ಶಿವಮೊಗ್ಗ : ನವ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಪರಿವರ್ತನಾ ಯಾತ್ರೆಯು ಡಿ.೨೮ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶ ಮಾಡಲಿದ್ದು, ಅಂದು ಮಧ್ಯಾಹ್ನ ೩ ಗಂಟೆಗೆ ಹೊಳಲೂರು ಹೋಬಳಿ ಹರಮಘಟ್ಟ ಗ್ರಾಮದ ಕೃಷಿ ಜಮೀನಿನ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಆಯ ನೂರು ಮಂಜುನಾಥ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶ ಯಶಸ್ವಿ ಗಾಗಿ ಎಲ್ಲಾ ತಯಾರಿಗಳನ್ನು ನಡೆ ಸಿದ್ದು, ಕ್ಷೇತ್ರದ ೨೩೫ ಬೂತ್‌ಗಳಲ್ಲೂ ಸಹ ಸಭೆಗಳನ್ನು ನಡೆಸಿ, ಪ್ರತಿ ಬೂತ್‌ನಿಂದ ಕನಿಷ್ಟ ೧೫೦ ಜನರನ್ನು ಸಮಾವೇಶಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎಂದರು.
ಸಮಾವೇಶದಲ್ಲಿ ಸುಮಾರು ೩೫ರಿಂದ ೪೦ ಸಾವಿರ ಜನರನ್ನು ಸೇರಿ ಸಲು ಸತತ ಪ್ರಯತ್ನ ನಡೆಸಲಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ನಾಲ್ವರು ಜಿಪಂ ಸದಸ್ಯರು, ತಾಪಂ ಹಾಗೂ ಎಪಿಎಂಸಿಯಲ್ಲಿ ಅಧಿಕ ಬಿಜೆಪಿ ಸದಸ್ಯರು ಹಾಗೂ ಗ್ರಾಪಂಗಳಲ್ಲಿ ಬಹುತೇಕ ಬಿಜೆಪಿ ಬೆಂಬಲಿತ ಸದಸ್ಯರಿರುವುದ ರಿಂದ ಪ್ರತೀ ಬೂತ್‌ನಿಂದ ಕನಿಷ್ಠ ೧೫೦ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕ್ಷೇತ್ರದ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಸಮಾವೇಶ ದಲ್ಲಿ ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ಸಮಸ್ಯೆಗಳನ್ನು ಉಲ್ಲೇಖಿಸಲಿದ್ದಾರೆ ಎಂದ ಅವರು, ಕ್ಷೇತ್ರದಲ್ಲಿ ಯಡಿಯೂರಪ್ಪನವರ ಅಭಿಮಾನಿಗಳೇ ದಂಡೇ ಇದೆ. ಇವರಲ್ಲಿ ಅಯಸ್ಕಾಂತದ ಶಕ್ತಿ ಇರು ವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಭಾಗವಹಿ ಸಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ೭ ಮಂದಿ ಆಕಾಂಕ್ಷಿಗಳಿದ್ದು, ಪಕ್ಷದ ವರಿಷ್ಟರು ಯಾರಿಗೆ ಟಿಕೇಟ್ ನೀಡಿದರೂ ಸಹ ಎಲ್ಲರೂ ಒಗ್ಗೂಡಿ ಗೆಲುವಿಗಾಗಿ ಪ್ರಯತ್ನಿಸಲಾಗುವುದು. ಪಕ್ಷದ ಸಂಘಟನೆಯ ಬಲಾಢ್ಯವನ್ನು ನೋಡಿ ಶಿಕಾರಿಪುರ ಕ್ಷೇತ್ರದ ಶಾಸಕರನ್ನು ಹೊರತುಪಡಿಸಿ ಉಳಿದ ಜಿಲ್ಲೆಯ ಆರು ಜನ ಶಾಸಕರಿಗೆ ಚಳಿ ಜ್ವರ ಬರುವಂತಾಗಿದೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ವಿರೂ ಪಾಕ್ಷಪ್ಪ, ಕೆ.ಈ.ಕಾಂತೇಶ್, ನಾಗ ರಾಜ್, ಕೆ.ಜಿ.ಕುಮಾರಸ್ವಾಮಿ, ಅಶೋಕ ನಾಯ್ಕ್, ಧೀರರಾಜ್ ಹೊನ್ನವಿಲೆ, ಬಾಳೋಜಿ ಕೃಷ್ಣೋಜಿ ರಾವ್, ಯು.ಕೆ.ವೆಂಕಟೇಶ್, ರಾಮಕೃಷ್ಣ ಮೆಸ್ತಿ, ದಿಗ್ಗೇನಳ್ಳಿ ಲೋಕೇಶ್, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.