ಅಡಿ

    ಒಳ ಹರಿವು :48,555 ಕ್ಯೂಸೆಕ್ (ಜು.17ರಂದು

    42,165ಕ್ಯೂಸೆಕ್)

    ಹೊರ ಹರಿವು : 181 ಕ್ಯೂಸೆಕ್

    ಕಳೆದ ವರ್ಷ ಈ ದಿನದ ನೀರಿನ ಮಟ್ಟ: 141.7 ಅಡಿ

    ಇದೇ ದಿನ ಕಳೆದ ವರ್ಷದ ಒಳಹರಿವು: 1,518 ಕ್ಯೂಸೆಕ್

RELATED ARTICLES
- Advertisment -
Google search engine

Most Popular

Recent Comments