ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಪತ್ರಕರ್ತರ ಸಮೂಹ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅತಂತ್ರರಾಗಿದ್ದಾರೆ ಮತ್ತು ಸಂಕ? ಎದುರಿಸುತ್ತಿದ್ದಾರೆ. ಸುದ್ದಿಯೇ ಮುಖ್ಯವಾಗಿ ಆರೋಗ್ಯದ ಬಗ್ಗೆ ತಮ್ಮ ಕಾಳಜಿ ಮರೆತಿದ್ದಾರೆ. ದೀಪದ ಬುಡದಲ್ಲಿ ಕತ್ತಲೆ ಇರುವಂತೆ ಅವರ ಬದುಕಾಗಿದೆ. ಸಂಕ?ದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು. ಸಂಕ?ದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ಚಿಕಿತ್ಸೆ ಸೌಲಭ್ಯ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.
ವರದಿಗಾರರು, ಡಿಟಿಪಿ, ಪತ್ರಿಕೆ ಹಂಚುವವರು, ಪ್ರಿಂಟಿಂಗ್ ವಿಭಾಗದವರು ಜೊತೆಗೆ ಸಂಪಾದಕರು, ದೃಶ್ಯ ಮಾಧ್ಯಮದವರು, ಛಾಯಾಗ್ರಾಹಕರು ಎಲ್ಲರೂ ಸಂಕ?ದಲ್ಲಿದ್ದಾರೆ. ಕೆಲವು ಪತ್ರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇಂತಹ ಸಂಕ?ದ ಸಂದರ್ಭದಲ್ಲಿ ಸರ್ಕಾರ ಕೂಡಲೇ ಪತ್ರಿಕಾ ಸಮೂಹಕ್ಕೆ ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.