ಸಂತ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಅನಾವರಣಗೊಂಡ ವಿಜ್ಞಾನ ಲೋಕ

ಶಿವಮೊಗ್ಗ : ಅದೊಂದು ವಿಜ್ಞಾನ ಲೋಕ… ಜಗತ್ತಿನ ಹಾಗೂ ದೈನಂದಿನ ಬದುಕಿನ ಹಲವಾರು ವೈಜ್ಞಾನಿಕ ವಿಸ್ಮಯಗಳು ಮತ್ತು ತಂತ್ರಜ್ಞ್ಞಾನ ಬಳಕೆಯ ಮಾದರಿಗಳು ಅಲ್ಲಿ ಅನಾವರಣಗೊಂಡಿದ್ದವು.
ಜೀವ ಸಂಕುಲಕ್ಕೆ ಸಂಬಂಧಿಸಿದಂತೆ ಜೀವಂತ ಪ್ರಾಣಿಗಳನ್ನೇ ಪ್ರದರ್ಶಿಸಲಾಗಿತ್ತು. ಚಿಣ್ಣರು ಆ ಪ್ರಾಣಿಗಳನ್ನು ಮುಟ್ಟುವ ಮೂಲಕ ಖುಷಿ ಪಟ್ಟರೆ ಪೋಷಕರು ಪ್ರಾಣಿಗಳ ಆಟಿಕೆಯನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದರು. ನಗರದ ಸಾಗರ ರಸ್ತೆಯಲ್ಲಿರುವ ಸಂತ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಕಂಡುಬಂದ ದೃಶ್ಯವಿದು.
೫ ರಿಂದ ೯ನೇ ತರಗತಿಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವಿಧ ಬಗೆಯ ಮಾದರಿಗಳನ್ನು ಮಾಡುವ ಮೂಲಕ ವಿಜ್ಞಾನ ಲೋಕವನ್ನೇ ಇಲ್ಲಿ ಸೃಷ್ಟಿ ಮಾಡಿದ್ದಾರೆಂದರೆ ತಪ್ಪಾಗಲಾರದು.
ಶಾಲೆಗೆ ಪ್ರವೇಶಿಸುವ ದ್ವಾರದಲ್ಲಿ ಬಾಯಿ ತೆರೆದು ನಿಂತಿರುವ ಗೋರಿಲ್ಲಾ ಮಾದರಿ ನಿರ್ಮಿಸಲಾಗಿದೆ. ಇದರ ಬಾಯೊಳಗಿಂದಲೇ ಪ್ರತಿಯೊಬ್ಬರೂ ಪ್ರವೇಶಿಸುವಂತಿದೆ. ಇದನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ತರಗತಿಯ ಕೊಠಡಿಗಳಲ್ಲಿ ವಿವಿಧ ಪ್ರಕಾರದ ನಮೂನೆಗಳು ನೋಡುಗರನ್ನು ತಮ್ಮತ್ತ ಆಕರ್ಷಿಸುತ್ತವೆ.
ಕಸದಿಂದಲೇ ರಸ ಎನ್ನುವಂತೆ ಅನುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು ಅವುಗಳ ಉಪ ಯೋಗವನ್ನು ಸಾರುವಂತಹ ಅನೇಕ ಮಾದರಿ ಗಳು ಇಲ್ಲಿ ನಿರ್ಮಾಣಗೊಂಡಿವೆ. ಇದರಿಂದ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ‍್ಯ ನಡೆದಿದೆ.
ಅಕ್ವಾ ಫೋನಿಕ್ಸ್‌ನಲ್ಲಿ ಬಿಡುಗಡೆಯಾಗುವ ಕಲುಷಿತ ನೀರನ್ನು ಗಿಡಗಳಿಗೆ ಹಾಯಿಸುವ ಮೂಲಕ ಆ ನೀರನ್ನೂ ಕೂಡಾ ಸದ್ಬಳಕೆ ಮಾಡಬಹುದು ಎಂಬುದನ್ನು ಅತ್ಯಂತ ಅಚ್ಚು ಕಟ್ಟಾಗಿ ಮಾದರಿ ಸಮೇತ ನಿರ್ಮಿಸಿರುವುದು ನೋಡುಗರಿಗೆ ಒಳ್ಳೆಯ ಸಂದೇಶ ನೀಡುತ್ತದೆ.
ಕೃಷಿಯಲ್ಲಿ ನೀರಿನ ಬಳಕೆ ಮತ್ತು ಕಡಿಮೆ ನೀರನ್ನು ಹೇಗೆ ಬಳಸಬೇಕು ಎಂಬುದನ್ನೂ ಸಹ ವಿಶೇಷ ರೀತಿಯಲ್ಲಿ ತೋರಿಸಲಾಗಿದೆ. ಸೌರವ್ಯೂಹಕ್ಕೆ ಸಂಬಂಧಿಸಿದಂತೆ ಮಾಡಿರು ವಂತಹ ಮಾದರಿ ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ ಅಲ್ಲದೆ, ಮಂಗಳಗ್ರಹದ ಬಗ್ಗೆ ನಮ್ಮ ವಿಜ್ಞಾನಿಗಳು ನಡೆಸಿರುವಂತಹ ಸಂಶೋಧನೆ ಪ್ರದರ್ಶಿಸಲಾಗುತ್ತಿದೆ.
ರಾಸಾಯನ ಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ರಾಸಾಯನಿಕ ಬದಲಾವಣೆಗಳು ಹೇಗೆ ಆಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ವಿವಿಧ ರಾಸಾಯನಿಕಗಳನ್ನು ಬಳಸಿ, ಪ್ರದರ್ಶಿಸಿದರು.
ಹೈಡ್ರಾಲಿಕ್ ಜೆಸಿಬಿ, ಡ್ರೋಣ್, ವಾಟರ್ ಟೆಸ್ಟಿಂಗ್, ಎಸ್ಕಿಲೇಟರ್, ವ್ಯಾಕ್ಯೂಮ್ ಕ್ಲೀನರ್, ವಾಟರ್ ಪಂಪ್, ವಿಂಡ್‌ಮಿಲ್, ಬೆಳಕು ಸರಳ ರೇಖೆಯಲ್ಲಿ ಪ್ರಸಾರವಾಗುವ ವಿಧಾನ, ರೂಮ್ ಹೀಟರ್, ಸೋಲಾರ್ ಸಿಸ್ಟಮ್, ಹೈಡ್ರೋ ಎಲೆಕ್ಟ್ರಿಕ್ ಎಲಿವೇಟರ್, ಮಿನಿ ಜನರೇಟರ್, ಹೈಡ್ರಾಲಿಕ್ ಪವರ್, ಪ್ರೆಷರ್ ಕುಕ್ಕರ್‌ನಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಬಳಸಿ ಕೊಂಡು ವಿದ್ಯುತ್‌ನ್ನು ಉತ್ಪಾದಿಸುವ ವಿಧಾನ… ಹೀಗೆ ಹತ್ತು ಹಲವು ಮಾದರಿ ಗಳು ವಸ್ತು ಪ್ರದರ್ಶನದಲ್ಲಿ ಕೇಂದ್ರ ಬಿಂದುಗಳಾಗಿದ್ದವು.

LEAVE A REPLY

Please enter your comment!
Please enter your name here