Monday, July 22, 2024
Google search engine
HomeUncategorizedತುರ್ತು ಪರಿಸ್ಥಿತಿಯಲ್ಲಿಜೈಲು ವಾಸ ಅನುಭವಿಸಿದ್ದ ನಾಯಕ

ತುರ್ತು ಪರಿಸ್ಥಿತಿಯಲ್ಲಿಜೈಲು ವಾಸ ಅನುಭವಿಸಿದ್ದ ನಾಯಕ

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ದೇಶದಲ್ಲಿ ತಂದಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದ್ದ ಅನೇಕ ನಾಯಕರ ಪೈಕಿ ಎಂ.ಬಿ. ಭಾನುಪ್ರಕಾಶ್‌ ಕೂಡ ಒಬ್ಬರು. ಅವರು ೧೯೬೯ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ೧೯೭೫ ತುರ್ತು ಪರಿಸ್ಥಿತಿಯಲ್ಲಿ ಜೈಲ್‌ವಾಸ ಅನುಭವಿಸಿ, ೧೯೭೭-೧೯೮೩ ಆರ್‌ಎಸ್‌ಎಸ್‌ನಲ್ಲಿ ವಿವಿಧ ಜವಾಬ್ಧಾರಿ ನಿರ್ವಹಣೆ, ೧೯೮೩-೧೯೮೭ ರಾಜ್ಯ ಕಿಸಾನ್ ಸಂಘದ ಪ್ರಧಾನಕಾರ್ಯದರ್ಶಿ, ೧೯೮೭-೧೯೯೩ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
೧೯೯೪-೨೦೦೦ ಭಾರತೀಯ ಜನತಾ ಪಕ್ಷದ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ, ೨೦೦೦-೨೦೦೫ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ, ೨೦೦೩ ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧೆ, ೨೦೦೩-೨೦೦೬ ಭಾರತೀಯ ಜನತಾ ಪಕ್ಷದ ಶಿವಮೊಗ್ಗ ಜಿಲ್ಲೆ ಜಿಲ್ಲಾಧ್ಯಕ್ಷರಾಗಿ ಪುನರ್ ಆಯ್ಕೆಗೊಂಡು, ೨೦೦೭-೨೦೧೦ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನಂತರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ, ಪಕ್ಷದ ಸಂಘಟನೆಯಲ್ಲಿ ಮಲೆನಾಡು ಕ್ಲಸ್ಟರ್ ವಿಭಾಗದ ಪ್ರಭಾರಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಇವರು ಪತ್ನಿ, ೩ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಮಿತ್ರರು, ಹಿತೈಷಿಗಳನ್ನಗಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments