ಲೇಖನ : ಶಾಂತಪ್ರಿಯ
ಈ ಹೊತ್ತಿನ ಯುವ ಶಕ್ತಿ ಏನು ? ಎತ್ತ ಎನ್ನುವ ಪ್ರಶ್ನೆಯೇ ಭರವಸೆಗಳ ಬದಲಿಗೆ ಆತಂಕವನ್ನು ಸೃಷ್ಟಿಸುವಂತಾಗಿರುವುದು ವಿಪರ್ಯಾಸ ಎನ್ನಬ ಹುದು. ಹತ್ತಾರು ಬಲಿಷ್ಠ ಯುವಕರಿದ್ದರೆ ಭವ್ಯ ಭಾರತಕಟ್ಟಬಲ್ಲನೆಂದು ವಿವೇಕಾನಂದರ ಮಾತುಗಳಲ್ಲಿ ಅಗಾಧತೆಯ ಅರ್ಥ ಹತ್ತು ಹಲವು ನೆಲೆಗಳದ್ದಾಗಿತ್ತು.
ಅವರಲ್ಲಿ ಭಾರತೀಯತೆಯ ಶಕ್ತಿ, ಸಂಸ್ಕೃ ತಿಯ ವ್ಯಾಖ್ಯಾನ, ಬೌದ್ಧಿಕತೆಯ ಸಂಘರ್ಷ, ವೈಚಾರಿಕ ನಿಲುವು, ಮಾನಸಿಕ- ದೈಹಿಕ ಪ್ರಾಬಲ್ಯದ ನಿರೀಕ್ಷೆಗಳು ಅಡಕವಾಗಿದ್ದವು. ಹಾಗಾಗಿ ಇದು ಬಲಿಷ್ಠರನ್ನು ಕಟ್ಟಬೇಕಾದ ಕಟ್ಟಬಹುದಾದ ಸಾಧ್ಯತೆಗೆ ಸಂಬಂಧಿಸಿದ ಸಂಗತಿಯೂ ಆಗಿತ್ತು.
ಹಾಗಾದಾಗ ಅವರನ್ನು ರೂಪಿಸುವ ಶಕ್ತಿ ಯಾವುದು? ಹಾಗೆನ್ನುವ ಹೊತ್ತಿಗೆ ಶಿಕ್ಷಣವೇ ಮೊದಲ ಆದ್ಯತೆಯಾಗಿ ಕಾಣುತ್ತದೆ. ಶಿಕ್ಷಣ ಎನ್ನುವುದು ಕೇವಲ eನದ ಅರ್ಥವಲ್ಲ. ಅದು ಎಲ್ಲ ಸೃಜನಶೀಲವಾದ ಸ್ವಾಭಿಮಾನದ, ಸ್ವಂತಿಕೆಯ, ಕಸುವಿನ ಸಂಕೇತ.
ತಾನು ತಾನಾಗುತ್ತಲೇ ಎಲ್ಲವೂ ಆಗಬಹು ದಾದ ಚೇತನ. ಇಲ್ಲಿಂದಲೇ ವಾಲ್ಮೀಕಿ, ವ್ಯಾಸ, ಏಕಲವ್ಯ ,ಬುದ್ಧ, ಬಸವ, ಗಾಂಧಿ, ಅಂಬೇ ಡ್ಕರ್ ಅವರೆಲ್ಲಾ ರೂಪುಗೊಳ್ಳುತ್ತಾರೆ ತಮ್ಮ ಮತ್ತು ತಮ್ಮ ಅರಿವಿನ ಎತ್ತರಕ್ಕೆ ಹೊಸ ವ್ಯಾಖ್ಯಾನ ಬರೆಯಲು ಬಯಸುತ್ತಾರೆ. ಈ ಬಗೆಯ ಉದಾಹರಣೆಗಳೆಲ್ಲ ಕೇವಲ ಪುರಾಣ, ಇತಿಹಾಸ ಗಳಷ್ಟೇ ಯಾಕೆ ಆಗಬೇಕು? ಈ ಪ್ರಶ್ನೆಯಲ್ಲೇ ವರ್ತಮಾನದ ವಿಫಲತೆಯ ಉತ್ತರಗಳಿವೆ.
ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಯುವಶಕ್ತಿಯನ್ನು ಬಲಗೊಳಿಸು ತ್ತಿದೆಯೇ? ಎನ್ನುವ ಪ್ರಶ್ನೆ ಸಮಸ್ಯೆ ಯಾಗಿಯೂ ಕಾಡತೊಡಗುತ್ತದೆ. ಸಾಮಾನ್ಯ ವಾಗಿ ಈ ಬಗೆಯ ಪ್ರಶ್ನೆಗಳು ಆತಂಕಗಳಾಗಿ ಕಾಡುವುದು ಸಹ ಭರವಸೆಗಳು ಮಂಕಾಗಿದ್ದಾಗಲೇ ಎನ್ನಬಹುದು. ಈಗಿನ ಶೈಕ್ಷಣಿಕ ವ್ಯವಸ್ಥೆಯಾದರೂ ದಿಢೀರನೆ ರೂಪು ಗೊಂಡಂತೆ ಕಂಡು ಬರುವುದಿಲ್ಲ. ಅದಕ್ಕೆ ಬೆಳವಣಿಗೆಯ ಪರಂ ಪರೆಯಿಂದ ಅನೇಕ ಘಟ್ಟ ಗಳು-ಮಜಲುಗಳಿವೆ. ಎಲ್ಲ ಬಗೆಯ ಮಿತಿ ತೊಡಕು ಗಳಿಂದ ಪಾರಾಗುತ್ತಲೇ ತನ್ನನ್ನು ತಾನು ಉಳಿಸಿ ಕೊಂಡಿದೆ. ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವುದೇ ಅದರ ನಿರಂತರ ವ್ಯಾಖ್ಯಾನ. ಅದು ಅವಲೋಕನವೂ ಹೌದು. ಗುರುಕುಲ ದಿಂದ ಶಾಲೆಯವರೆಗೆ ಬೆಳೆದ ಹಾದಿಯಲ್ಲಿ ಶ್ರಮಿಸಿದವರು. ಮಾದರಿ ಗಳಾದದ್ದು ಅಪಾರ. ಆದರೆ ಆಧುನಿಕತೆಯ ಹೊತ್ತಿಗೆ ಅದು ಸವಾಲಾದದ್ದು ಹೇಗೆ ? ಎನ್ನುವುದೇ ನಿರಂತರವಾದ ತಾಕಲಾಟಗಳನ್ನು ಸೃಷ್ಟಿಸಿಬಿಟ್ಟಿದೆ.
ಶಿಕ್ಷಣ ಎಂದರೆ ವಿದ್ಯಾಭ್ಯಾಸ ಎನ್ನುವುದಲ್ಲ. ಪದವಿಯಲ್ಲ ಅದು ಉದ್ಯೋಗಕ್ಕೆ ಸಿದ್ಧಗೊಳಿ ಸುವ ಕಾರ್ಖಾನೆಯಂತೂ ಖಂಡಿತಾ ಅಲ್ಲ. ಸರ್ವಾಂಗೀಣ ಎನ್ನುವ ಸಹಜ ಅರ್ಥದಲ್ಲಿ ಅದು ಸೃಷ್ಟಿಯಿಂದ ತಮಷ್ಠಿಯೆಡೆಗೆ ಚಲಿಸುವ ಮಹತ್ತರವಾದ ಸದಾಶಯಗಳನ್ನು ಹೊಂದಿ ರುವಂತಹುದು.
ಶಿಕ್ಷಕ, ಸಂಬಳ, ಶಿಕ್ಷೆ , ಸಮಸ್ಯೆಗಳು, ಮಾಧ್ಯಮ, ಭಾಷೆ, ರಾಜಕೀಯ, ವಂತಿಗೆ, ಧಾರ್ಮಿಕ, ಅಬದ್ಧತೆ, ಸ್ವಾರ್ಥ ಹೀಗೆ ಹಲವು ಬೇಡವಾದ ಮಾದರಿಗಳನ್ನು ಕಣ್ಣೆದುರು ಇರಿಸಿ ಕೊಂಡ ವ್ಯವಸ್ಥೆಯನ್ನು ಜ್ಞಾನಕ್ಕೆ ಪರ್ಯಾ ಯವಾಗಿ ಕಟ್ಟಿಸುವುದಾದರೂ ಹೇಗೆ ? ಇಲ್ಲಿಂದ ಕರ್ಣ, ಏಕಲವ್ಯ, ಅಭಿಮನ್ಯುವನ್ನು ಬಯಸುವುದಾದರೂ ಹೇಗೆ ? ಶಿಕ್ಷಣವು ಆದರ್ಶದ ಬದಲಿಗೆ ಪ್ರತಿಷ್ಠೆ ಯನ್ನು, ವ್ಯಾಪಾರ ವನ್ನೋ ತನ್ನ ಪ್ರಧಾನ ಕಾಳಜಿಯನ್ನಾಗಿಸಿ ಕೊಂಡಾಗ ಅಲ್ಲಿಂದ ಹೊರ ಬರುವ ಯುವ ಜನಾಂಗವನ್ನು
ಶಕ್ತಿ ಎಂದು ಗುರುತಿಸುವುದಾದರೂ ಹೇಗೆ ?
