Sunday, November 10, 2024
Google search engine
Homeಇ-ಪತ್ರಿಕೆಅ.26 ಕ್ಕೆ ಎಸ್.‌ಬಂಗಾರಪ್ಪ ಹುಟ್ಟುಹಬ್ಬ

ಅ.26 ಕ್ಕೆ ಎಸ್.‌ಬಂಗಾರಪ್ಪ ಹುಟ್ಟುಹಬ್ಬ

ಸುದ್ದಿಗೋಷ್ಠಿಯಲ್ಲಿ ಶ್ರೀ ಎಸ್.‌ಬಂಗಾರಪ್ಪ ವಿಚಾರ ವೇದಿಕೆ  ವೇಣು ಗೋಪಾಲ ನಾಯ್ಡು ಘೋಷಣೆ

ಶಿವಮೊಗ್ಗ : ಶ್ರೀ ಎಸ್.‌ಬಂಗಾರಪ್ಪ ವಿಚಾರ ವೇದಿಕೆ ಮತ್ತು  ಎಸ್. ಬಂಗಾರಪ್ಪ‌ ಫೌಂಡೇಷನ್ ವತಿಯಿಂದ  ಅ. ೨೬ ರಂದು  ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ  ಅವರ ಹುಟ್ಟುಹಬ್ಬ ಅಚರಿಸುತ್ತಿರುವ ಹಿನ್ನೆಲೆಯಲ್ಲಿ  ಹೆಸರಾಂತ ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ ಮೂವರು ಸಾಧಕರಿಗೆ ‘ಬಂಗಾರ’ ಪ್ರಶಸ್ತಿ ಪ್ರಕಟಿಸಿದೆ.

ಬೆಂಗಳೂರಿನ. ಶ್ರೀ ಎಸ್. ಬಂಗಾರಪ್ಪ ವಿಚಾರ ವೇದಿಕೆಯ ಅಧ್ಯಕ್ಷ  ವೇಣುಗೋಪಾಲ್ ನಾಯ್ಡು  ಅವರು  ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,  ಪ್ರತಿಷ್ಠಾನವು ಬಂಗಾರಪ್ಪನವರ ಹೆಸರಿನಲ್ಲಿ ಪ್ರತಿ ವರ್ಷ  ಬಂಗಾರ ಪ್ರಶಸ್ತಿಯನ್ನು ನೀಡುತ್ತ ಬಂದಿದೆ.  ಅದೇ ಹಿನ್ನೆಲೆಯಲ್ಲಿ ಈ‌ ಬಾರಿ ಮೂವರು ಸಾಧಕರಿಗೆ ಪ್ರಶಸ್ತಿ  ಘೋಷಿಸಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಫಲಕ ಹೊಂದಿದೆ ಎಂದರು.

ಸಾಹಿತಿ ಕುಂ ವೀರಭದ್ರಪ್ಪ ಅವರಿಗೆ ʼಸಾಹಿತ್ಯ ಬಂಗಾರʼ,  ಬೆಂಗಳೂರಿನ ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಎಚ್. ಜಿ.ಸುಶೀಲಮ್ಮ ಅವರಿಗೆʼ ಸೇವಾ ಬಂಗಾರʼ ಹಾಗೂ ಪೌರಾಣಿಕ ನಾಟಕ ಕಲಾವಿದೆ ಬೆಂಗಳೂರಿನ ಪ್ರತಿಭಾ ನಾರಾಯಣ್ ಅವರಿಗೆ ʼಕಲಾ‌ ಬಂಗಾರʼ ಪ್ರಶಸ್ತಿ ನೀಡಲಾಗುತ್ತಿದ್ದು, ಅ. ೨೬ ರಂದು ಸಂಜೆ ಸೊರಬದ ಬಂಗಾರ ಧಾಮದಲ್ಲಿ ನಡೆಯಲಿರುವ ಬಂಗಾರಪ್ಪ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಅಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್,  ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ, ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆಂದು ವಿವರಿಸಿದರು.

ಅ.26 ರಂದು  ಬೆಳಿಗ್ಗೆ ಸೊರಬದ ರಾಜಕುಮಾರ ರಂಗಮಂದಿರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಕೂಡ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ವಹಿಸಲಿದ್ದು, ಶಿರಾಜ್ ಅಹ್ಮದ್ ಹಾಗೂ ರವಿಕುಮಾರ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ 5ಕ್ಕೆ ರಾಜಕುಮಾರ್ ರಂಗಮಂದಿರದಿಂದ ಬಂಗಾರಧಾಮದವರೆಗೆ ಮೆರವಣಿಗೆ ನಡೆಯಲಿದೆ.ಆನಂತರ ನಡೆಯುವ ಕಾರ್ಯಕ್ರಮದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದರು.

RELATED ARTICLES
- Advertisment -
Google search engine

Most Popular

Recent Comments