ಜೈನ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಶಿವಮೊಗ್ಗ : ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ರೈತರು ಉತ್ತಮವಾದ ಬೆಳೆಯನ್ನು ಬೆಳೆಯಬಹುದು ಎಂದು ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಿಯದರ್ಶಿನಿ.ಎನ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆ ಸತತ 12 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜೈನ್ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ “ಭೂಮಿಯನ್ನು ಪುನಃ ಸ್ಥಾಪಿಸಿ ಮರುಭೂಮಿಕರಣ ತಡೆ ಮತ್ತು ಬರ ಎದುರಿಸುವುದು” ಎಂಬ ವಿಷಯದ ಅಡಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮ ಭೂಮಿಯ ಮಣ್ಣು ರಾಸಾಯನಿಕ ಗೊಬ್ಬರಗಳಿಂದ, ವಿಷ ಅನಿಲಗಳಿಂದ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪ್ರಸ್ತುತ ಶೇಕಡ ಎಷ್ಟು ಭಾಗ ಮಾಲಿನ್ಯವಾಗಿದೆ, ಶೇಕಡ ಮಣ್ಣಿನ ಫಲವತ್ತತೆಯನ್ನು ಎಷ್ಟು ಭಾಗ ಹೆಚ್ಚಿಸಬೇಕು ಹಾಗೂ ಫಲವತ್ತತೆಯನ್ನು ಹೆಚ್ಚಿಸಲು ನಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಿದ ಅವರು, ನಮ್ಮ ದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಬೇಕೆಂದು ಅತ್ಯದ್ಭುತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಹೌಸ್ ವಿದ್ಯಾರ್ಥಿಗಳಿಗೆ ಸ್ಕ್ಯಾವೆಂಜರ್ ಹಂಟ್ (ಪರಿಸರ ಜಾಗೃತಿ) ಚಟುವಟಿಕೆಯ ಮೂಲಕ ಪರಿಸರ ಪ್ರೇಮ ಮೂಡಿಸಲಾಯಿತು. ಟಾಡ್ಲೆರ್ಸ್ ಮಕ್ಕಳು ಪ್ರತಿ ತರಗತಿಗೆ ಒಂದು ಗಿಡ ನೆಟ್ಟು ಅದನ್ನು ಪೆÇೀಷಿಸುವ ಪ್ರಮಾಣವನ್ನು ಮಾಡಿದರು. ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳನ್ನು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಸಸಿಗಳನ್ನು ನೆಡಿಸಿದರು.
ಕಾರ್ಯಕ್ರಮದಲ್ಲಿ ಸಿಓಓ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯಕುಮಾರ್, ಶಿಕ್ಷಕರು, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.