ಮನೆಯೇ ಮೊದಲ ಪಾಠಶಾಲೆ ಎನ್ನುವುದ ರಾಚೆಗೆ, ಶಾಲೆ ಯನ್ನು ಬಂಧೀಖಾನೆ ಯಂತೆ ಮಾಡಿ ಅರಿವಿಲ್ಲದ ವಯಸ್ಸಿ ನಿಂದಲೇ ಡಾಕ್ಟರ್, ಇಂಜಿನಿಯರ್ ಆಗಬೇಕಾದ ಕೌಟುಂ ಬಿಕ ಒತ್ತಾಸೆಗಳಲ್ಲಿ ಜ್ಞಾನ ಎನ್ನುವುದು ಕೊಂಡು ಕೊಂಡ ದಿನಸಿಯಾಗಿದೆ.
ಬಡತನಕ್ಕೂ ಉತ್ತಮ ವಿದ್ಯಾಭ್ಯಾಸಕ್ಕೂ ಸಂಬಂಧವೇ ಹೊಂದುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಸ್ಪೃಶ್ಯ- ಅಸ್ಪೃಶ್ಯದ ಹೊಸ ಅರ್ಥ ಗಳು ಈಗ ಪಡೆಯುವ ಪದವಿಗಳ ಸಂದರ್ಭ ದಲ್ಲೇ ಬೇರೆ ರೂಪದಲ್ಲಿ, ಸೃಷ್ಟಿಗೊಳ್ಳುತ್ತಿವೆ.
ಲಕ್ಷ್ಮೀಪುತ್ರರಷ್ಟೇ ಸರಸ್ವತಿಯ ವಾರಸು ದಾರರಾಗಬೇಕಾದ ದುರಂತಕ್ಕೆ ಈ ವ್ಯವಸ್ಥೆ ಮೈ ಚಾಚಿಕೊಂಡು ನಿಂತಿದೆ. ಆದರ್ಶ ಶಿಕ್ಷಣ ಮತ್ತು ಜ್ಞಾನಗಳು ವಾರ್ಷಿಕ ಪುರಸ್ಕಾರಗಳ ನಡುವೆ ಕಳೆದು ಹೋಗುತ್ತಿವೆ. ಶಿಕ್ಷಣ ತನ್ನ ಮೂಲಭೂತ ನಿರೀಕ್ಷೆ ಮತ್ತು ಸದಾಶಯಗಳಿಗೆ ವಿಮುಖವಾ ಗುತ್ತಿರುವ ಈ ಹೊತ್ತಿಗೆ ಹೊಸದಾರಿಗಳು ಎನ್ನುವ ಹುಡು ಕಾಟಕ್ಕೂ ಅವಕಾಶ ಮತ್ತು ವ್ಯವಧಾನಗಳು ಇಲ್ಲದಂತಾಗಿವೆ.
ಇದು ಆಡಳಿತ ಕಾನೂನುಗಳಿಂದಷ್ಟೇ ಸರಿಯಾಗ ಬಹುದಾದುದಲ್ಲ. ಬದ್ಧತೆಯ ನೈತಿಕ ಕಾಳಜಿಗಳೂ ಇಲ್ಲಿ ಮುಖ್ಯ. ಆದರೆ ಅದರ ವ್ಯಾಖ್ಯಾನವೇ ವಿಪರ್ಯಾಸವನ್ನು ಸೃಷ್ಟಿಸುವಂತಾಗಿದ್ದು, ಪ್ರಶ್ನೆಗಳು ಸಮಸ್ಯೆಗಳಾಗುತ್ತಿವೆ.ಶಿಕ್ಷಣ ವ್ಯವಸ್ಥೆಯು ಹೀಗೊಂದು ಗೊಂದಲ ದಲ್ಲಿ ಕದಲುತ್ತಿರುವ ಹೊತ್ತಿಗೆ ನಮ್ಮ ಯುವ ಶಕ್ತಿಯ ಮಾದರಿ ಆದರ್ಶಗಳಾದರೂ ಯಾವುದು? ತೀರಾ ಅಲ್ಲಿಯೂ ಆಶಾದಾಯಕ ವಾದ ನಿರೀಕ್ಷೆ ಗಳಿಲ್ಲ ಎನ್ನಬಹುದು … ಫ್ಯಾಷನ್, ಮದ್ಯ- ಮಾದಕತೆ, ಕ್ಲಬ್-ಪಬ್, ಲೈವ್‌ಬ್ಯಾಂಡ್, ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ನಡುವೆ ಅವರು ಕಳೆದುಹೋಗುತ್ತಿದ್ದಾರೆ.
ಅನ್ನಿಸದ ಹಾಗೆ ಸಿದ್ಧಾಂತ ರೂಪುಗೊಳ್ಳು ತ್ತಲೇ ಅದು ಅವರವರ ಬದುಕು ಮತ್ತು ತತ್ವ ಎನ್ನುವ ಪರಿಕಲ್ಪನೆಗಳೂ ಹರಡಿ ಕೊಳ್ಳುತ್ತವೆ. ಸಂಸ್ಕೃತಿಗೆ ಆಧುನಿಕತೆಯನ್ನೇ ಪರ‍್ಯಾಯವಾಗಿಸಿ ಕೊಳ್ಳುವ ಬಹುಪಾಲು ಜನಜೀವನದಲ್ಲಿ ಭರವಸೆಯ ಫಸಲುಗಳು ಕಾಣಿಸುತ್ತಿಲ್ಲ.
ಅವರನ್ನು ರೂಪಿಸುವ ಕುಟುಂಬ ಸಂಬಂಧ, ಶಿಕ್ಷಣ ವ್ಯವಸ್ಥೆ ಎಲ್ಲವೂ ತಮ್ಮಷ್ಟಕ್ಕೆ ಜವಾಬ್ದಾರಿ ಗಳಿಂದ ನುಣುಚಿಕೊಳ್ಳುವ ಓಟದಲ್ಲಿರುವಂತೆ ಕಾಣುತ್ತಲೇ, ಪರಸ್ಪರ ಪೂರಕ-ಪರ್ಯಾಯ ವಾಗಬೇಕಾದ ಎಲ್ಲವೂ ವಿಮುಖತೆಯ ಹಾದಿ ಯಲ್ಲಿದೆ. ಯಾರ ಮೇಲೂ ಪೂರ್ಣ ಜವಾ ಬ್ದಾರಿ ಯ ಅರ್ಥಗಳನ್ನು ಹೊರಿಸಿ ಸುಮ್ಮನಾ ಗುವುದು ಹೇಗೆ? ಹೀಗೆಲ್ಲಾ ಆಲೋಚಿಸುವುದು ಆಧುನಿ ಕತೆಯ ತುರ್ತು ಎನಿಸುವುದು ನಿಜ ಎನ್ನಿಸುವು ದಾದರೂ ಎಲ್ಲವೂ ಮುಗಿದೇ ಹೋಯಿತು. ಎನ್ನುವಂತೆಯೂ ಇಲ್ಲ. ಎಂಬ ಆಶಾವಾದದಲ್ಲಿ ಬದುಕು ಕಟ್ಟಿಕೊಳ್ಳುವುದಷ್ಟೆ ನಮ್ಮೆದರು ಇರುವ ಏಕೈಕ ಸಂಗತಿ.
ಕುಟುಂಬದ ಪ್ರಾಮಾಣಿಕ ಕಾಳಜಿಯಿಂದ ಆರಂಭವಾಗಿ ವಿದ್ಯಾಭ್ಯಾಸದ ಬದ್ಧತೆಯನ್ನು ಜೊತೆಗೂಡಿ ಯುವಸಕ್ತಿಯ ಚಿಂತನೆಗಳನ್ನು ಸರಿದೂಗಿಸುವಂತಾಗಬೆಕು. ಅವರಲ್ಲಿ ಅರಿವು ಮೂಡಿಸುವ, ನಿತ್ಯದ ಎಚ್ಚರಗಳು ಆಗಬೇಕು. ಇದೊಂದು ಸಾಂಸ್ಕೃತಿಕ ಜವಾಬ್ದಾರಿಯನ್ನು ಜನತೆ, ವ್ಯವಸ್ಥೆ , ಸರ್ಕಾರಗಳು ಅರಿಯಬೇಕು. ಇಲ್ಲವಾ ದರೆ ಭವಿಷ್ಯತ್ತಿನ ಭದ್ರತೆಯ ಬಗೆಗೆ ಕನಸುಕಟ್ಟುವುದು ಸಾಧ್ಯವಾಗುವುದಿಲ್ಲ. ಬದುಕಿನ ಬಗೆಗಿನ ಕಾಳಜಿ, ಭದ್ರತೆ, ಭವಿಷ್ಯದ ಕುರಿತಾಗಿ ಆಶಾವಾದಗಳನ್ನು ಅರಳಿಸುವ ಕೆಲಸ ವಾದಾಗ ಮಾತ್ರ ಇದು ಸಾಧ್ಯವಾಗಬಹುದು.