ಭದ್ರಾವತಿ:ನಗರದ ಬಿಹೆಚ್ ರಸ್ತೆಯ ೨ ನೇ ವಾರ್ಡ್ ನ ಲೋಯರ್ ಹುತ್ತಾದ ಸರ್ಕಾರಿ ಪ್ರಾಥಮಿಕ ಶಾಲೆ ಅಕ್ಕ ಪಕ್ಕ ಮತ್ತು ಹಿಂಭಾಗದ ರಸ್ತೆಗಳನ್ನು ಯುಜಿಡಿ ಕಾಮಗಾರಿ ನಿಮಿತ್ತ ಅಗೆಯಲಾಗಿತ್ತು. ಆದರೆ ಕಾಮಗಾರಿ ಮುಗಿದು ಸುಮಾರ ೧೦ ೧೨ ವರ್ಷಗಳಾದರೂ ಅದನ್ನು ಮೊದಲಿನ ತರ ರಸ್ತೆ ನಿರ್ಮಾಣ ಮಾಡದ ಕಾರಣ ಅಲ್ಲಿನ ನಿವಾಸಿಗಳ ಓಡಾಟಕ್ಕೆ ತುಂಭಾ ತೋಂದರೆ ಆಗಿದೆ.
ಇನ್ನು ದ್ವಿಚಕ್ರ ವಾಹನಗಳ ಸವಾರರ ಗೋಳು ಹೇಳುವ ಹಾಗಿಲ್ಲ. ಬ್ಯಾಲೆನ್ಸಿಂಗ್ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಿದೆ. ಹೆಚ್ಚು ಕಡಿಮೆ ಆದರೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿಳಬೇಕು, ಇಲ್ಲವೆ ಎದುರು ಬರುವ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾದಂತಹ ಪರಿಸ್ಥಿತಿ ಉಂಟಾಗುತ್ತದೆ.ಹೆಂಗಸರು, ಮಕ್ಕಳು, ವೃದ್ದರು ಹಾಗು ದಿನಂಪ್ರತಿ ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ಹೋಗುವವರು ಇದೇ ರಸ್ತೆಯಲ್ಲಿ ತಿರುಗಾಡಬೇಕು. ಆಗ ಎಡವಿ ಬಿಳುವುದು ಸಹಜ. ಇದರಿಂದ ಅಪಘಾತ ಉಂಟಾಗಿ ಆಸ್ಪತ್ರೆ ವನ ವಾಸ ಉಂಟಾಗುತ್ತಿದೆ.
ಈ ತೊಂದರೆ ಬಗ್ಗೆ ಸಂಸದರಿಂದ ಹಿಡಿದು ನಗರಸಭೆ ಸದಸ್ಯರು, ಅಧಿಕಾರಿಗಳು, ಇಂಜೀನೀಯರ್‌ಗಳು, ಸಿಬ್ಬಂದಿಗಳಿಗೆ ಹಲವಾರು ಭಾರಿ ದೂರ ಸಲ್ಲಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ. ಎಲ್ಲದಕ್ಕಿಂತ ಆಶ್ವರ್ಯದ ಸಂಗತಿ ಎಂದರೆ ಈ ವಾರ್ಡ್ ನ ಸದಸ್ಯರಾದ ಗೀತಾ ರಾಜ್‌ಕುಮಾರ್ ರವರು ಈ ಅವಧಿಯ ನಗರಸಭೆಯ ಪ್ರಥಮ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
ಈ ಬಗ್ಗೆ ಪತ್ರಿಕೆ ಅಲ್ಲಿನ ಕೆಲ ನಿವಾಸಿಗಳನ್ನು ಮಾತನಾಡಿಸಿದಾಗ ಕಾಮಗಾರಿ ಮುಗಿದ ನಂತರ ಅದನ್ನು ಮೊಲಿನ ತರ ಸರಿಪಡಿಸಬೇಕು ರಸ್ತೆ ಕಾಮಗಾರಿ ಮಾಡಬೇಕು ಎಂಬ ನಿಯಮ ಇದೆ. ಆದರೆ ಅದನ್ನು ಗುತ್ತಿಗೆದಾರರು ಪಾಲಿಸುತ್ತಿಲ್ಲ. ಅರೆಬರೆ ಕಾಮಗಾರಿ ಮಾಡಿ ಕಾಮಗಾರಿಯ ಪೂರ್ತಿ ಹಣ ಪಡೆದುಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ರಸ್ತೆಯ ಅಗೆದ ಗುಂಡಿಯನ್ನು ಇದುವರೆಗೂ ಮುಚ್ಚಿಲ್ಲ. ಮುಚ್ಚುವ ಲಕ್ಷಣ ಕಾಣುತ್ತಿಲ್ಲ. ಆದರೆ ಈಗ ಯಾರು ಈ ರಸ್ತೆಯಲ್ಲಿರುವ ಗುಂಡಿಯನ್ನು ಮುಚ್ಚಬೇಕು ಅದರ ಕಾಮಗಾರಿಯನ್ನು ಯಾರು ಮಢಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನು ಈ ರಸ್ತೆಯ ಪಕ್ಕದಲ್ಲೆ ಸುಮಾರು ೮೦ ವರ್ಷಗಳ ಕಾಲದ ಹಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಕಟ್ಟಡ ಹಾಳಾಗುತ್ತಿದ್ದು ಇದರ ಜೊತೆಗೆ ಇದರ ಸುತ್ತಾ ಇರುವ ಕಾಂಪೌಂಡ್ ಬಿದ್ದು ದಶಕಗಳ ಕಾಲವಾದರೂ ಯಾರೂ ಸರಿಪಡಿಸಬೇಕು ಎಂದು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದರ ಪರಿಣಾಮ ಜಾನವಾರುಗಳಿಗೆ, ಸಾರ್ವಜನಿಕರಿಗೆ ಈ ಶಾಲೆಯ ಜಾಗ ಕಾಲು ದಾರಿಯಾಗಿದೆ. ರಾತ್ರಿ ವೇಳೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇದರ ಪರಿಣಾಮ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ.
ಎಲ್ಲದಕ್ಕಿಂತ ಬಹು ಮುಖ್ಯವಾಗಿ ಈ ಪ್ರದೇಶದ ಹತ್ತೀರ ಇರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು, ಶೋಭಾ ಯಾತ್ರೆಗಳು ಪ್ರಾರಂಭ ಆಗುವ ಸ್ಥಳವಾಗಿದೆ. ಆದರೂ ಈ ಬಗ್ಗೆ ಸಂಭಂಧಿಸಿದ ಯಾವ ಅಧಿಕಾರಿಗಳು ಗಮನಹರಿಸದಿರುವುದು ದುರಂತದ ಸಂಗತಿಯಾಗಿದೆ.ಇನ್ನಾದರೂ ಸಂಭಂಧಿಸಿದ ಅಧಿಕಾರಿಗಳು ತಮ್ಮ ದಿವ್ಯ ನಿರ್ಲಕ್ಷ ತೊರೆದು ಜಾಗೃತರಾಗಿ ಸಮಸ್ಯೆಗಳ ಪರಿಹಾರದ ಬಗ್ಗೆ ಕಾರ್ಯ ಪ್ರವೃತರಾಗಬೇಕು ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡುತ್ತಾರೆ.