Saturday, October 12, 2024
Google search engine
HomeUncategorizedಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಿ: ರಾಜ್ಯ ಸರ್ಕಾರಕ್ಕೆ ಕೆ.ಎಸ್.‌ ಈಶ್ವರಪ್ಪ ಒತ್ತಾಯ

ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಿ: ರಾಜ್ಯ ಸರ್ಕಾರಕ್ಕೆ ಕೆ.ಎಸ್.‌ ಈಶ್ವರಪ್ಪ ಒತ್ತಾಯ

ಶಿವಮೊಗ್ಗ: ಯಾವುದೇ ಸರ್ಕಾರದಲ್ಲಿ ನಡೆದ ಹಗರಣಗಳನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಿಬಿಐ ವಹಿಸಿ, ತನ್ನ ಹೆಸರು ಉಳಿಸಿಕೊಳ್ಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.‌ ಈಶ್ವರಪ್ಪ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಮತ್ತು ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಗರಣವೇ ನಡೆದಿಲ್ಲ ಎಂಬಂತೆ ವರ್ತಿಸುತ್ತಿದೆ. ಮುಖ್ಯಮಂತ್ರಿಗಳು ಉತ್ತರ ಕೊಡದೆ ಜಾರಿಕೊಳ್ಳುತ್ತಿದ್ದಾರೆ, ಯಾವುದೇ ಸರ್ಕಾರದಲ್ಲಿ ಯಾವುದೇ ಹಗರಣಗಳು ನಡೆದಿರಲಿ ಅದನ್ನು ಸಿ ಬಿ ಐ ತನಿಖೆಗೆ ಅವರು ಒಪ್ಪಿಸಲಿ, ಸತ್ಯಗಳು ತಾನಾಗಿಯೇ ಹೊರಗೆ ಬರುತ್ತವೆ ಎಂದರು.

ಒಬ್ಬರಿಗೊಬ್ಬರು ಮೇಲೆ ಆಪಾದನೆ ಬೇಡ. ಭೋವಿ ಅಭಿವೃದ್ಧಿ ನಿಗಮದ್ದೂ ಹಗರಣ ಹೊರಗೆ ಬಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ  ಹಗರಣ,  ಮೂಡಾದಲ್ಲಿನ ಹಗರಣ, ಎಲ್ಲವನ್ನು ನೋಡಿದರೆ ರಾಜ್ಯ ತಲೆತಗ್ಗಿಸುವಂತಾಗಿದೆ. ಎರಡೂ ಪಕ್ಷ ಅಧಿಕಾರದಲ್ಲಿರುವಾಗ ನಡೆದ ಹಗರಣವನ್ನು  ಸಿಬಿಐಗೆ ವಹಿಸಿದರೆ ಭ್ರಷ್ಠರು ಹೊರಗೆ ಬರ್ತಾರೆ  ಎಂದರು.

ಶಿವಮೊಗ್ಗದ ಆಶ್ರಯ ಬಡಾವಣೆಗೆ ಸಂಬಂಧಿಸಿದಂತೆ ಮತ್ತು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಿಂತು ಹೋಗಿರುವ ವಿದ್ಯಾರ್ಥಿವೇತನ ಹಾಗೂ ಇತರ ಸೌಲಭ್ಯಗಳಿಗಾಗಿ ಜು. ೨೭ರಂದು ಸಚಿವರಾದ ಜಮೀರ್ ಅಹಮದ್ ಮತ್ತು ಸಂತೋಷ ಲಾಡ್‌ಅವರನ್ನು ಭೇಟಿ ಮಾಡಿ ಚರ್ಚಿಸಿ ನ್ಯಾಯ ಒದಗಿಸಲಾಗುವುದು ಎಂದರು.
ಕಟ್ಟಡ ಕಾರ್ಮಿಕರ 10,632 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ  ವೇತನ,  ವೈದ್ಯಕೀಯ ಧನ ಸಹಾಯ, ಅಪಘಾತದಲ್ಲಿ ಮರಣ ಹೊಂದಿದವರಿಗೆ ಧನಸಹಾಯಗಳು ಸೇರಿ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಆಗಲಿಲ್ಲ. ಹಾಗಾಗಿ ಜು.27 ರಂದು ಜಮೀರ್ ಮತ್ತು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ರನ್ನ ಭೇಟಿ ಮಾಡುವೆ ಎಂದರು.

RELATED ARTICLES
- Advertisment -
Google search engine

Most Popular

Recent Comments