Sunday, September 8, 2024
Google search engine
Homeಅಂಕಣಗಳುಲೇಖನಗಳುಜಿ.ಪಂ. ಸಾಮಾನ್ಯ ಸಭೆಯಲ್ಲಿ ಪಡಿತರ ಚೀಟಿಯದ್ದೇ ಗದ್ದಲ

ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪಡಿತರ ಚೀಟಿಯದ್ದೇ ಗದ್ದಲ

ಶಿವಮೊಗ್ಗ : ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿಯನ್ನು ನೀಡದೇ ಸತಾಯಿಸುತ್ತಿದ್ದಾರೆ ಎಂದು ಇಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅಧ್ಯ ಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಆರ್.ಸಿ. ಮಂಜುನಾಥ್, ಜಿಲ್ಲೆಯಲ್ಲಿ ೫೫,೦೩೨ ಫಲಾನು ಭವಿಗಳು ಪಡಿತರ ಚೀಟಿಗಾಗಿ ಅರ್ಜಿ ಹಾಕಿ, ಪ್ರತಿ ನಿತ್ಯವೂ ಸಹ ಸಂಬಂಧಪಟ್ಟ ಕಛೇರಿಗೆ ಅಲೆಯುತ್ತಿ ದ್ದಾರೆ. ಆದರೆ ಇದುವರೆಗೂ ಆ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕೆ.ಈ. ಕಾಂತೇಶ್, ಆಹಾರ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ನಿರಾಸಕ್ತಿ ವಹಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡುತ್ತಿಲ್ಲ. ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದರು.
ಇದರಿಂದ ಅಸಮಾಧಾನಗೊಂಡ ಕಲಗೋಡು ರತ್ನಾಕರ್, ಸರ್ಕಾರದ ವಿರುದ್ಧ ಮಾತನಾಡ ಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಬಿಪಿಎಲ್ ಪಡಿತರ ಚೀಟಿ ವಿಷಯ ರಾಜಕೀಯ ಚರ್ಚೆವಾಗಿ ಪರಿವರ್ತನೆಗೊಂಡಿತು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಈ ಹಿಂದೆ ಇದ್ದ ರಾಜ್ಯ ಸರ್ಕಾರದ ಅವಧಿಯಲ್ಲಿ ನಿಗಧಿತ ಕುಟುಂಬಗಳಿಗಿಂತಲೂ ಅಧಿಕವಾಗಿ ಪಡಿತರ ಚೀಟಿ ವಿತರಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಅದೆಲ್ಲ ವನ್ನು ಸರಿಪಡಿಸಿ, ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ಪಡಿತರ ಚೀಟಿ ವಿತರಿಸುವಂತಹ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಲಕ್ಷ್ಮೀ ನಾರಾಯಣ್ ರೆಡ್ಡಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದುವರೆಗೂ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೩೧೭೧೪ ಅರ್ಜಿ ಗಳು ಬಂದಿವೆ. ಇದರಲ್ಲಿ ೨೮೫೯೭ ಅರ್ಜಿಗಳ ಡಾಟಾ ಎಂಟ್ರಿ ಆಗಿದೆ. ಎರಡನೇ ಹಂತದಲ್ಲಿ ೧೬೨೪೭ ಅರ್ಜಿಗಳು ಬಂದಿವೆ. ೪೦೦೦ ಕ್ಕೂ ಅಧಿಕ ಅರ್ಜಿಗಳು ಒಂದೇ ಹೆಸರಿನಲ್ಲಿ ಎರಡೆರೆಡು ಬಂದಿದ್ದರಿಂದ ಅಂತವು ಗಳನ್ನು ರದ್ದುಪಡಿಸಲಾಗಿದೆ ಎಂದರು.
ಒಟ್ಟು ೪೭೯೬೧ ಅರ್ಜಿಗಳು ಬಿಪಿಎಲ್‌ಗಾಗಿ ಬಂದಿವೆ. ಇದರಲ್ಲಿ ೧೮೬೬೬ ಅರ್ಜಿಗಳನ್ನು ಪರಿ ಶೀಲಿಸಿ, ಕಾರ್ಡ್‌ಗಳ ಮುದ್ರಣಕ್ಕಾಗಿ ಕಳುಹಿಸಿ ಕೊಡಲಾಗಿದೆ. ಕಾರ್ಡ್‌ಗಳು ಮುದ್ರಣಗೊಂಡ ನಂತರ ಅವುಗಳನ್ನು ಅಂಚೆ ಮೂಲಕ ಆಯಾ ಫಲಾನುಭವಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಇಡೀ ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. ೬೦ ರಷ್ಟು ಪಡಿತರ ಚೀಟಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸದಸ್ಯ ಜಿ.ಪಿ. ಯೋಗೀಶ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗಳಲ್ಲಿ ಒಂದಾದ ಉಜ್ವಲ್ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ವಿತರಣಾ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಲಾಗಿದೆ. ಒಂದು ಪಕ್ಷದ ಮುಖಂಡರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಇದಕ್ಕಿ ರುವ ಮಾನದಂಡವೇನು ಎಂದು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕೆಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆಯಿತು.

RELATED ARTICLES
- Advertisment -
Google search engine

Most Popular

Recent Comments