ಶಿವಮೊಗ್ಗ : ಮಾನಸಿಕ ದೌರ್ಬ ಲ್ಯದ ಒಂದು ಕ್ಷಣ ಮನುಷ್ಯನ ಜೀವ ವನ್ನೇ ಬಲಿತೆಗೆದುಕೊಳ್ಳುತ್ತದೆ. ಯಾವುದೇ ವ್ಯಕ್ತಿಯು ಮಾನಸಿಕವಾಗಿ ನೊಂದಿ ದ್ದರೆ, ಅವನಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಸಮುದಾಯ, ಸ್ನೇಹಿ ತರು, ಕುಟುಂಬದವರು, ಬಂಧು ಮಿತ್ರರು, ಮಾಧ್ಯಮದವರು, ಸಂಘ- ಸಂಸ್ಥೆಗಳು ಮಾಡುವ ಮೂಲಕ ವ್ಯಕ್ತಿಯ ನವಜೀವನದ ಆರಂಭಕ್ಕೆ ಮುನ್ನಡಿ ಬರೆಯುವಂತೆ ಮಾನಸಿಕ ತಜ್ಞ ಡಾ.ಪ್ರಮೋದ್ ಹೇಳಿದರು.
ಇಂದು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿ ಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಜಾಥಾ ಮತ್ತು ಅರಿವು ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿ ಕೊಂಡರೂ, ಅದಕ್ಕೆ ಕಾರಣಗಳು ಏನೇ ಇದ್ದರೂ ಅಂತಿಮವಾಗಿ ನೊಂದು ಕೊಳ್ಳುವವರು ಅವರ ಸಂಗಾತಿ, ಪೋಷಕರು, ಮಕ್ಕಳು, ಸ್ನೇಹಿತರು ಅಥವಾ ಸಹೋದ್ಯೋಗಿಗಳೇ ಆಗಿರುತ್ತಾರೆ ಎಂದ ಅವರು, ಅಮೂಲ್ಯವಾಗಿರುವ ಜೀವನವನ್ನು ಯಾವುದೋ ಕ್ಷುಲ್ಲಕ ಕಾರಣಕ್ಕೆ ಬಲಿಕೊಡುವುದು ತರವಲ್ಲ, ಆತ್ಮಹತ್ಯೆ ಯೋಚನೆ ಬಂದಕೂಡಲೇ ಒಂದು ನಿಮಿಷ ಜೀವನದ ಬಗ್ಗೆ ಯೋಚಿಸಿದರೆ ಅದರಿಂದ ಹೊರಬರಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ.ಧರ್ಮ ಗೌಡರ ಮಾತನಾಡಿ, ವ್ಯಕ್ತಿ ಅನೇಕ ಕಾರಣಗಳಿಂದಾಗಿ ಆತ್ಮಹತ್ಯೆಗೆ ಯತ್ನಿ ಸುತ್ತಾನೆ. ಸಮಸ್ಯೆಗಳ ಪರಿಹಾರಕ್ಕೆ ಆತ್ಮ ಹತ್ಯೆಯೊಂದೆ ಪರಿಹಾರವಲ್ಲ. ಸಮಸ್ಯೆ ಗಳ ಪರಿಹಾರಕ್ಕೆ ಪರ್ಯಾ ಯವಾಗಿ ರುವ ಕ್ರಮಗಳ ಕುರಿತು ಸಮಾಧಾನ ಚಿತ್ತರಾಗಿ ಆಲೋಚಿಸಿ ಮುಂದುವರೆ ಯುವುದು ಕ್ಷೇಮಕರ ಎಂದರು.
ಕಾರ್ಯಕ್ರಮದಲ್ಲಿ ಸೋಮ ಶೇಖರ ಸಿ.ಬಾದಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ರಾಜೇಶ್‌ಸುರಗೀ ಹಳ್ಳಿ, ಡಾ.ಕಾಂತರಾಜ್, ಡಾ.ಉಮಾ ಮುಂತಾದವರು ಉಪಸ್ಥಿತರಿದ್ದರು.
ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಪರಿಹಾರವಲ್ಲ : ಡಾ.ಪ್ರಮೋದ್
RELATED ARTICLES