ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸಹಕಾರಿ : ಪ್ರೊ.ಆರ್.ವಿ.ಪ್ರಸಾದ್

ಶಿವಮೊಗ್ಗ : ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ನಾಟಕ, ನೃತ್ಯ, ಚಿತ್ರಕಲೆಗಳು ಮಾತ್ರವಲ್ಲದೆ ಹಲವು ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಆಯ್ಕೆಯಾಗುವ ಪ್ರತಿಭೆಗಳಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಲಿದೆ ಎಂದು ಪಶು ವೈದ್ಯಕೀಯ ವಿವಿಯ ಕುಲಪತಿ ಪ್ರೊ.ಆರ್.ವಿ.ಪ್ರಸಾದ್ ಹೇಳಿದರು.
ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲ ಯದ ೧೩ನೇ ಅಂತರ ಮಹಾವಿದ್ಯಾಲಯ ಯುವಜನೋತ್ಸವಕ್ಕೆ ಕುಲಪತಿ ಪ್ರೊ.ಆರ್.ವಿ. ಪ್ರಸಾದ್ ಇಂದು ಚಾಲನೆ ನೀಡಿದರು.
ಯುವಜನೋತ್ಸವದಲ್ಲಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಗಳು ಹಾಗೂ ಪ್ರತಿಭೆಗಳ ಅನಾವರಣ ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ಪರಸ್ಪರ ವಿಶ್ವಾಸ, ಸಹೋದರತೆ, ಧೈರ್ಯ, ಸಾಹಸ ಮನೋಭಾವವನ್ನು ಸಹ ಮೂಡಿಸು ತ್ತದೆ. ಇದು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆರಂಭವಾದ ಮೂರು ದಿನಗಳ ಯುವ ಜನೋತ್ಸವದಲ್ಲಿ ವಿಶ್ವವಿದ್ಯಾಲಯದ ೭ ಕಾಲೇಜುಗಳ ೧೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ೨೧ವೈವಿಧ್ಯಮಯ ಸ್ಪರ್ಧೆ ಗಳು ನಡೆಯಲಿವೆ. ಸ್ಪರ್ಧೆಗಳಿಗಾಗಿ ಕಾಲೇಜಿ ನಲ್ಲಿ ಮೂರು ಪ್ರತ್ಯೇಕ ವೇದಿಕೆಗಳನ್ನು ಗುರುತಿಸ ಲಾಗಿದ್ದು, ೪೦ ತಜ್ಞರು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ ಎಂದರು.
ಮನೋ ವೈದ್ಯೆ ಡಾ|| ಕೆ.ಎಸ್.ಪವಿತ್ರ ಮಾತನಾಡಿ, ಪ್ರಾಣಿ ಹಾಗೂ ಪರಿಸರದಿಂದ ನಾವು ಕಲಿಯುವುದು ಬಹಳಷ್ಟಿದೆ. ಇದೇ ರೀತಿ ಪಶುವೈದ್ಯರಿಂದ ಮಾನವ ವರ್ತನೆಗಳ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹು ದಾಗಿದೆ. ಕಲೆ ಮತ್ತು ವಿಜ್ಞಾನ ಪರಸ್ಪರ ಪೂರಕ ವಾಗಿದೆ ಎಂದರು.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ,ಎಚ್.ಶಿವಾನಂದ ಮೂರ್ತಿ ಮಾತನಾಡಿ, ದೇಶದ ೧೭೦ವಿಶ್ವವಿದ್ಯಾಲಯಗಳ ಪೈಕಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದರು.
ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾ ಲಯದ ಡೀನ್ ಡಾ.ಕೆ.ಸಿ.ವೀರಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ.ಯಶವಂತಕುಮಾರ್, ಡಾ.ಆನಂದ ಕೆ.ಜೆ, ಡಾ.ಶೀಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here