Thursday, December 5, 2024
Google search engine
Homeಅಂಕಣಗಳುಲೇಖನಗಳುಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಸಮುದಾಯ ಸಹಭಾಗಿತ್ವ ಅಗತ್ಯ : ಡಾ.ವನಿತಾ ತೊರವಿ

ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಸಮುದಾಯ ಸಹಭಾಗಿತ್ವ ಅಗತ್ಯ : ಡಾ.ವನಿತಾ ತೊರವಿ

ಶಿವಮೊಗ್ಗ : ಪ್ರತಿಯೊಂದು ಸರ್ಕಾರಿ ಶಾಲೆಗ ಳಲ್ಲಿ ಹಳೆಯ ವಿದ್ಯಾರ್ಥಿ ಸಂಘಗಳನ್ನು ಬಲಪಡಿ ಸುವ ಮೂಲಕ ತಾವು ಕಲಿತ ಶಾಲೆಯ ಅಭಿವೃ ದ್ಧಿಗೆ ಕೈಜೋಡಿಸುವ ಅವಕಾಶವನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ವನಿತಾ ತೊರವಿ ತಿಳಿಸಿದರು.
ಇಂದು ಜಿ.ಪಂ. ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸರ್ಕಾರಿ ಶಾಲೆಗಳ ಪುನರುಜ್ಜೀವನ ಸಾಧ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿರಬಹುದು. ಅಂತವರು ತಾನು ಕಲಿತ ಶಾಲೆಯನ್ನು ಮರೆಯದೆ, ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ, ತನ್ನ ಶಾಲೆಯ ಶಿಕ್ಷಣದ ಗುಣಮಟ್ಟ ಸುಧಾರಿಸಲು ನಿರಂತರ ಕೊಡುಗೆ ನೀಡಬೇಕು ಎಂದರು.
ಆಯೋಗದ ಸದಸ್ಯ ಕೆ.ಬಿ.ರೂಪ್ಲಾನಾಯ್ಕ ಮಾತನಾಡಿ, ಆಯೋಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ೮೫೦೦ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಮತ್ತೆ ಶಾಲೆಯ ಮುಖ್ಯ ವಾಹಿನಿಗೆ ಕರೆತರುವ ಕಾರ್ಯ ನಡೆಯ ಬೇಕಿದೆ. ಗ್ರಾಮ ಪಂಚಾಯತ್, ಶಾಲಾಭಿವೃದ್ಧಿ ಸಮಿತಿ ಮತ್ತು ಪಾಲಕರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲು ಸಾಧ್ಯವಿದೆ ಎಂದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ನಿರಂತರ ತಪಾಸಣೆಗೆ ಹೋಗಬೇಕು. ಈ ರೀತಿ ತಪಾಸಣೆಗೆ ಹೋದಾಗ ಕೇವಲ ಹಾಜರಾತಿ ಇತ್ಯಾದಿ ಆಡಳಿತಾತ್ಮಕ ಅಂಶಗಳ ಕಡೆಗೆ ಮಾತ್ರ ಗಮನ ಹರಿಸಿದರೆ ಸಾಲದು. ಗುಣಮಟ್ಟದ ಶಿಕ್ಷಣ ನೀಡಲು ಕೈಗೊಂಡಿರುವ ಕ್ರಮಗಳು, ಈ ಕುರಿತಾದ ಮಾನದಂಡವನ್ನು ಅನುಸರಿಸುತ್ತಿದ್ದಾ ರೆಯೇ ಎಂದು ಪರಿಶೀಲಿಸಿ ಮಾರ್ಗದರ್ಶನ ಮಾಡಬೇಕು ಎಂದರು.
ಕೇವಲ ಮತದಾನ ಕೇಂದ್ರವಾಗುವ ಅಪಾಯ: ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತಾದ ನಮ್ಮೆಲ್ಲರ ಮನೋಭಾವದಲ್ಲಿ ಬದಲಾವಣೆಯಾಗುವ ಅಗತ್ಯವಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ ಎಂಬ ಉಡಾಫೆ ಮನೋಭಾವ ಸಲ್ಲದು. ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲಾ ಶಿಕ್ಷಕರಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದರೂ, ನಮ್ಮಲ್ಲಿ ಮಕ್ಕಳ ದಾಖಲಾತಿ ಕಡಿಮೆ ಯಾಕಿದೆ? ಶಿಕ್ಷಣದ ಗುಣಮಟ್ಟ ಯಾಕೆ ಉತ್ತಮವಾಗುತ್ತಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ ಎಂದು ಹೇಳಿದರು.
ಶಿಕ್ಷಕರು ಪ್ರತಿಯೊಂದು ಮಕ್ಕಳ ಮನೆಗೆ ಹೋಗಿ ಅವರ ಪಾಲಕರೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕಿದೆ. ಇಲ್ಲದಿದ್ದರೆ ನಮ್ಮ ಶಾಲೆಗಳು ಕೇವಲ ಮತಗಟ್ಟೆಗಳಾಗುವ ಅಪಾಯವಿದೆ ಎಂದರು.
ಸಭೆಯಲ್ಲಿ ಜಿ.ಪಂ. ಸಿಇಓ ರಾಕೇಶ್ ಕುಮಾರ್, ಶಿಕ್ಷಣ ಇಲಾಖೆಯ ಡಿಡಿಪಿಐ ಮಚ್ಛಾಧೋ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments