Sunday, November 10, 2024
Google search engine
Homeಇ-ಪತ್ರಿಕೆನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ: ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ: ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ

ಸೊರಬ: ಒಂದು ವರ್ಷದಿಂದ  ನಯಾ ಪೈಸೆ ಅನುದಾನ‌ ತರದ ಸಚಿವ ಮಧು ಬಂಗಾರಪ್ಪ ಅವರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ  ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗಾದರೂ ಅನುದಾನ‌ ತರುವಲ್ಲಿ ಇಚ್ಛಾಶಕ್ತಿ ಮೆರೆಯಬೇಕು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಒತ್ತಾಯಿಸಿದರು.
 
ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಹಾಗೂ ಮತದಾರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.ಹೊಸ ಕಾಮಗಾರಿಗಳಿಗೆ ಯಾವುದೇ ಅನುದಾನ ಇದುವರೆಗೂ ತಂದಿಲ್ಲ. ಮಂಜೂರಾದ ಕಾಮಗಾರಿಗಳಿಗೆ ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಸಚಿವರು ಕ್ಷೇತ್ರದ ಅಭಿವೃದ್ಧಿ ಕಡೆಗೆ ಚಿಂತನೆ ನಡೆಸಿ ತಮ್ಮನ್ನು ಗೆಲ್ಲಿಸಿದ ಮತದಾರರ ಋಣ ತೀರಿಸಬೇಕು ಎಂದರು.
   
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಸಾಹಿತ್ಯ ಪರಿಷತ್ ಭವನ,ನೌಕರರ ಭವನ,ಆರ್ಯ ಈಡಿಗರ ಸಮುದಾಯ ಭವನಗಳು ಅನುದಾನದ ಕೊರತೆಯಿಂದ ಅಪೂರ್ಣಗೊಂಡಿವೆ. ನೀತಿಸಂಹಿತೆ ಮುಗಿದಿದೆ. ಇನ್ನಾದರೂ ಸಚಿವರು ಚುನಾವಣೆ ಗುಂಗಿನಿಂದ ಹೊರಬಂದು ಕುಸಿದಿರುವ ತಾಲ್ಲೂಕಿನ ಆಡಳಿತವನ್ನು ಸುಧಾರಿಸುವ ಜೊತೆಗೆ ಅರೆಬರೆಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವತ್ತ ಗಮನ ನೀಡುವಂತೆ ಆಗ್ರಹಿಸಿದರು.
 
 ಶಿಕ್ಷಕರು ಹಾಗೂ ಪದವೀಧರ ಮತದಾರರು ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರನ್ನು  ನಿರೀಕ್ಷೆಯಂತೆ ಗೆಲ್ಲಿಸಿರುವುದು‌ ಸಂತೋಷ ತಂದಿದೆ.30 ವಿಧಾನಸಭೆ ವ್ಯಾಪ್ತಿವುಳ್ಳ ನೈರುತ್ಯ ಕ್ಷೇತ್ರದಲ್ಲಿ ಶಿಕ್ಷಕರು ಹಾಗೂ ಪದವೀಧರರು ನಿರೀಕ್ಷೆಗೂ‌‌ ಮೀರಿ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಯ ಶಕ್ತಿ ಮತ್ತಷ್ಟು ಬಲಗೊಂಡಿದೆ ಎಂದರು.
 
 ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ  ಬಿಜೆಪಿ ಪಕ್ಷದ ಅಭ್ಯರ್ಥಿಗಳು  ಅವಿರೋಧ ಆಯ್ಕೆಯಾಗುಲು ಅವಕಾಶ ಮಾಡಿಕೊಟ್ಟ ಪಕ್ಷದ ಮುಖಂಡರಿಗಳಿಗೆ  ಅಭಿನಂದನೆ ಸಲ್ಲಿಸುವುದಾಗಿ  ತಿಳಿಸಿದರು.  ಈ ಸಂದರ್ಭದಲ್ಲಿ  ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಪ್ರಕಾಶ್ ಅಗಸನಹಳ್ಳಿ, ಮುಖಂಡರಾದ ಎ.ಡಿ.ಉಮೇಶ್, ದೇವೇಂದ್ರಪ್ಪ  ಚನ್ನಾಪುರ, ಸುರೇಶ್ ಉದ್ರಿ, ಅಶೋಕ್ ಶೇಟ್, ಗುರುಮೂರ್ತಿ ಹಿರೇಶಕುನ, ಕೊಟ್ರೇಶ್ ಸ್ವಾಮಿ, ಓಂಕಾರಪ್ಪ, ಡಿ.ಶಿವಯೋಗಿ, ಗಿರಿಯಪ್ಪ ತವನಂದಿ, ವಿನಯ್ ಶೆರ್ವಿ,ಹರೀಶ್ ಇದ್ದರು.

RELATED ARTICLES
- Advertisment -
Google search engine

Most Popular

Recent Comments